For Quick Alerts
ALLOW NOTIFICATIONS  
For Daily Alerts
 

Kieron Pollard: ಟಿ20 ಕ್ರಿಕೆಟ್‌ನಲ್ಲಿ ಎಲೈಟ್‌ ಕ್ಲಬ್‌ ಸೆರಿದ ಕೀರನ್ ಪೊಲಾರ್ಡ್‌: ಏನದು?

ವೆಸ್ಟ್‌ ಇಂಡೀಸ್‌ ಆಟಗಾರರು ಕ್ರಿಕೆಟ್‌ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಕ್ರಿಕೆಟ್‌ನ ಯಾವುದೇ ಫಾರ್ಮೆಟ್‌ ಆದರೂ, ಅದರಲ್ಲಿ ವಿಂಡೀಸ್‌ ಆಟಗಾರರ ವಿಂಡೀಸ್ ಆಟಗಾರರು ಆರ್ಭಟಿಸುತ್ತಾರೆ. ಟಿ20 ಕ್ರಿಕೆಟ್‌ ಈ ಆಟಗಾರರಿಗೆ ಹೇಳಿ ಮಾಡಿಸಿದ ಹಾಗೆ ಇದೆ. ಈ ಫಾರ್ಮೆಟ್‌ನಲ್ಲಿ ಅದೆಷ್ಟೋ ಸ್ಟಾರ್ ಆಟಗಾರರನ್ನು ಈ ದೇಶ ನೀಡಿದೆ. ಈ ಸಾಲಿನಲ್ಲಿ ಯುನಿವರ್ಸಲ್‌ ಬಾಸ್ ಖ್ಯಾತಿ ಕ್ರಿಸ್‌ ಗೇಲ್‌, ಸ್ಟಾರ್ ಆಲ್‌ರೌಂಡರ್‌ ಸುನಿಲ್ ನರೇನ್‌ ಅವರಂತಹ ದೈತ್ಯ ಆಟಗಾರರು ಸ್ಥಾನ ಪಡೆಯುತ್ತಾರೆ. ಇದೇ ಸಾಲಿನಲ್ಲಿ ಕಾಣಿಸಿಕೊಳ್ಳುವ ಇನ್ನೊಂದು ಹೆಸರು ಕೀರನ್‌ ಪೊಲಾರ್ಡ್‌.

ಕೀರನ್‌ ಪೊಲಾರ್ಡ್‌ ವಿಶ್ವ ಕ್ರಿಕೆಟ್‌ನಲ್ಲಿ ಹಲವು ಲೀಗ್‌ಗಳಲ್ಲಿ ಭಾಗವಹಿಸುತ್ತಾರೆ. ಇವರು ಪ್ರಪಂಚದಾದ್ಯಂತ ಹಲವು ಖ್ಯಾತ ಲೀಗ್‌ಗಳಲ್ಲಿ ಭಾಗವಹಿಸುತ್ತಾರೆ. ಇವರು ತಮ್ಮ ಬ್ಯಾಟಿಂಗ್ ಹೊಳಪನ್ನು ಐಪಿಎಲ್‌ನಲ್ಲಿ ಪ್ರಸ್ತುತ ಪಡಿಸಿದ್ದಾರೆ. ಇವರು ಯಾವುದೇ ತಂಡದಲ್ಲಿದ್ದರೂ, ಇವರು ಮೊದಲ ಆಯ್ಕೆಯ ಆಟಗಾರರ ರೂಪದಲ್ಲಿ ಕಾಣಿಸಿಕೊಳ್ಳುತ್ತಾರೆ. ಚುಟುಕು ಫಾರ್ಮೆಟ್‌ನಲ್ಲಿ ಕೀರನ್‌ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ನಮೂದಿಸಿಕೊಂಡಿದ್ದಾರೆ. ಚುಟುಕು ಫಾರ್ಮೆಟ್‌ನಲ್ಲಿ ಪೊಲಾರ್ಡ್‌ ದೊಡ್ಡ ದಾಖಲೆ ಬರೆದಿದ್ದು, ವಿಶ್ವ ಕ್ರಿಕೆಟ್‌ನಲ್ಲಿ ಈ ದಾಖಲೆ ಮಾಡಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ.

Kieron Pollard Joins Elite Club with 900 T20 Sixes Second Only to Chris Gayle

ಪೊಲಾರ್ಡ್‌ ಮಾಡಿದ ಸಾಧನೆ ಏನು?

ಸದ್ಯ ವಿಶ್ವ ಕ್ರಿಕೆಟ್‌ನಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳು ನಡೆಯುತ್ತಿಲ್ಲ. ಈ ಖಾಲಿ ಸಮಯದಲ್ಲಿ ವಿಶ್ವದ ನಾನಾ ಭಾಗದಲ್ಲಿ ಲೀಗ್‌ಗಳು ನಡೆಯುತ್ತಿವೆ. ಐಎಲ್‌ಟಿ20 ಸಹ ಇದೇ ವೇಳೆಯಲ್ಲಿ ನಡೆಯುತ್ತಿದ್ದು, ಕೀರನ್‌ ಪೊಲಾರ್ಡ್‌ ಈ ವೇಳೆ ಎಂಐ ಎಮಿರೇಟ್ಸ್‌ ತಂಡದ ಭಾಗವಾಗಿದ್ದಾರೆ. ಈ ಲೀಗ್‌ನಲ್ಲಿ. ಎಂಐ ಎಮಿರೇಟ್ಸ್ ಮತ್ತು ಡೆಸರ್ಟ್ ವೈಪರ್ಸ್ ನಡುವಿನ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಪೊಲಾರ್ಡ್‌ ವಿಶೇಷ ದಾಖಲೆಯನ್ನು ಬರೆದರು.

ಡೆಸರ್ಟ್ ವೈಪರ್ಸ್ ವಿರುದ್ದದ ಪಂದ್ಯದಲ್ಲಿ ಪೊಲಾರ್ಡ್ 23 ಎಸೆತಗಳಲ್ಲಿ 36 ರನ್ ಗಳಿಸಿದರು. ಇವರ ಇನಿಂಗ್ಸ್‌ನಲ್ಲಿ ಎರಡು ಬೌಂಡರಿ ಮತ್ತು ಮೂರು ಸಿಕ್ಸರ್‌ ಸೇರಿವೆ. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ 900ಕ್ಕೂ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆಯನ್ನು ಕೀರನ್‌ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಈ ಸಾಧನೆಯನ್ನು ವಿಂಡೀಸ್ ತಂಡದ ಕ್ರಿಸ್‌ ಗೇಲ್‌ ಮಾತ್ರ ಮಾಡಿದ್ದಾರೆ. ಇವರು ಟಿ20 ಕ್ರಿಕೆಟ್‌ನಲ್ಲಿ 1056 ಸಿಕ್ಸರ್ ಸಾಧನೆ ಮಾಡಿದ್ದಾರೆ.

Kieron Pollard Joins Elite Club with 900 T20 Sixes Second Only to Chris Gayle

ಪೊಲಾರ್ಡ್‌ ವಿಂಡೀಸ್ ತಂಡದ ಅನುಭವಿ ಆಟಗಾರರಲ್ಲಿ ಅಗ್ರ ಸ್ಥಾನ. ವೆಸ್ಟ್‌ ಇಂಡೀಸ್‌ ಎರಡು ಬಾರಿ ಟಿ20 ವಿಶ್ವಕಪ್‌ ಗೆಲ್ಲುವಲ್ಲಿ ಇವರ ಕೊಡುಗೆ ಪ್ರಮುಖ. ಇವರ ಒಟ್ಟಾರೆ ವೃತ್ತಿ ಜೀವನದಲ್ಲಿ 690 ಪಂದ್ಯಗಳನ್ನು ಆಡಿದ್ದು, 13429 ರನ್ ಗಳಿಸಿದ್ದಾರೆ. ಇವರು ಐಪಿಎಲ್‌ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಒಟ್ಟಾರೆ 189 ಐಪಿಎಲ್ ಪಂದ್ಯಗಳನ್ನು ಆಡಿದ್ದು, 16 ಅರ್ಧಶತಕಗಳು ಸೇರಿದಂತೆ 3412 ರನ್‌ ಸಿಡಿಸಿದ್ದಾರೆ. ಅಲ್ಲದೆ ಇವರ ಬುಟ್ಟಿಯಲ್ಲಿ 69 ವಿಕೆಟ್‌ಗಳು ಸಹ ಇವೆ.

Story first published: Friday, January 17, 2025, 14:45 [IST]
Other articles published on Jan 17, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+