ಲಾಹೋರ್, ಸೆ. 20 : ಪಾಕಿಸ್ತಾನ ಕ್ರಿಕೆಟರ್ ಖಲೀದ್ ಲತೀಫ್ ಅವರ ಮೇಲೆ ಸ್ಪಾಟ್ ಫಿಕ್ಸಿಂಗ್ ಆರೋಪ ಹೊರೆಸಿ 5 ವರ್ಷಗಳ ನಿಷೇಧ ಹೇರಲಾಗಿದೆ. ಪಾಕಿಸ್ತಾನದ ಕ್ರಿಕೆಟ್ ಮಂಡಳಿಯ ಭ್ರಷ್ಟಾಚಾರ ನಿಗ್ರಹ ವಿಭಾಗವು ಬುಧವಾರ(ಸೆ. 20) ಈ ಆದೇಶ ಹೊರಡಿಸಿದೆ.
ಲತೀಫ್ ಗೆ ಐದು ವರ್ಷಗಳ ಕಾಲ ನಿಷೇಧ ಹೇರಲಾಗಿದ್ದು, ಒಂದು ಮಿಲಿಯನ್ ಡಾಲರ್ ದಂಡ ವಿಧಿಸಲಾಗಿಪಎ. 31 ವರ್ಷ ವಯಸ್ಸಿನ ಲತೀಫ್ ಅವರು ಪಾಕಿಸ್ತಾನ ಪರ 5 ಏಕದಿನ ಪಂದ್ಯ, 13 ಟಿ20ಐ ಪಂದ್ಯಗಳನ್ನಾಡಿದ್ದಾರೆ. ಅಬು ಧಾಬಿಯಲ್ಲಿ ಸೆಪ್ಟೆಂಬರ್ 2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೊನೆ ಪಂದ್ಯವಾಡಿದ್ದರು.

ಆಗಸ್ಟ್ ತಿಂಗಳಿನಲ್ಲಿ ಶರ್ಜೀಲ್ ಅವರಿಗೆ 5 ವರ್ಷಗಳ ನಿಷೇಧ ಹೇರಲಾಗಿತ್ತು. ಮೊಹಮ್ಮದ್ ಇರ್ಫಾನ್,ಶಹ್ಜಾಯಿಬ್ ಹಸನ್, ನಸೀರ್ ಜಮ್ಶೇಡ್ ಹಾಗೂ ಮೊಹಮ್ಮದ್ ನವಾಜ್ ಅವರು ಕೂಡಾ ಆರೋಪ ಎದುರಿಸುತ್ತಿದ್ದಾರೆ.
ನವಾಜ್ ಅವರನ್ನು ಎರಡು ತಿಂಗಳುಗಳ ಕಾಲ ಅಮಾನತುಗೊಳಿಸಿ 20 ಲಕ್ಷ ರುಪಾಯಿ ದಂಡ ವಿಧಿಸಲಾಗಿದೆ. ಇರ್ಫಾನ್ ಅವರಿಗ್ ಒಂದು ವರ್ಷ ಅಮಾನತು ಹಾಗೂ 10 ಲಕ್ಷ ರುಪಾಯಿ ದಂಡ ವಿಧಿಸಲಾಗಿದೆ.