For Quick Alerts
ALLOW NOTIFICATIONS  
For Daily Alerts
 

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಏಳು ಸಾವಿರ ರನ್ ಪೂರೈಸಿದ ಖವಾಜಾ

ಆಸ್ಟ್ರೇಲಿಯಾದ ಸ್ಟಾರ್‌ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 7000 ರನ್ ಪೂರೈಸಿದ್ದಾರೆ. ಖವಾಜಾ ಈ ಸಾಧನೆಯನ್ನು ಪಾಕಿಸ್ತಾನ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಮಾಡಿದ್ದಾರೆ.

ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಖವಾಜಾ 143 ಎಸೆತಗಳನ್ನು ಎದುರಿಸಿ 47 ರನ್ ಕಲೆ ಹಾಕಿದರು. ಇವರ ಮನಮೋಹಕ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಸೇರಿವೆ. ಖವಾಜಾ 118 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 7019 ರನ್ ಬಾರಿಸಿದ್ದು, 44.70 ಸರಾಸರಿಯನ್ನು ಹೊಂದಿದ್ದಾರೆ. ಇದರಲ್ಲಿ 17 ಶತಕ ಹಾಗೂ 38ಬ ಅರ್ಧಶತಕಗಳು ಸೇರಿವೆ. ಈ ವೇಳೆ 195 ಇವರ ಬೆಸ್ಟ್‌ ಸ್ಕೋರ್ ಆಗಿದೆ.

Khawaja completed seven thousand runs in international cricket

ಖವಾಜಾ 69 ಟೆಸ್ಟ್‌ ಪಂದ್ಯಗಳಲ್ಲಿ 5224 ರನ್ ಕಲೆ ಹಾಕಿದ್ದು 47.06ರ ಸರಾಸರಿಯನ್ನು ಹೊಂದಿದ್ದಾರೆ. ಟೆಸ್ಟ್‌ನಲ್ಲಿ 15 ಶತಕ ಹಾಗೂ 25 ಅರ್ಧಶತಕಗಳು ಸೇರಿವೆ. 40 ಏಕದಿನ ಪಂದ್ಯಗಳಲ್ಲಿ ಆಸೀಸ್ ಓಪನರ್ 1554 ರನ್ ಸಿಡಿಸಿದ್ದು, 2 ಶತಕ ಹಾಗೂ 12 ಅರ್ಧಶತಕಗಳು ಸೇರಿವೆ. ಅಲ್ಲದೆ ಆಸೀಸ್‌ ಪರ 9 ಟಿ20 ಪಂದ್ಯಗಳಲ್ಲಿ ಬ್ಯಾಟ್ ಮಾಡಿರುವ ಖವಾಜಾ 241 ರನ್ ಸಿಡಿಸಿದ್ದಾರೆ. ಈ ವೇಳೆ ಒಂದು ಅರ್ಧಶತಕ ಬಾರಿಸಿದ್ದಾರೆ.

ಮೂರನೇ ಟೆಸ್ಟ್‌ ಪಂದ್ಯದಲ್ಲಿ ಅಮೀರ್ ಜಮಾಲ್ ಖವಾಜಾ ಆಟಕ್ಕೆ ಖೆಡ್ಡಾ ತೋಡಿದರು. ಎರಡನೇ ದಿನಾಟದವನ್ನು ವಿಕೆಟ್‌ ನಷ್ಟವಿಲ್ಲದೇ ಆರು ರನ್‌ಗಳಿಂದ ಮುಂದುವರೆಸಿದ ಆಸೀಸ್ ಮಂದ ಬೆಳಕಿನ ಪರಿಣಾಮ ಆಟ ಸ್ಥಗಿತಗೊಂಡಾಗ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 2 ವಿಕೆಟ್‌ ಕಳೆದುಕೊಂಡು 116 ರನ್ ಕಲೆ ಹಾಕಿದ್ದು, 197 ರನ್‌ ಗಳ ಇನ್ನಿಂಗ್ಸ್ ಹಿನ್ನಡೆ ಅನುಭವಿಸುತ್ತಿದೆ. ಮಾರ್ನಸ್ ಲಂಬುಶೇನ್ ಹಾಗೂ ಸ್ಟೀವನ್ ಸ್ಮಿತ್ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಆಸೀಸ್‌ ತಂಡದ ಡೇವಿಡ್ ವಾರ್ನರ್‌ ತಮ್ಮ ವೃತ್ತಿ ಜೀವನದ ಕೊನೆಯ ಟೆಸ್ಟ್‌ ಪಂದ್ಯವನ್ನು ಆಡುತ್ತಿದ್ದು ಮೊದಲ ಇನ್ನಿಂಗ್ಸ್‌ನಲ್ಲಿ 34 ರನ್ ಸಿಡಿಸಿ ಔಟ್ ಆದರು.

Khawaja completed seven thousand runs in international cricket

ಮೂರನೇ ದಿನಕ್ಕೆ ಎಚ್ಚರಿಕೆಯ ಆಟವನ್ನು ಆಡಿ ತಂಡದ ಮೊತ್ತವನ್ನು ಹಿಗ್ಗಿಸುವ ವಿಶ್ವಾಸವನ್ನು ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವನ್ ಸ್ಮಿತ್ ಹಾಗೂ ಲಂಬುಶೇನ್ ಹಾಕಿಕೊಂಡಿದ್ದಾರೆ. ಅಲ್ಲದೆ ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್ ಮೊತ್ತವನ್ನು ಕಲೆ ಹಾಕಿ, ಪಾಕ್‌ ತಂಡವನ್ನು ಕಟ್ಟಿ ಹಾಕುವ ಇರಾದೆ ಆತಿಥೇಯರದ್ದಾಗಿದೆ. ಈ ಮೂಲಕ ಮೂರು ಟೆಸ್ಟ್‌ ಪಂದ್ಯಗಳ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಳ್ಳುವ ಕನಸು ಆಸೀಸ್ ತಂಡದ್ದಾಗಿದೆ.

Story first published: Thursday, January 4, 2024, 12:31 [IST]
Other articles published on Jan 4, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+