ಕೇರಳದ ಸ್ಟೇಡಿಯಂಗೆ ಕ್ರಿಕೆಟ್ ದಿಗ್ಗಜ ಸಚಿನ್ ಹೆಸರು
ಕೊಚ್ಚಿ, ಸೆ. 05: ಕೇರಳ ರಾಜ್ಯದ ಒಂದು ಕ್ರೀಡಾಂಗಣಕ್ಕೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಹೆಸರನ್ನು ಇಡಲಾಗುವುದು ಎಂದು ಕ್ರಿಕೆಟ್ ಅಸೋಸಿಯೇಶನ್ (ಕೆಸಿಎ) ತನ್ನ ಒಂದು ಸ್ಟೇಡಿಯಂಗೆ ಬ್ಯಾಟಿಂಗ್ ದಂತಕತೆ ಸಚಿನ್ ತೆಂಡುಲ್ಕರ್ ಹೆಸರನ್ನು ಇಡಲು ಚಿಂತನೆ ನಡೆಸುತ್ತಿದೆ.
ಕೊಚ್ಚಿಯ ಜವಾಹರ್‌ಲಾಲ್ ನೆಹರೂ ಸ್ಟೇಡಿಯಂನ ಪೆವಿಲಿಯನ್‌ಗೆ ತೆಂಡೂಲ್ಕರ್ ಹೆಸರಿಡಲು ನಿರ್ಧರಿಸಲಾಗಿದೆ. ಈ ಕ್ರೀಡಾಂಗಣಕ್ಕೂ ಸಚಿನ್ ಅವರಿಗೆ ಒಳ್ಳೆ ಸಂಬಂಧವಿದೆ ಎಂದು ಕ್ರಿಕೆಟ್ ಸಂಸ್ಥೆ ಅಭಿಪ್ರಾಯಪಟ್ಟಿದೆ.

ಆದರೆ, ರಾಜ್ಯದ ಯಾವ ಕ್ರಿಕೆಟ್ ಸ್ಟೇಡಿಯಂಗೆ ತೆಂಡೂಲ್ಕರ್ ಹೆಸರಿಡಬೇಕೆಂಬ ಕುರಿತು ಇನ್ನೂ ನಿರ್ಧರಿಸಿಲ್ಲ. ವಯನಾಡ್‌ನಲ್ಲಿ ಇತ್ತೀಚೆಗೆ ಹೊಸ ಸ್ಟೇಡಿಯಂ ಉದ್ಘಾಟನೆಯಾಗಿದೆ. ರಾಜ್ಯದ ಇತರೆಡೆಯ ಸ್ಟೇಡಿಯಂಗಳು ಮುಕ್ತಾಯದ ಹಂತದಲ್ಲಿವೆ. ತೆಂಡೂಲ್ಕರ್‌ರನ್ನು ಸಂಪರ್ಕಿಸಿ ಅವರ ಅಭಿಪ್ರಾಯ ಕೇಳಿದ ನಂತರ ಈ ಕುರಿತು ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೆಸಿಎ ಅಧ್ಯಕ್ಷ ಟಿ.ಸಿ. ಮ್ಯಾಥ್ಯೂ ಶುಕ್ರವಾರ ಹೇಳಿದ್ದಾರೆ.
2015ರ ನ್ಯಾಷನಲ್ ಗೇಮ್ಸ್‌ಗೆ ರಾಯಭಾರಿಯಾಗಿದ್ದ ತೆಂಡೂಲ್ಕರ್ ಕೇರಳದಲ್ಲಿ ನ್ಯಾಷನಲ್ ಗೇಮ್ಸ್ ಪ್ರಚಾರದ ಅಂಗವಾಗಿ 'ರನ್ ಕೇರಳ ರನ್'ನಲ್ಲಿ ತೆಂಡುಲ್ಕರ್ ಭಾಗವಹಿಸಿದ್ದರು. ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್)ನಲ್ಲಿ ಕೇರಳ ಬ್ಲಾಸ್ಟರ್ಸ್ ತಂಡದ ಸಹ ಮಾಲಕರಾಗಿರುವ ತೆಂಡೂಲ್ಕರ್ ಕೇವರು ಕೇರಳದಲ್ಲಿ ಇತ್ತೀಚೆಗೆ ಮನೆಯೊಂದನ್ನು ಖರೀದಿಸುವ ಯೋಜನೆ ಹಾಕಿಕೊಂಡಿದ್ದಾಗಿ ಹೇಳಿದ್ದಾರೆ.(ಐಎಎನ್ ಎಸ್)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications