For Quick Alerts
ALLOW NOTIFICATIONS  
For Daily Alerts
 

Kedar Jadhav: ರಾಜಕೀಯ ರಂಗಕ್ಕೆ ಕಾಲಿಟ್ಟ ಮಾಹಿ ಶಿಷ್ಯ: ಕೇಸರಿ ಪಡೆ ಪರ ಮಾಡ್ತಾರಾ "ಜಾದು"

ಕ್ರಿಕೆಟ್‌ ಆಟಗಾರರು ತಮ್ಮ ವೃತ್ತಿಗೆ ಗುಡ್‌ ಬಾಯ್‌ ಹೇಳಿದ ಮೇಲೆ ಕ್ರಿಕೆಟ್‌ಗೆ ಸಂಬಂಧಿಸಿದ ಕಾರ್ಯಗಳಲ್ಲಿ ತೊಡಗಿಸಕೊಳ್ಳುತ್ತಾರೆ. ಇನ್ನು ಹಲವರು ಸಾಮಾಜ ಮುಖಿ ಕಾರ್ಯಗಳತ್ತ ಮುಖ ಮಾಡುತ್ತಾರೆ. ಆದರೆ ರಾಜಕೀಯ ಎಂಬ ಚದುರಂಗದ ಆಟಕ್ಕೆ ಕೆಲವೇ ಕೆಲವು ಆಟಗಾರರು ಪ್ರವೇಶ ಪಡೆಯುತ್ತಾರೆ. ಈ ಲೀಸ್ಟ್‌ಗೆ ಈ ಇನ್ನೊಂದು ಹೆಸರು ಮಂಗಳವಾರ ಸೇರಿಕೊಂಡಿದೆ. ಮೈದಾನದಲ್ಲಿ ತಮ್ಮ ಧಮಾಕೆದಾರ್‌ ಆಲ್‌ರೌಂಡರ್‌ ಪ್ರದರ್ಶನದಿಂದ ಅಭಿಮಾನಿಗಳ ಮನ ಗೆದ್ದಿದ್ದ ಕ್ರಿಕೆಟ್‌ ಆಟಗಾರ ಕೇದಾರ್ ಜಾದವ್ ಇನ್ನು ರಾಜಕಾರಣಿ.

ತಮ್ಮ ವಿಶಿಷ್ಠ ಬೌಲಿಂಗ್‌ ಶೈಲಿಯಿಂದಲೇ ಹೆಸರುವಾಸಿಯಾಗಿದ್ದ ಪ್ಲೇಯರ್‌ ಈಗ ಬಿಜೆಪಿ ಪಕ್ಷ ಸೇರಿಕೊಂಡಿದ್ದಾರೆ. ತಮ್ಮ 40ನೇ ವಯಸ್ಸಿನಲ್ಲಿ ಇವರು ರಾಜಕೀಯ ರಂಗ ಪ್ರವೇಶಿಸಿದ್ದರು. ಭಾರತದ ಪರ ಇವರು 2014 ಶ್ರೀಲಂಕಾ ಪರ ಪದಾರ್ಪಣೆ ಮಾಡಿದ್ದರು. ಇನ್ನು ಇವರು ಭಾರತದ ಪರ ತಮ್ಮ ಕೊನೆಯ ಪಂದ್ಯವನ್ನು ಆಂಕ್ಲೆಡ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಿದ್ದರು.

Kedar Jadhav Joins BJP Will the Mahi Shishya Spin Political Magic for the Saffron Party

ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇದಾರ್ ಜಾದವ್ ಬಿಜೆಪಿ ಪಕ್ಷವನ್ನು ಸೇರಿಕೊಂಡರು. ಈ ವೇಳೆ ಮಹಾರಾಷ್ಟ್ರ ಸಚಿವ ಮತ್ತು ರಾಜ್ಯ ಬಿಜೆಪಿ ಮುಖ್ಯಸ್ಥ ಚಂದ್ರಶೇಖರ್ ಬವಾಂಕುಲೆ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದರು. ಚಂದ್ರಶೇಖರ್ ಬವಾಂಕುಲೆ ಹಾಜರಿದ್ದರು. ಅಲ್ಲದೆ ಪಕ್ಷದ ಧ್ವಜವನ್ನು ನೀಡಿ ಬರಮಾಡಿಕೊಂಡರು.

ಪಕ್ಷಕ್ಕೆ ಸೇರುತ್ತಿದ್ದಂತೆ ಮಾತನಾಡಿದ ಮಾಜಿ ಕ್ರಿಕೆಟಿಗ ಕೇದಾರ್ ಮಾತನಾಡಿ, 2014ರಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಮಾಡಿದ ಅಭಿವೃದ್ಧಿ ಹಾಗೂ ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನಿವೇಸ್‌ ಮಾಡಿದ ಕಾರ್ಯ ನನಗೆ ಇಷ್ಟವಾಗಿತು. ಹಿರಿಯರ ಹೆಜ್ಜೆಗಳನ್ನು ಅನುಸರಿಸುವುದು ಮತ್ತು ಬಿಜೆಪಿಗೆ ನನ್ನಿಂದ ಸಾಧ್ಯವಾದಷ್ಟು ಸಣ್ಣ ಕೊಡುಗೆಯನ್ನು ನೀಡುವುದು ನನ್ನ ಗುರಿ. ನನಗೆ ಯಾವುದೇ ಜವಾಬ್ದಾರಿ ಸಿಕ್ಕರೂ, ಅದನ್ನು ಸಂಪೂರ್ಣ ಪ್ರಾಮಾಣಿಕತೆಯಿಂದ ಪೂರೈಸಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದ್ದಾರೆ.

Kedar Jadhav Joins BJP Will the Mahi Shishya Spin Political Magic for the Saffron Party

ಕೇದಾರ್ ಸಾಧನೆ

ಕೇದಾರ್ ಜಾದವ್ ಭಾರತದ ಪರ 73 ಏಕದಿನ ಮತ್ತು 9 ಟಿ20 ಅಂತಾರಾಷ್ಟ್ರೀಯ ಪಂದ್ಯ ಆಡಿದ್ದಾರೆ. ಈ ಅವಧಿಯಲ್ಲಿ, 2 ಶತಕ ಹಾಗೂ 6 ಅರ್ಧಶತಕ ಸೇರಿದಂತೆ 1389 ರನ್‌ ಸಿಡಿಸಿದ್ದಾರೆ. ಇನ್ನು ಇವರು 9 ಟಿ20 ಪಂದ್ಯಗಳಲ್ಲಿ ಕೇವಲ 122 ರನ್ ಗಳಿಸಿದ್ದಾರೆ. ಇವರು ತಮ್ಮ ವಿಶಿಷ್ಠ ಬೌಲಿಂಗ್‌ ಶೈಲಿಯಿಂದಲೇ ಹೆಸರುವಾಸಿ. ಇವರು ಲಸಿತ್ ಮಾಲಿಂಗ ಅವರ ಬೌಲಿಂಗ್ ಶೈಲಿಯಲ್ಲಿ ಸ್ಪಿನ್ ಬೌಲಿಂಗ್ ಮಾಡುತ್ತಿದ್ದರು. ಇವರ ಬುಟ್ಟಿಯಲ್ಲಿ 27 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಕೇದಾರ್ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದ್ದಾರೆ. ಇವರು ಐಪಿಎಲ್‌ನಲ್ಲಿ ಆಡಿದ 95 ಪಂದ್ಯಗಳಲ್ಲಿ 123.17 ಸ್ಟ್ರೈಕ್ ರೇಟ್‌ನಲ್ಲಿ 1196 ರನ್ ಗಳಿಸಿದ್ದಾರೆ.

ಕೇದಾರ್‌ ಜಾಧವ್ ಪುಣೆಯಲ್ಲಿ ತಮ್ಮ ವೃತ್ತಿ ಜೀವನದ ಬಿಗ್ ಇನಿಂಗ್ಸ್ ಕಟ್ಟಿದ್ದರು. ಈ ಪಂದ್ಯದಲ್ಲಿ ಇಂಗ್ಲೆಂಡ್‌ 351 ರನ್‌ ಗುರಿಯನ್ನು ನೀಡಿತು. ಈ ಪಂದ್ಯದಲ್ಲಿ ಕೇದಾರ್‌ ಜಾದವ್‌ 76 ಎಸೆತಗಳಲ್ಲಿ 158 ಸ್ಟ್ರೈಕ್ ರೇಟ್‌ನಲ್ಲಿ 120 ರನ್ ಗಳಿಸಿದ್ದರು. ಈ ಇನ್ನಿಂಗ್ಸ್‌ನ ಸಹಾಯದಿಂದ, ಭಾರತ ಇನ್ನೂ 9 ಎಸೆತಗಳು ಬಾಕಿ ಇರುವಾಗಲೇ ಜಯಗಳಿಸಿತು.

Story first published: Tuesday, April 8, 2025, 18:26 [IST]
Other articles published on Apr 8, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+