ಡೇವಿಡ್ ವಾರ್ನರ್ ಐಪಿಎಲ್ ಅನುಪಸ್ಥಿತಿಗೆ ಪ್ರತಿಕ್ರಿಯಿಸಿದ ಕೀರನ್ ಪೊಲಾರ್ಡ್

ಮುಂಬೈ, ಮೇ 2: ಸನ್ ರೈಸರ್ಸ್ ಹೈದರಾಬಾದ್ ತಂಡದ ಸ್ಫೋಟಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಇನ್ನುಳಿದ ಐಪಿಎಲ್ ಪಂದ್ಯಗಳಲ್ಲಿ ಆಡುತ್ತಿಲ್ಲ. ಇದು ಮುಂಬೈ ಇಂಡಿಯನ್ಸ್‌ಗೆ ಪ್ರಯೋಜನವಾಗಲಿದೆ ಎಂದು ಮುಂಬೈ ಇಂಡಿಯನ್ಸ್ ಆಲ್ ರೌಂಡರ್ ಕೀರನ್ ಪೊಲಾರ್ಡ್ ಹೇಳಿದ್ದಾರೆ.
ಮೇ 2ರಂದು ಐಪಿಎಲ್ 51ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ತಂಡಗಳು ಕಾದಾಡುತ್ತಿವೆ. 29ರಂದು ಪಂಜಾಬ್ ವಿರುದ್ಧ ಹೈದರಾಬಾದ್ ಸೆಣಸಾಟದಲ್ಲಿ ಪಾಲ್ಗೊಂಡಿದ್ದ ವಾರ್ನರ್ ವಿಶ್ವಕಪ್ ತಯಾರಿ ನಿಮಿತ್ತ ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ. ಎಸ್‌ಆರ್‌ಎಚ್‌ನಲ್ಲಿ ಅಪಾಯಕಾರಿ ಆಟಗಾರ ಇಲ್ಲದ್ದು ನಮಗೆ ಅನುಕೂಲವಾಗಲಿದೆ ಎಂದು ಪೊಲಾರ್ಡ್ ಅಭಿಪ್ರಾಯಿಸಿದ್ದಾರೆ.
'ವಿಶ್ವಶ್ರೇಷ್ಠ ಆಟಗಾರ ಡೇವಿಡ್ (ವಾರ್ನರ್) ಹೈದರಾಬಾದ್ ತಂಡದಲ್ಲಿ ಇಲ್ಲದಿರೋದು ನಮಗೆ ಅನುಕೂಲವಾಗಲಿದೆ. ತಾನೇನು ಮಾಡಬಲ್ಲೆ ಎಂಬುದನ್ನು ವಾರ್ನರ್ ತನ್ನ ಸಾಧನೆ ಮೂಲಕ ತೋರಿಸಿದ್ದಾರೆ' ಎಂದು ಪೊಲಾರ್ಡ್ ಹೇಳಿದ್ದಾರೆ. 12 ಪಂದ್ಯಗಳಲ್ಲಿ 692 ರನ್ ಕಲೆ ಹಾಕಿದ್ದ ವಾರ್ನರ್ ಐಪಿಎಲ್ ಅತ್ಯಧಿಕ ರನ್ ಗಳಿಸಿದವರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications