ತನ್ನನ್ನು ಬೆಂಬಲಿಸಿದ ಬಾಬರ್ ಅಜಮ್‌ಗೆ ಧನ್ಯವಾದ ತಿಳಿಸಿ ಶುಭಕೋರಿದ ವಿರಾಟ್ ಕೊಹ್ಲಿ

ಹಲವು ದಿನಗಳಿಂದ ಕಳಪೆ ಫಾರ್ಮ್ ಕಾರಣದಿಂದಾಗಿ ಸಾಕಷ್ಟು ಟ್ರೋಲ್ ಹಾಗೂ ಟೀಕೆಗಳಿಗೆ ಒಳಗಾಗಿರುವ ವಿರಾಟ್ ಕೊಹ್ಲಿ ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಸರಣಿಗಳಲ್ಲಿಯೂ ಸಹ ತನ್ನ ಕೆಟ್ಟ ಫಾರ್ಮ್ ಮುಂದುವರಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ಮೊದಲಿಗೆ ನಡೆದ ಟಿ ಟ್ವೆಂಟಿ ಸರಣಿಯ ಪಂದ್ಯಗಳಲ್ಲಿ ಮುಗ್ಗರಿಸಿದ್ದ ವಿರಾಟ್ ಕೊಹ್ಲಿ ತೊಡೆಸಂಧು ಗಾಯದಿಂದಾಗಿ ಇಂಗ್ಲೆಂಡ್ ವಿರುದ್ಧದ ಪ್ರಥಮ ಏಕದಿನ ಪಂದ್ಯದಿಂದ ಹೊರಗುಳಿದಿದ್ದರು ಹಾಗೂ ಲಾರ್ಡ್ಸ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯಕ್ಕೆ ಮತ್ತೆ ತಂಡ ಸೇರಿಕೊಂಡರು.
ಆದರೆ ಈ ಪಂದ್ಯದಲ್ಲಿಯೂ ಸಹ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದ ವಿರಾಟ್ ಕೊಹ್ಲಿ 25 ಎಸೆತಗಳಲ್ಲಿ 15 ರನ್ ಕಲೆಹಾಕಿ ಔಟ್ ಆದರು. ಡೇವಿಡ್ ವಿಲ್ಲಿ ಎಸೆತದಲ್ಲಿ ವಿಕೆಟ್ ಕೀಪರ್ ಜೋಸ್ ಬಟ್ಲರ್ ಗೆ ಕ್ಯಾಚ್ ನೀಡುವ ಮುನ್ನ ವಿರಾಟ್ ಕೊಹ್ಲಿ 3 ಆಕರ್ಷಕ ಬೌಂಡರಿ ಸಿಡಿಸಿ ಉತ್ತಮ ಇನಿಂಗ್ಸ್ ಕಟ್ಟುವ ಭರವಸೆಯನ್ನು ಹುಟ್ಟುಹಾಕಿದ್ದರು. ಆದರೆ ಬೇಡದ ಎಸೆತಕ್ಕೆ ಬ್ಯಾಟ್ ಬೀಸಲು ಹೋದ ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿ ಮತ್ತೊಮ್ಮೆ ಕಳಪೆಯಾದರು. ಹೀಗೆ ಮತ್ತೊಮ್ಮೆ ಮುಗ್ಗರಿಸಿದ ವಿರಾಟ್ ಕೊಹ್ಲಿ ಕುರಿತು ಇದ್ದ ಟೀಕೆಗಳು ಈ ಇನಿಂಗ್ಸ್ ಮುಕ್ತಾಯದ ನಂತರ ಮತ್ತಷ್ಟು ಹೆಚ್ಚಾದವು. ಆದರೆ ಟೀಮ್ ಇಂಡಿಯಾದ ಬದ್ಧವೈರಿಯಾದ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಮಾತ್ರ ವಿರಾಟ್ ಕೊಹ್ಲಿಯ ಕುರಿತು ಸಹಾನುಭೂತಿಯಿಂದ ಪೋಸ್ಟ್ ಮಾಡುವ ಮೂಲಕ ಬೆಂಬಲವನ್ನು ಸೂಚಿಸಿದ್ದರು. ಇದೀಗ ಆ ಪೋಸ್ಟ್ ಕುರಿತು ವಿರಾಟ್ ಕೊಹ್ಲಿ ರಿಪ್ಲೈ ಮಾಡಿದ್ದು, ಧನ್ಯವಾದ ತಿಳಿಸಿದ್ದಾರೆ.

ಬಲವಾಗಿ ಇರಿ ಎಂದಿದ್ದ ಬಾಬರ್ ಅಜಮ್
ವಿರಾಟ್ ಕೊಹ್ಲಿ ಲಾರ್ಡ್ಸ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಔಟ್ ಆದ ಬಳಿಕ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ ಬಾಬರ್ ಅಜಮ್ ತಾನು ಮತ್ತು ವಿರಾಟ್ ಕೊಹ್ಲಿ ಜತೆಗಿರುವ ಚಿತ್ರವನ್ನು ಹಂಚಿಕೊಳ್ಳುವುದರ ಮೂಲಕ 'ಇದೂ ಕೂಡ ಹಾದುಹೋಗುತ್ತದೆ, ಬಲವಾಗಿ ಇರಿ' ಎಂದು ಬರೆದುಕೊಂಡಿದ್ದರು. ಈ ಮೂಲಕ ಕಳಪೆ ಫಾರ್ಮ್ ಎಂಬುದು ಕೂಡ ಹಾದುಹೋಗಲಿದೆ ದೃಢವಾಗಿ ಇರಿ ಎಂಬರ್ಥದಲ್ಲಿ ಬಾಬರ್ ಅಜಮ್ ವಿರಾಟ್ ಕೊಹ್ಲಿಯ ಬೆಂಬಲಕ್ಕೆ ನಿಂತಿದ್ದರು.
Thank you. Keep shining and rising. Wish you all the best 👏
— Virat Kohli (imVkohli) July 16, 2022
ಧನ್ಯವಾದ ತಿಳಿಸಿ ಶುಭಕೋರಿದ ಕೊಹ್ಲಿ
ಬಾಬರ್ ಅಜಮ್ ನೀಡಿದ್ದ ಈ ಬೆಂಬಲಕ್ಕೆ ಇದೀಗ ತಮ್ಮ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಪ್ರತಿಕ್ರಿಯಿಸಿರುವ ವಿರಾಟ್ ಕೊಹ್ಲಿ 'ಧನ್ಯವಾದಗಳು. ಹೀಗೆ ಮಿಂಚುತ್ತಿರಿ ಹಾಗೂ ಬೆಳೆಯುತ್ತಿರಿ. ನಿಮಗೆ ಶುಭ ಕೋರುತ್ತೇನೆ' ಎಂದು ಬರೆದುಕೊಂಡಿದ್ದಾರೆ. ಹೀಗೆ ವಿರಾಟ್ ಕೊಹ್ಲಿ ಬಾಬರ್ ಅಜಮ್ ಅವರ ಟ್ವೀಟ್ ಕುರಿತು ಪ್ರತಿಕ್ರಿಯಿಸಿದ ಬೆನ್ನಲ್ಲೇ ನೆಟ್ಟಿಗರು ಈ ಇಬ್ಬರ ನಡುವಿನ ಸ್ನೇಹ ಸಂಬಂಧಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿರಾಟ್ ಕೊಹ್ಲಿಗೆ ವ್ಯಕ್ತವಾಗುತ್ತಿದೆ ಹಲವರ ಬೆಂಬಲ
ಪದೇ ಪದೇ ಕಳಪೆ ಬ್ಯಾಟಿಂಗ್ ನಡೆಸಿ ವಿರಾಟ್ ಕೊಹ್ಲಿ ಕೆಟ್ಟ ಫಾರ್ಮ್ ಎದುರಿಸುತ್ತಿರುವ ಕಾರಣ ಹಿರಿಯ ಕ್ರಿಕೆಟಿಗ ಕಪಿಲ್ ದೇವ್ ಸೇರಿದಂತೆ ಹಲವಾರು ಮಂದಿ ಕೊಹ್ಲಿಯನ್ನು ತಂಡದಿಂದ ಕೈಬಿಟ್ಟು ಯುವ ಆಟಗಾರರಿಗೆ ಅವಕಾಶ ನೀಡಬೇಕೆಂದು ಹೇಳಿಕೆಗಳನ್ನು ನೀಡಿದ್ದಾರೆ. ಆದರೆ ಇದಕ್ಕಿಂತ ದೊಡ್ಡ ಮಟ್ಟದಲ್ಲಿ ಹಲವಾರು ಹಿರಿಯ ಕ್ರಿಕೆಟಿಗರು ಹಾಗೂ ವಿದೇಶಿ ಆಟಗಾರರು ವಿರಾಟ್ ಕೊಹ್ಲಿಯನ್ನು ಬೆಂಬಲಿಸಿದ್ದಾರೆ. ಕೆಟ್ಟ ಫಾರ್ಮ್ ಎಂಬುದು ಪ್ರತಿಯೊಬ್ಬ ಆಟಗಾರನಿಗೂ ಬಂದೇ ಬರುತ್ತದೆ, ವಿರಾಟ್ ಕೊಹ್ಲಿ ಕೂಡ ಈಗ ಅದೇ ಪರಿಸ್ಥಿತಿಯಲ್ಲಿದ್ದಾರೆ ಆದರೆ ಮುಂದಿನ ಪಂದ್ಯಗಳಲ್ಲಿ ಅವರು ಕಮ್ ಬ್ಯಾಕ್ ಮಾಡುವುದು ಖಚಿತ ಎಂದು ಹಲವು ಕ್ರಿಕೆಟಿಗರು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications