ಧೋನಿ ರೀತಿ ಗನ್ ಸೆಲೆಬ್ರೇಷನ್ ಮಾಡಿದ Karthik Sharma ಯಾರು?
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ರೋಚಕ ಘಟ್ಟದತ್ತ ಮುಖಮಾಡಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಭರ್ಜರಿ ಪ್ರದರ್ಶನ ನೀಡುತ್ತಿದೆ. ಇನ್ನು ದಾಖಲೆಯ ಐದು ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಸಹ ಗೆಲುವಿನ ಟ್ರ್ಯಾಕ್‌ಗೆ ಮರಳಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಅಮೋಘ ಪ್ರದರ್ಶನ ನೀಡಿ ಅಬ್ಬರಿಸಿದೆ. ಈ ವೇಳೆ ಚೆನ್ನೈ ತಂಡದ ಪರ 20 ವರ್ಷದ ಯುವ ಆಟಗಾರ ಕಾರ್ತಿಕ್ ಶರ್ಮಾ ಭರ್ಜರಿ ಪ್ರದರ್ಶನ ನೀಡಿ ಅಬ್ಬರಿಸಿದರು. ಇವರು 40 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 4 ಬೌಂಡರಿಗಳ ಸಹಾಯದಿಂದ 54 ರನ್ ಗಳಿಸಿದರು.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಭಟ ನಡೆಸಿರುವ ಕಾರ್ತಿಕ್ ಶರ್ಮಾ ತಮ್ಮನ್ನು ತಂಡಕ್ಕೆ ಆಯ್ಕೆ ಮಾಡಿದ್ದನ್ನು ಸಮರ್ಥಿಸಿಕೊಂಡರು. ಇವರು ಈ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಬಳಿಕ ಧೋನಿ ರೀತಿ ಗನ್ ಸೆಲೆಬ್ರೇಷನ್ ಮಾಡಿದರು. ಶ್ರೀಲಂಕಾ ವಿರುದ್ಧದ 183 ರನ್ ಇನ್ನಿಂಗ್ಸ್ ಆಡಿದ್ದ ಎಂಎಸ್ ಧೋನಿ ಈ ಪಂದ್ಯದಲ್ಲಿ ಶತಕ ಬಾರಿಸಿದ ಬಳಿಕ ಗನ್ ಸೆಲೆಬ್ರೇಷನ್ ಮಾಡಿದ್ದರು.

ಐಪಿಎಲ್ 2026 ರಲ್ಲಿ ಎಂಎಸ್ ಧೋನಿ ಜೊತೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿರುವ 20 ವರ್ಷದ ಕಾರ್ತಿಕ್ ಶರ್ಮಾ ಶನಿವಾರ ಧೋನಿ ಶೈಲಿಯಲ್ಲಿ ಸೆಲೆಬ್ರೇಷನ್ ಮಾಡಿ ಬೀಗಿದರು. ಈ ಸೆಲೆಬ್ರೇಷನ್ ಮಾಡಬೇಕು ಎಂದು ಯೋಚಿಸಿದ್ದಾಗ ಕಾರ್ತಿಕ್ ಶರ್ಮಾ ಬಹಿರಂಗಪಡಿಸಿದ್ದಾರೆ.
ಮುಂಬೈ ವಿರುದ್ಧದ ಪಂದ್ಯದಲ್ಲಿ ಕಾರ್ತಿಕ್ ಶರ್ಮಾ ಅರ್ಧಶತಕ ಬಾರಿಸಿದ ಬಳಿಕ ಇದೇ ರೀತಿ ಸಂಭ್ರಮಿಸುವುದಾಗಿ ಪ್ಲ್ಯಾನ್ ಮಾಡಿಕೊಂಡಿದ್ದರು. "ಇದು ನನ್ನ ಮೊದಲ ಐಪಿಎಲ್ ಅರ್ಧಶತಕ. ಇಂದು ನಾನು ರನ್ ಗಳಿಸಿದರೆ, ನಾನು ಹೀಗೆ ಸಂಭ್ರಮಾಚರಣೆ ಮಾಡುತ್ತೇನೆಂದು ಮೊದಲೇ ನಿರ್ಧರಿಸಿದ್ದೆ. ಕೊನೆಯವರೆಗೂ ಕ್ರೀಸ್‌ನಲ್ಲಿದ್ದು ಪಂದ್ಯವನ್ನು ಮುಗಿಸಬೇಕು ಎಂದು ಯೋಚಿಸುತ್ತಿದ್ದೆ ಎಂದು ಅವರು ಪಂದ್ಯದ ಬಳಿಕ ತಿಳಿಸಿದ್ದಾರೆ.
ಕಾರ್ತಿಕ್ ಶರ್ಮಾ ಯಾರು?
ರಾಜಸ್ಥಾನ ಮೂಲದ 20 ವರ್ಷ ವಿಕೆಟ್ ಕೀಪರ್ ಬ್ಯಾಟರ್ ಕಾರ್ತಿಕ್ ಶರ್ಮಾ ಐಪಿಎಲ್ ಹರಾಜು ಅಂಗಳಕ್ಕೆ ಇಳಿದಾಗಲೇ ಎಲ್ಲರ ಚಿತ್ತ ಕದ್ದ ಆಟಗಾರ. ಇವರ ಮೂಲ ಬೆಲೆ 30 ಲಕ್ಷ ಆಗಿತ್ತು. ಇವರನ್ನು ಕೊಳ್ಳಲು ಫ್ರಾಂಚೈಸಿಗಳು ಮುಗಿಬಿದ್ದಿದ್ದವು. ಕೊನೆಗೆ ಚೆನ್ನೈ ತಂಡ 14.20 ಕೋಟಿ ರೂ. ನೀಡಿ ತಂಡಕ್ಕೆ ಸೇರಿಸಿಕೊಂಡಿತು. ಇವರು ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ರಾಜಸ್ಥಾನ್ ಪರ ಆಡಿದ 5 ಪಂದ್ಯಗಳಲ್ಲಿ 133 ರನ್ ಸಿಡಿಸಿದ್ದಾರೆ. ಈ ವೇಳೆ ಇವರ ಸ್ಟ್ರೈಕ್ ರೇಟ್ 160 ಆಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications