Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೆಸ್ಟ್ ವಿಶಿಷ್ಠ ದಾಖಲೆ ಬರೆದ ವೆಸ್ಟ್ ಇಂಡೀಸ್ ವೇಗಿ ಕೆಮರ್ ರೋಚ್

Kemar Roach becomes 9th Windies bowler to take 200 Test wickets

ಮ್ಯಾನ್ಚೆಸ್ಟರ್, ಜುಲೈ 25: ಇಂಗ್ಲೆಂಡ್ vs ವೆಸ್ಟ್ ಇಂಡೀಸ್ 3ನೇ ಟೆಸ್ಟ್‌ನಲ್ಲಿ ವಿಂಡೀಸ್ ವೇಗಿ ಕೆಮರ್ ರೋಚ್ ವಿಶೇಷ ದಾಖಲೆ ನಿರ್ಮಿಸಿದ್ದಾರೆ. 1994ರಲ್ಲಿ ಕರ್ಟ್ಲಿ ಆ್ಯಂಬ್ರೋಸ್ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್ ಪಡೆದ ವೆಸ್ಟ್ ಇಂಡೀಸ್‌ನ ಮೊದಲ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ.

ಶನಿವಾರ (ಜುಲೈ 25) ಮ್ಯಾನ್ಚೆಸ್ಟರ್‌ನ ಓಲ್ಡ್ ಟಾಫರ್ಡ್ ಸ್ಟೇಡಿಯಂನಲ್ಲಿ ನಡೆದ 2ನೇ ದಿನದಾಟದಲ್ಲಿ ಕೆಮರ್ ರೋಚ್ ಈ ಸಾಧನೆ ಮಾಡಿದ್ದಾರೆ. ಇಂಗ್ಲೆಂಡ್‌ನ ಇನ್ನಿಂಗ್ಸ್‌ನ 91ನೇ ಓವರ್‌ನಲ್ಲಿ ಕ್ರಿಸ್ ವೋಕ್ಸ್ ವಿಕೆಟ್ ಮುರಿಯುವ ಮೂಲಕ ರೋಚ್ ಈ ಮೈಲಿಗಲ್ಲು ಸ್ಥಾಪಿಸಿದರು.

ಇಂಗ್ಲೆಂಡ್‌ vs ವೆಸ್ಟ್ ಇಂಡೀಸ್, 3ನೇ ಟೆಸ್ಟ್, Live ಸ್ಕೋರ್‌ಕಾರ್ಡ್

1
46755

ಅದಾಗಿ 92.4ನೇ ಓವರ್‌ನಲ್ಲಿ ಜೋಫ್ರಾ ಆರ್ಚರ್ ವಿಕೆಟ್ ಕೂಡ ಕೆಮರ್ ರೋಚ್‌ಗೆ ಲಭಿಸಿತು. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಡೊಮಿನಿಕ್ ಸಿಬ್ಲಿ, ಬೆನ್ ಸ್ಟೋಕ್ಸ್ ವಿಕೆಟ್‌ಗಳೂ ಸೇರಿ ಒಟ್ಟಿಗೆ 4 ವಿಕೆಟ್‌ಗಳು ರೋಚ್‌ ಮುರಿದರು. ಇದರೊಂದಿಗೆ 59 ಟೆಸ್ಟ್ ಪಂದ್ಯಗಳಲ್ಲಿ ರೋಚ್ 201 ವಿಕೆಟ್‌ಗಳನ್ನು ಪಡೆದಂತಾಗಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್‌ನಿಂದ ಜೋ ರೂಟ್ 17, ಬೆನ್ ಸ್ಟೋಕ್ಸ್ 20, ರೋರಿ ಬರ್ನ್ಸ್ 57, ಆಲ್ಲಿ ಪೋಪ್ 91, ಜೋಸ್ ಬಟ್ಲರ್ 67, ಡಾಮ್ ಬೆಸ್ 18, ಸ್ಟುವರ್ಟ್ ಬ್ರಾಡ್ 62 ರನ್ ಸೇರಿಸಿದರು. ಇಂಗ್ಲೆಂಡ್‌ 11.5 ಓವರ್‌ಗಳಲ್ಲಿ 369 ರನ್ ಬಾರಿಸಿ ಇನ್ನಿಂಗ್ಸ್‌ ಮುಗಿಸಿದೆ. ವೆಸ್ಟ್ ಇಂಡೀಸ್ ಈಗ ಮೊದಲ ಇನ್ನಿಂಗ್ಸ್‌ ಆಡುತ್ತಿದೆ.

Story first published: Saturday, July 25, 2020, 20:56 [IST]
Other articles published on Jul 25, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+