ವಿಜಯ್ ಹಜಾರೆ ಟ್ರೋಫಿ: ಕರ್ನಾಟಕ ತಂಡಕ್ಕೆ ಮರಳಿದ ಕರುಣ್

ಬೆಂಗಳೂರು, ಸೆಪ್ಟೆಂಬರ್ 15: 2018-19ನೇ ಸಾಲಿನ ವಿಜಯ್ ಹಜಾರೆ ಟ್ರೋಫಿಯು ಸೆಪ್ಟೆಂಬರ್ 20ರಿಂದ ಆರಂಭವಾಗಲಿದೆ. ವೇಗಿ ವಿನಯ್ ಕುಮಾರ್ ಅವರು ನಾಯಕರಾಗಿ ಆಯ್ಕೆಯಾಗಿದ್ದಾರೆ.
ಮುಂಬೈ, ಬರೋಡಾ, ರೈಲ್ವೇಸ್, ವಿದರ್ಭ, ಪಂಜಾಬ್, ಹಿಮಾಚಲ ಪ್ರದೇಶ, ಗೋವಾ ಹಾಗೂ ಮಹಾರಾಷ್ಟ್ರ ಇರುವ ಗುಂಪಿನಲ್ಲಿ ಕರ್ನಾಟಕ ತಂಡವಿದೆ
ಸಿಎಂ ಗೌತಮ್ ಹಾಗೂ ಶರತ್ ಬಿ. ಆರ್ ಇಬ್ಬರು ವಿಕೆಟ್ ಕೀಪರ್ ಗಳನ್ನು ತಂಡ ಹೊಂದಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಒಂದು ಪಂದ್ಯವನ್ನು ಆಡುವ ಅವಕಾಶ ಸಿಗದೆ ವಾಪಸ್ ಬಂದಿರುವ ಕರುಣ್ ನಾಯರ್ ಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ.
ಆದರೆ, ಏಷ್ಯಾಕಪ್ ಆಡುವ ಟೀಂ ಇಂಡಿಯಾಕ್ಕೆ ಆಯ್ಕೆಯಾಗಿರುವ ಕೆಎಲ್ ರಾಹುಲ್ ಹಾಗೂ ಮನೀಶ್ ಪಾಂಡೆ ಅವರನ್ನು ತಂಡದ ಆಯ್ಕೆ ಸಂದರ್ಭದಲ್ಲಿ ಪರಿಗಣಿಸಲಾಗಿಲ್ಲ. ಬೆಂಗಳೂರಿನ ಹೊರ ವಲಯದ ಆಲೂರು ಮೈದಾನದಲ್ಲಿ ಪಂದ್ಯಾವಳಿಗಳು ನಡೆಯಲಿವೆ.
ಕರ್ನಾಟಕ ಮೂಲದ ರಾಬಿನ್ ಉತ್ತಪ್ಪ (ಸೌರಾಷ್ಟ್ರ), ಅಮಿತ್ ವರ್ಮಾ (ಗೋವಾ), ಕೆಬಿ ಪವನ್ (ನಾಗಾಲ್ಯಾಂಡ್), ಅಬ್ರಾಬ್ ಖಾಜಿ(ನಾಗಾಲ್ಯಾಂಡ್) ಅವರು ಬೇರೆ ರಾಜ್ಯಗಳ ಪರ ಆಡಲಿದ್ದಾರೆ. ಕರ್ನಾಟಕದ ಮಾಜಿ ಆಟಗಾರ ಪಿವಿ ಶಶಿಕಾಂತ್ ಮಿಜೋರಾಮ್ ತಂಡದ ಕೋಚ್ ಆಗಿದ್ದಾರೆ.
ಕರ್ನಾಟಕ ತಂಡ: ಆರ್ ವಿನಯ್ ಕುಮಾರ್ (ನಾಯಕ), ಸಿಎಂ ಗೌತಮ್ (ವಿಕೆಟ್ ಕೀಪರ್), ಶರತ್ ಬಿ. ಆರ್ (ವಿಕೆಟ್ ಕೀಪರ್), ಕರುಣ್ ನಾಯರ್, ಪವನ್ ದೇಶಪಾಂಡೆ, ಸಮರ್ಥ್ ಆರ್, ಸ್ಟುವರ್ಟ್ ಬಿನ್ನಿ, ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ಪ್ರಸಿಧ್ ಕೃಷ್ಣ, ಅಭಿಮನ್ಯು ಮಿಥುನ್, ಅಭಿಶೇಕ್ ರೆಡ್ಡಿ, ನವೀನ್ ಎಂಜಿ, ಜೆ ಸುಚೀತ್, ಮಾಯಾಂಕ್ ಅಗರವಾಲ್
ಕೋಚ್ : ಶ್ರೀನಾಥ್ ಅರವಿಂದ್ ಹಾಗೂ ಯರೇಗೌಡ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications