Dodda Ganesh: ಕೀನ್ಯಾ ಕ್ರಿಕೆಟ್ ತಂಡದ ಕೋಚ್ ಹುದ್ದೆಗೆ ಆಯ್ಕೆ ಆದ ಒಂದೇ ತಿಂಗಳಲ್ಲಿ ದೊಡ್ಡ ಗಣೇಶ್ ವಜಾ
ಕರ್ನಾಟಕದ ಸ್ಟಾರ್ ಬೌಲರ್ ದೊಡ್ಡ ಗಣೇಶ್ ಅವರು ಇತ್ತೀಚಿಗೆ ಕೀನ್ಯಾ ರಾಷ್ಟ್ರೀಯ ತಂಡದ ಕೋಚ್ ಆಗಿ ನೇಮಿಸಲಾಗಿತ್ತು. ಈ ಸುದ್ದಿ ಭಾರೀ ವೈರಲ್ ಆಗಿತ್ತು. ಇನ್ನು ಕೋಚ್ ಹುದ್ದೆಯನ್ನು ಅಲಂಕರಿಸಿದ ಒಂದೇ ತಿಂಗಳಲ್ಲಿ ದೊಡ್ಡ ಗಣೇಶ್ ಅವರು ಕೋಚ್ ಸ್ಥಾನದಿಂದ ವಜಾ ಆಗಿದ್ದಾರೆ.
ಇದೇ ಆಗಸ್ಟ್‌ನಲ್ಲಿ ದೊಡ್ಡ ಗಣೇಶ್ ಅವರು ಕೀನ್ಯಾ ತಂಡದ ಕೋಚ್ ಆಗಿ ನೇಮಿಸಲಾಗಿತ್ತು. ಅಲ್ಲದೆ ಇವರ ಅಧಿಕಾರ ಅವಧಿಯು ಒಂದು ವರ್ಷದ್ದಾಗಿದ್ದು, ಒಪ್ಪಂದಕ್ಕೆ ಗಣೇಶ್ ಸಹ ಸಹಿ ಹಾಕಿದ್ದರು. ಆದರೆ ಕೋಚ್ ಆಗಿ ಅವರು ತಮ್ಮ ಮೊದಲ ಪಂದ್ಯವಾಳಿಯನ್ನು ಆಡುವ ಮುನ್ನವೇ ಅವರನ್ನು ಕೋಚ್ ಸ್ಥಾನದಿಂದ ವಜಾಗೊಳಿಸಲಾಗಿದೆ. ದೊಡ್ಡ ಗಣೇಶ್ ಅವರನ್ನು ಕೋಚ್ ಸ್ಥಾನದಿಂದ ವಜಾ ಗೊಳಿಸಲು ನಿಖರವಾದ ಕಾರಣ ಏನು ಎಂಬುದು ಇನ್ನು ತಿಳಿದು ಬಂದಿಲ್ಲ.

ಕೀನ್ಯಾ ಮಹಿಳಾ ಕ್ರಿಕೆಟ್‌ನ ನಿರ್ದೇಶಕಿ ಪರ್ಲಿನ್ ಒಮಾಮಿ ಅವರು ಸಹಿ ಮಾಡಿರುವ ನಿರ್ಧಾರದಂತೆ ಕೋಚ್ ವಜಾವನ್ನು ಧೃಡಪಡಿಸಲಾಗಿದೆ. ಮೂಲಗಳ ಪ್ರಕಾರ, ನೇಮಕಾತಿ ಪ್ರಕ್ರಿಯೆಯಲ್ಲಿ ಕೆಲವು ಮಾರ್ಗಸೂಚಿಗಳನ್ನು ಅನುಸರಿಸದ ಕಾರಣ ಮಂಡಳಿಯು ಈ ನಿರ್ಧಾರವನ್ನು ಕೈಗೊಂಡಿದೆ ಎಂದು ತಿಳಿದು ಬಂದಿದೆ.
ದೊಡ್ಡ ಗಣೇಶ್ ಸಾಧನೆ
ಗಣೇಶ್ ಅವರು ಭಾರತದ ಪರ ಐದು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅಷ್ಟೇ ಅಲ್ಲದೆ ಕರ್ನಾಟಕ ರಣಜಿ ತಂಡವನ್ನು ಬಹು ವರ್ಷಗಳ ಕಾಲ ಮುನ್ನಡೆಸಿದ ಅನುಭವಿ. ಇವರು ದೇಶೀಯ ಕ್ರಿಕೆಟ್‌ನಲ್ಲಿ 493 ವಿಕೆಟ್ ಪಡೆದಿದ್ದು, 2548 ರನ್‌ಗಳನ್ನು ಬಾರಿಸಿದ್ದಾರೆ. ಇವರನ್ನು ಕೀನ್ಯಾ ತಂಡದ ಹೆಡ್ ಕೋಚ್ ಆಗಿ ಆಗಸ್ಟ್ 14 ರಂದು ನೇಮಿಸಲಾಗಿತ್ತು. ಅಲ್ಲದೇ ದೊಡ್ಡ ಗಣೇಶ್ ಅವರು ರಣಜಿ ತಂಡಗಳಿಗೂ ಕೋಚ್ ಮಾಡಿದ ಅನುಭವ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications