
ಕಿಂಗ್ಸ್‌ಟೌನ್, ಸೆಪ್ಟೆಂಬರ್ 9: ವಿಶ್ವಕಪ್‌ನಲ್ಲಿ ನಿರಾಶಾದಾಯಕ ಪ್ರದರ್ಶನ, ಪ್ರವಾಸಿ ಭಾರತದ ವಿರುದ್ಧ ಕಳಪೆ ಪ್ರದರ್ಶನದೊಂದಿಗೆ ವೈಟ್‌ವಾಷ್ ಮುಖಭಂಗ ಅನುಭವಿಸಿದ ವೆಸ್ಟ್ ಇಂಡೀಸ್ ತಂಡದ ನಾಯಕರು ಬದಲಾಗಲಿದ್ದಾರೆ. ಕ್ರಿಕೆಟ್ ವೆಸ್ಟ್ ಇಂಡೀಸ್, ಜೇಸನ್ ಹೋಲ್ಡರ್ ಮತ್ತು ಕಾರ್ಲೋಸ್ ಬ್ರಾತ್‌ವೇಟ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಿದೆ ಎಂದು ವರದಿಯೊಂದು ಹೇಳುತ್ತಿದೆ.
ಟ್ರಿನಿಡಾಡ್ ಮತ್ತು ಟೊಬಾಗೊ ಗಾರ್ಡಿಯನ್‌ನಲ್ಲಿ ಪ್ರಕಟವಾಗಿರೋ ವರದಿಯ ಪ್ರಕಾರ, ಕ್ರಿಕೆಟ್ ವೆಸ್ಟ್ ಇಂಡಿಯಾದ ನಿರ್ದೇಶಕರು ಶನಿವಾರ (ಸೆಪ್ಟೆಂಬರ್ 7) ಈ ನಿರ್ಧಾರವನ್ನು ಕೈಗೊಂಡಿದ್ದಾರೆ. ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತಾಳಲಾಗಿದೆ.
32ರ ಹರೆಯದ ಪೊಲಾರ್ಡ್ 2016ರಲ್ಲಿ ಕಡೇಯ ಸಾರಿ ಏಕದಿನ ಪಂದ್ಯವನ್ನಾಡಿದ್ದರು. ವಿಶ್ವಕಪ್ ಕ್ರಿಕೆಟ್ ವೇಳೆ ಪೊಲಾರ್ಡ್ ಅವರನ್ನು ಮೀಸಲು ಆಟಗಾರರನ್ನಾಗಿಸಲಾಗಿತ್ತು. ಪ್ರವಾಸಿ ಭಾರತದ ವಿರುದ್ಧದ ಟಿ20 ಸರಣಿಯಲ್ಲಿ ಮಾತ್ರ ಪೊಲಾರ್ಡ್ ಪಾಲ್ಗೊಂಡಿದ್ದರು.
ಬಿರುಗೈ ಬ್ಯಾಟ್ಸ್‌ಮನ್ ಪೊಲಾರ್ಡ್ 101 ಏಕದಿನ ಪಂದ್ಯಗಳಲ್ಲಿ 25.71ರ ಸರಾಸರಿಯಂತೆ 2,289 ರನ್ ಗಳಿಸಿದ್ದಾರೆ. ಇದರಲ್ಲಿ 3 ಶತಕ 9 ಅರ್ಧಶತಕಗಳೂ ಸೇರಿವೆ. ಏಕದಿನದಲ್ಲಿ 50 ವಿಕೆಟ್‌ಗಳೂ ಪೊಲಾರ್ಡ್‌ಗೆ ಲಭಿಸಿವೆ. 62 ಟಿ20 ಪಂದ್ಯಗಳಲ್ಲಿ 903 ರನ್, 23 ವಿಕೆಟ್ ಪಡೆದಿದ್ದಾರೆ. ವರದಿಯ ಪ್ರಕಾರ ಏಕದಿನದಲ್ಲಿ ಹೋಲ್ಡರ್ ಬದಲಿಗೆ, ಟಿ20ಯಲ್ಲಿ ಬ್ರಾತ್‌ವೇಟ್ ಬದಲಿಗೆ ಪೊಲಾರ್ಡ್ ನಾಯಕರಾಗಲಿದ್ದಾರೆ.