ಪಾಕಿಸ್ತಾನ್ ಸೂಪರ್ ಲೀಗ್‌ನಿಂದ ವಿಂಡೀಸ್‌ನ ಕೀರನ್ ಪೊಲಾರ್ಡ್ ಹೊರಕ್ಕೆ

ಇಸ್ಲಮಾಬಾದ್, ಮಾರ್ಚ್ 9: ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್‌ಎಲ್)ನಿಂದ ವೆಸ್ಟ್ ಇಂಡೀಸ್ ಟಿ20 ತಂಡದ ನಾಯಕ ಕೀರನ್ ಪೊಲಾರ್ಡ್ ಹೊರ ಬಿದ್ದಿದ್ದಾರೆ. ತನ್ನ ಬಲ ತೊಡೆಯಲ್ಲಿ ನೋವು ಕಾಣಿಸಿಕೊಂಡಿರುವುದರಿಂದ ಪೊಲಾರ್ಡ್ ಪಿಎಸ್‌ಎಲ್‌ನಲ್ಲಿ ಆಡುತ್ತಿಲ್ಲ.
ಪೊಲಾರ್ಡ್ ಅಲಭ್ಯರಿರುವುರುವುದರಿಂದ ಪಿಎಸ್‌ಎಲ್‌ನಲ್ಲಿ ಅವರರಾಡುತ್ತಿದ್ದ ಪೇಶ್ವರ್ ಝಲ್ಮಿ ತಂಡಕ್ಕೆ ವೆಸ್ಟ್ ಇಂಡೀಸ್‌ನ ಇನ್ನೊಬ್ಬ ಆಟಗಾರ ಕಾರ್ಲೋಸ್ ಬ್ರಾತ್‌ವೇಟ್ ಅವರನ್ನು ಕರೆತರಲಾಗಿದೆ. ಶ್ರೀಲಂಕಾ ಪ್ರವಾಸದ ಬಳಿಕ ಪೊಲಾರ್ಡ್, ಪೇಶ್ವರ್ ಸೇರಿಕೊಳ್ಳುವ ನಿರೀಕ್ಷೆಯಿದೆ. ಆದರೆ ಆಲ್ ರೌಂಡರ್ ಆಟಗಾರ ಪೊಲಾರ್ಡ್ ಗಾಯಕ್ಕೀಡಾಗಿದ್ದಾರೆ ಅಂದರೆ ಈ ವರ್ಷ ಪಿಎಸ್‌ಎಲ್‌ನಲ್ಲಿ ಆಡೋದು ಅನುಮಾನವೆ.
ಪೊಲಾರ್ಡ್ ಗಾಯಕ್ಕೀಡಾಗಿದ್ದರಿಂದ ಅವರ ಬದಲಿಗೆ ಬ್ರಾತ್‌ವೇಟ್ ಅವರಿಗೆ ಮಾರ್ಚ್ 6ರಂದೇ ಪೇಶ್ವರ್ ತಂಡದಲ್ಲಿ ಸ್ಥಾನ ನೀಡಲಾಗಿತ್ತು. ಆದರೆ ಪೊಲಾರ್ಡ್ ಟೂರ್ನಿಯಲ್ಲಿ ಆಡೋದು ಅನುಮಾನ ಎಂದು ತಿಳಿದಿದ್ದರಿಂದ ಬ್ರಾತ್‌ವೇಟ್ ಅವರನ್ನು ತಂಡದಲ್ಲಿ ಮುಂದುವರೆಸಲಾಗಿದೆ.
'ಈ ವರ್ಷದ ಟೂರ್ನಿಯಲ್ಲಿ ಬಹುಶಃ ಆಡಲಾಗುತ್ತಿಲ್ಲ. ನನ್ನನ್ನು ಕ್ಷಮಿಸಿ. ಆದರೆ ಯಾವುದೋ ಒಂದು ಸ್ಫೂರ್ತಿ (ಪೇಶ್ವರ್) ತಂಡವನ್ನು ಮುನ್ನಡೆಸುತ್ತಿದೆ. ಡ್ಯಾರೆನ್ ಸ್ಯಮಿ ಮುಖ್ಯ ಕೋಚ್ ಆಗಿರುವ ತಂಡ ಮೊದಲ ಟ್ರೋಫಿ ಗೆಲ್ಲಲಿದೆ ಎಂದು ನನಗೆ ಭರವಸೆಯಿದೆ,' ಎಂದು ಹೇಳಿಕೆಯೊಂದರಲ್ಲಿ ಪೊಲಾರ್ಡ್ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications