ಕಾವ್ಯಾ ಮಾರನ್ ಮಾಲಿಕತ್ವದ ಸನ್‌ರೈಸರ್ಸ್ ತಂಡದ ಪಾಲಾದ ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್
ದಿ ಹಂಡ್ರೆಡ್ ಲೀಗ್‌ನ ಆಟಗಾರರ ಹರಾಜು ನಡೆಯುತ್ತಿದೆ. ಈ ಹರಾಜಿನಲ್ಲಿ ಎಲ್ಲರ ಕಣ್ಣುಗಳು ಸ್ಟಾರ್ ಆಟಗಾರರ ಮೇಲೆ ನೆಟ್ಟಿರಲಿವೆ. ಐಪಿಎಲ್‌ನಲ್ಲಿ ತಂಡಗಳನ್ನು ಹೊಂದಿರುವ ತಂಡಗಳು ಈ ಲೀಗ್‌ನಲ್ಲಿ ತಂಡವನ್ನು ಹೊಂದಿವೆ. ಅದರಲ್ಲೂ ಸನ್‌ರೈಸರ್ಸ್ ಹೈದರಾಬಾದ್ ಈ ಲೀಗ್‌ನಲ್ಲಿ ಸನ್‌ರೈಸರ್ಸ್ ಲೀಡ್ಸ್ ತಂಡವನ್ನು ಹೊಂದಿದೆ. ಈ ತಂಡ ಪಾಕಿಸ್ತಾನದ ಸ್ಪಿನ್ ಬೌಲರ್ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿದ್ದು, ಈಗ ಚರ್ಚೆಯ ವಿಷಯವಾಗಿದೆ.
ಕಾವ್ಯಾ ಮಾರನ್ ಅವರ ಮಾಲೀಕತ್ವದ ತಂಡ ಅಬ್ರಾರ್ ಅಹ್ಮದ್ ಅವರಿಗೆ ಹರಾಜಿನಲ್ಲಿ ಭಾರೀ ಮೊತ್ತವನ್ನು ನೀಡಿ ಖರೀದಿ ಮಾಡಿದೆ. ಈ ಮೂಲಕ ಇವರು ಭಾರತೀಯ ತಂಡಗಳ ಮೇಲಿರುವ ಷರತ್ತನ್ನು ಬ್ರೇಕ್ ಮಾಡಿದ್ದಾರೆ. ಷರತ್ತಿನ ಪ್ರಕಾರ ವಿಶ್ವದ ಯಾವುದೇ ಲೀಗ್‌ನಲ್ಲಿ ತಂಡವನ್ನು ಹೊಂದಿರುವ ಭಾರತೀಯ ಮಾಲೀಕರು ಪಾಕಿಸ್ತಾನ ಆಟಗಾರನನ್ನು ಸಹಿ ಮಾಡಲು ನಿರಾಕರಿಸುತ್ತದೆ.

ಹರಾಜು ಅಂಗಳಕ್ಕೆ ಅಬ್ರಾರ್ ಅಹ್ಮದ್ ಅವರ ಹೆಸರು ಬಂದಾಗ ಮಾಲೀಕರು ಇವರನ್ನು ಕೊಳ್ಳಲು ಮುಗಿಬಿದ್ದರು. ಇವರು 75 ಸಾವಿರ ಪೌಂಡ್ ಮೂಲ ಬೆಲೆಯೊಂದಿಗೆ ಹರಾಜು ಅಂಗಳ ಪ್ರವೇಶಿಸಿದರು. ಸನ್‌ರೈಸರ್ಸ್ ಮಾಲೀಕರು ಅಬ್ರಾರ್‌ಗೆ ಬಿಡ್ ಮಾಡಲು ಶುರು ಮಾಡಿದರು. ಈ ತಂಡಕ್ಕೆ ಟ್ರೆಂಟ್ ರಾಕೆಟ್ಸ್ ಸವಾಲು ಹಾಕಿತು. ಇವರನ್ನು ಕೊಳ್ಳಲು ಕಾವ್ಯಾ ಕೋಚ್ ಡೇನಿಯಲ್ ವೆಟ್ಟೋರಿ ಅವರೊಂದಿಗೆ ಚರ್ಚೆ ನಡೆಸಿದರು. ಬಳಿಕ ಹಣವನ್ನು ಹೂಡಿದರು.
ಅಬ್ರಾರ್ ಅಹ್ಮದ್ ಸನ್ ಪಾಲು
ಟೈಯರ್ 2 ಸ್ಪಿನ್ನರ್‌ಗಳ ಆಯ್ಕೆಯ ಕೊನೆಯಲ್ಲಿ ಅಬ್ರಾರ್ ಅಹ್ಮದ್ ಅವರ ಹೆಸರು ಹರಾಜಿನ ಅಂಗಳಕ್ಕೆ ಬಂದಿತು. ಈ ವೇಳೆ ಸನ್‌ರೈಸರ್ಸ್ ತಂಡ ಟ್ರೆಂಟ್ ರಾಕೆಟ್ಸ್‌ಗಿಂತ ಹೆಚ್ಚಿನ ಬಿಡ್ ಮಾಡಿತು. ಅಲ್ಲದೆ ಸುಮಾರು 2.34 ಕೋಟಿ ರೂ. ಹೂಡಿಕೆ ಮಾಡಿ ಈ ಬಿಡ್ ಗೆದ್ದಿತು. ಇದಕ್ಕೂ ಮೊದಲು ಹರಾಜಿನಲ್ಲಿ ಸೈಯಮ್ ಅಯೂಬ್, ಹ್ಯಾರೀಸ್ ರೌಫ್, ಶಾದಾಬ್ ಖಾನ್ ಅವರ ಹೆಸರುಗಳು ಸಹ ಕೇಳಿ ಬಂದವು. ಆದರೆ ಇವರನ್ನು ಕೊಳ್ಳಲು ಮಾಲೀಕರು ಮನಸ್ಸು ಮಾಡಲಿಲ್ಲ.

ಇದಕ್ಕೂ ಮೊದಲು, ಪಾಕಿಸ್ತಾನದ ಮಿಸ್ಟರಿ ಸ್ಪಿನ್ನರ್ ಉಸ್ಮಾನ್ ತಾರಿಕ್ ಹರಾಜಿನಲ್ಲಿ ಮಾರಾಟವಾದ ಮೊದಲ ಪಾಕ್ ಆಟಗಾರರಾದರು. ಅವರನ್ನು ಬರ್ಮಿಂಗ್ಹ್ಯಾಮ್ ಫೀನಿಕ್ಸ್ ಸುಮಾರು ₹1.72 ಕೋಟಿಗೆ ಖರೀದಿಸಿತು. ಇವರು ಇತ್ತೀಚಿಗೆ ನಡೆದ ಟಿ20 ವಿಶ್ವಕಪ್‌ನಲ್ಲಿ ತಮ್ಮ ಬೌಲಿಂಗ್ ಶೈಲಿಯಿಂದಲೇ ಸದ್ದು ಮಾಡಿದ್ದ ಆಟಗಾರ.
ಸುಳ್ಳಾದ ಇಂಗ್ಲೀಷ್ ಮಾಧ್ಯಮಗಳ ವರದಿ
ಹರಾಜಿನ ಮೊದಲು, ಐಪಿಎಲ್ ತಂಡಗಳನ್ನು ಹೊಂದಿರುವ ಫ್ರಾಂಚೈಸಿ ಮಾಲೀಕರು ಪಾಕಿಸ್ತಾನಿ ಆಟಗಾರರನ್ನು ಖರೀದಿಸುವುದಿಲ್ಲ ಎಂದು ಇಂಗ್ಲೀಷ್ ಮಾಧ್ಯಮಗಳು ವರದಿ ಮಾಡಿದ್ದವು. ದಿ ಹಂಡ್ರೆಡ್‌ನಲ್ಲಿರುವ ಎಂಟು ತಂಡಗಳಲ್ಲಿ ನಾಲ್ಕು ಐಪಿಎಲ್‌ನೊಂದಿಗೆ ಸಂಬಂಧ ಹೊಂದಿರುವ ಮಾಲೀಕರ ಒಡೆತನದಲ್ಲಿವೆ. ಅವುಗಳಲ್ಲಿ ಎಂಐ ಲಂಡನ್, ಸನ್‌ರೈಸರ್ಸ್ ಲೀಡ್ಸ್, ಸದರ್ನ್ ಬ್ರೇವ್ ಮತ್ತು ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಸೇರಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications