ಭಾರತ ವಿರುದ್ಧದ ದ್ವಿತೀಯ ಟೆಸ್ಟ್‌ಗೆ ತಂಡ ಪ್ರಕಟಿಸಿದ ವೆಸ್ಟ್ ಇಂಡೀಸ್

ಕಿಂಗ್ಸ್‌ಟನ್, ಆಗಸ್ಟ್ 29: ಭಾರತ ವಿರುದ್ಧದ ದ್ವಿತೀಯ ಟೆಸ್ಟ್‌ಗಾಗಿ ವೆಸ್ಟ್ ಇಂಡೀಸ್, 13 ಜನರ ತಂಡ ಪ್ರಕಟಿಸಿದೆ. ಗಾಯದ ಕಾರಣ ಮೊದಲ ಟೆಸ್ಟ್‌ನಿಂದ ಹೊರಗುಳಿದಿದ್ದ ವೇಗಿ, ಬ್ಯಾಟ್ ಕೂಡ ಬೀಸಬಲ್ಲ ಕೀಮೋ ಪೌಲ್ ಚೇತರಿಸಿಕೊಂಡಿದ್ದು, ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಜಮೈಕಾದ ಕಿಂಗ್ಸ್‌ಟನ್‌ನ ಸಬೀನಾ ಪಾರ್ಕ್ ಸ್ಟೇಡಿಯಂನಲ್ಲಿ ಆಗಸ್ಟ್ 30ರಂದು ಪಂದ್ಯ ನಡೆಯಲಿದೆ.
ಮೊದಲ ಟೆಸ್ಟ್‌ನಲ್ಲಿ ಕೀಮೋ ಪೌಲ್ ಬದಲು ಮತ್ತೊಬ್ಬ ವೇಗಿ ಮಿಗುಯೆಲ್ ಕಮ್ಮಿನ್ಸ್ ಆಡಿದ್ದರು. ಆದರೆ ಕಮ್ಮಿನ್ಸ್‌ಗೆ ವಿಕೆಟ್ ಲಭಿಸಿರಲಿಲ್ಲ. ಈ ಪಂದ್ಯವನ್ನು ಟೀಮ್ ಇಂಡಿಯಾ 318 ರನ್‌ಗಳಿಂದ ಗೆದ್ದಿತ್ತು. 21ರ ಹರೆಯದ ಪೌಲ್ 3 ಟೆಸ್ಟ್ ಪಂದ್ಯಗಳಲ್ಲಿ 6 ವಿಕೆಟ್ ಪಡೆದಿದ್ದಾರೆ. 20 ಪ್ರಥಮದರ್ಜೆ ಪಂದ್ಯಗಳಲ್ಲಿ 80 ವಿಕೆಟ್ ಸಾಧನೆ ಹೊಂದಿದ್ದಾರೆ.
ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ಶೇನ್ ಡೌರಿಚ್ ದ್ವಿತೀಯ ಟೆಸ್ಟ್‌ಗೆ ಅಲಭ್ಯರಾಗಿರುವುದನ್ನೂ ವೆಸ್ಟ್ ಇಂಡೀಸ್ ಖಾತರಿ ಪಡಿಸಿದೆ. ಪಾದದ ಗಾಯಕ್ಕೀಡಾಗಿರುವ ಡೌರಿಚ್ ಪಂದ್ಯವನ್ನಾಡುತ್ತಿಲ್ಲ. ಜಹ್ಮರ್ ಹ್ಯಾಮಿಲ್ಟನ್ ಬ್ಯಾಕಪ್ ವಿಕೆಟ್ ಕೀಪರ್ ಜವಾಬ್ದಾರಿ ಹೊತ್ತುಕೊಳ್ಳಲಿದ್ದಾರೆ.
ವೆಸ್ಟ್ ಇಂಡೀಸ್ ತಂಡ: ಜೇಸನ್ ಹೋಲ್ಡರ್ (ಸಿ), ಕ್ರೇಗ್ ಬ್ರಾಥ್‌ವೇಟ್, ಡ್ಯಾರೆನ್ ಬ್ರಾವೋ, ಶಮರ್ ಬ್ರೂಕ್ಸ್, ಜಾನ್ ಕ್ಯಾಂಪ್‌ಬೆಲ್, ರೋಸ್ಟನ್ ಚೇಸ್, ರಾಹಕೀಮ್ ಕಾರ್ನ್‌ವಾಲ್, ಶಾನನ್ ಗೇಬ್ರಿಯಲ್, ಜಹ್ಮರ್ ಹ್ಯಾಮಿಲ್ಟನ್ (ವಿಕೆ), ಶಿಮ್ರಾನ್ ಹೆಟ್ಮೈರ್, ಶೈ ಹೋಪ್ (ವಿಕೆ), ಕೀಮೋ ಪಾಲ್, ಕೆಮರ್ ರೋಚ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications