Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ವೆಸ್ಟ್ ಇಂಡೀಸ್ ಟಿ20: ಆಲ್ ರೌಂಡರ್ ಪೊಲಾರ್ಡ್‌ಗೆ ದಂಡ

Kieron Pollard fined for disobeying umpire in T20I against India

ಲಾಡರ್‌ಹಿಲ್, ಆಗಸ್ಟ್ 6: ಭಾರತ-ವೆಸ್ಟ್ ಇಂಡೀಸ್ ದ್ವಿತೀಯ ಟಿ20 ಪಂದ್ಯದ ವೇಳೆ ಅಂಪೈರ್‌ಗೆ ಅವಿಧೇಯತೆ ತೋರಿಸಿದ್ದಕ್ಕಾಗಿ ವೆಸ್ಟ್ ಇಂಡೀಸ್ ಆಲ್ ರೌಂಡರ್ ಕೀರನ್ ಪೊಲಾರ್ಡ್‌ಗೆ ಪಂದ್ಯದ ಸಂಭಾವನೆಯ ಶೇ. 20ರಷ್ಟು ದಂಡ ವಿಧಿಸಲಾಗಿದೆ. ಅಲ್ಲದೆ ಒಂದು ಡಿ-ಮೆರಿಟ್ ಪಾಯಿಂಟ್ ಕೂಡ ನೀಡಲಾಗಿದೆ.

ಫೋರಿಡಾದ ಲಾಡರ್‌ಹಿಲ್‌ನಲ್ಲಿ ಭಾನುವಾರ (ಆಗಸ್ಟ್ 4) ಸೆಂಟ್ರಲ್ ಬ್ರೋವರ್ಡ್ ರೀಜಿನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿನ ವರ್ತನೆಗಾಗಿ ಪೊಲಾರ್ಡ್‌ಗೆ ದಂಡ ವಿಧಿಸಲಾಗಿದೆ. ಪೊಲಾರ್ಡ್ ವರ್ತನೆ ಇಂಟರ್ ನ್ಯಾಷನಲ್ ಕ್ರಿಕೆಟ್‌ ಕೌನ್ಸಿಲ್‌ನ ನಿಯಮ ಉಲ್ಲಂಘಿಸಿದೆ ಎಂದು ಐಸಿಸಿ ಹೇಳಿದೆ.

ಬದಲಿ ಆಟಗಾರರನ್ನು ಮೈದಾನಕ್ಕಿಳಿಸುವ ಮುನ್ನ ವಿನಂತಿಸಿಕೊಳ್ಳಬೇಕು ಎಂದು ಅಂಪೈರ್ ತಿಳಿಸಿದ ಬಳಿಕವೂ ಪೊಲಾರ್ಡ್ ಮತ್ತೆ ಮತ್ತೆ ಬದಲಿ ಆಟಗಾರನಿಗೆ ಕರೆ ನೀಡುತ್ತಿದ್ದರು. ಅಲ್ಲದೆ ಮುಂದಿನ ಓವರ್ ಮುಕ್ತಾಯದವರೆಗೂ ಕಾಯಿಬೇಕು ಎಂದು ಅಂಪೈರ್ ಸಲಹೆ ನೀಡಿದ್ದನ್ನೂ ಪೊಲಾರ್ಡ್ ಪಾಲಿಸಲಿಲ್ಲ ಎನ್ನಲಾಗಿದೆ.

'ವಿಚಾರಣೆ ವೇಳೆ ಪೊಲಾರ್ಡ್ ತಪ್ಪಿತಸ್ಥನಾಗಿ ಕಂಡುಬಂದಿದ್ದಾರೆ. ಅವರಿಗೆ ಪಂದ್ಯದ ಸಂಭಾವನೆಯ ಶೇ. 20ರಷ್ಟು ದಂಡ ವಿಧಿಸಲಾಗಿದೆ. ಜೊತೆಗೆ ಒಂದು ಡಿ-ಮೆರಿಟ್ ಪಾಯಿಂಟ್ (ನಕಾರಾತ್ಮಕ ಅಂಕ) ಕೂಡ ನೀಡಲಾಗಿದೆ,' ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.

ಇತ್ತಂಡಗಳ ದ್ವಿತೀಯ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 20 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 167 ರನ್ ಮಾಡಿತ್ತು. ವೆಸ್ಟ್ ಇಂಡೀಸ್ 15.3 ಓವರ್‌ಗೆ 4 ವಿಕೆಟ್ ಕಳೆದು 98 ರನ್ ಪೇರಿಸಿತ್ತು. ಆ ವೇಳೆ ಪೊಲಾರ್ಡ್ ಮತ್ತು ಶಿಮ್ರನ್ ಹೆಟ್ಮೈಯರ್ ಕ್ರೀಸ್‌ನಲ್ಲಿದ್ದರು. ಅನಂತರ ಮಳೆಯಿಂದ ಪಂದ್ಯ ರದ್ದುಗೊಂಡಿದ್ದರಿಂದ ಡಿಎಲ್‌ಎಸ್ ನಿಯಮದ ಆಧಾರದಲ್ಲಿ ಭಾರತ 22 ರನ್ ಜಯ ಸಾಧಿಸಿತ್ತು.

Story first published: Tuesday, August 6, 2019, 16:32 [IST]
Other articles published on Aug 6, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+