Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Kieron Pollard: ವಿಶ್ವ ದಾಖಲೆ ಬರೆದ ಎಂಐ ತಂಡದ ಪೊಲಾರ್ಡ್‌: ಏನದು?

ಕೀರನ್‌ ಪೊಲಾರ್ಡ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಸರಿದಿದ್ದಾರೆ. ಇವರು ಸದ್ಯ ಐಪಿಎಲ್‌ನಲ್ಲೂ ಆಡುತ್ತಿಲ್ಲ. ಆದರೆ ಉಳಿದ ಲೀಗ್‌ಗಳಲ್ಲಿ ವೆಸ್ಟ್‌ ಇಂಡೀಸ್‌ ತಂಡದ ಆಟಗಾರರ ಸದ್ದು ಮಾಡುತ್ತಿದ್ದಾರೆ. ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಇವರು ಆಡುತ್ತಿದ್ದಾರೆ. ಈ ಪಂದ್ಯವಾಳಿಯಲ್ಲಿ ಕಿರನ್ ಪೊಲಾರ್ಡ್‌ ವಿಶ್ವ ದಾಖಲೆಯನ್ನು ಬರೆದಿದ್ದಾರೆ. ಹಾಗಿದ್ದರೆ ಅವರು ಬರೆದಿರುವ ವಿಶ್ವ ದಾಖಲೆ ಏನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಕಿರನ್‌ ಪೋಲರ್ಡ್‌ ಎಂಐ ನ್ಯೂಯಾರ್ಕ್ ತಂಡದ ಪರ ಕಣಕ್ಕೆ ಇಳಿದಿದ್ದಾರೆ. ಈ ವೇಳೆ ಮಂಗಳವಾರ ನಡೆದ ಪಂದ್ಯದಲ್ಲಿ ನ್ಯೂಯಾರ್ಕ್‌ ತಂಡದ ಸ್ಯಾನ್‌ ಫ್ರಾನ್ಸಿಸ್ಕೋ ಯುನಿಕಾರ್ನಸ್ ವಿರುದ್ಧ ಕಾದಾಟವನ್ನು ನಡೆಸಿದೆ. ಈ ಪಂದ್ಯದಲ್ಲಿ ಕಿರನ್‌ ಅಂಗಳಕ್ಕೆ ಇಳಿಯುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 700 ಪಂದ್ಯಗಳನ್ನು ಆಡಿದ ವಿಶ್ವ ದಾಖಲೆಯನ್ನು ಬರೆದಿದ್ದಾರೆ.

Kieron Pollard Sets T20 World Record in Major League Cricket

ಚುಟುಕು ಫಾರ್ಮೆಟ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಹೆಗ್ಗಳಿಕೆ ಕೀರನ್‌ ಪೊಲಾರ್ಡ್‌ ಅವರದ್ದಾಗಿದೆ. ಇವರ ಬಳಿಕ ಎರಡನೇ ಸ್ಥಾನದಲ್ಲೂ ವೆಸ್ಟ್‌ ಇಂಡೀಸ್‌ ತಂಡದ ಸ್ಟಾರ್ ಆಲ್‌ರೌಂಡರ್‌ ಡ್ವೇನ್ ಬ್ರಾವೊ ಇದ್ದಾರೆ. ಇವರು 582 ಪಂದ್ಯಗಳನ್ನು ಆಡಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಪಾಕಿಸ್ತಾನ ತಂಡದ ಆಲ್‌ರೌಂಡರ್‌ ಶೋಯಿಬ್ ಮಲಿಕ್‌ 557 ಪಂದ್ಯಗಳನ್ನು ಆಡಿ ಮೂರನೇ ಸ್ಥಾನದಲ್ಲಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಆಂಡ್ರಿ ರಸೆಲ್‌ (556 ಪಂದ್ಯ) ಇದ್ದು, ಸ್ಟಾರ್‌ ಆಲ್‌ರೌಂಡರ್‌ ಸುನಿಲ್ ನರೈನ್‌ (551 ಪಂದ್ಯ) ಐದನೇ ಸ್ಥಾನದಲ್ಲಿದ್ದಾರೆ.

ಪೊಲಾರ್ಡ್‌ ಟಿ20 ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಇವರು 31.34ರ ಸರಾಸರಿಯಲ್ಲಿ 13634 ರನ್ ಗಳಿಸಿದ್ದಾರೆ. ಈ ವೇಳೆ 1 ಶತಕ ಮತ್ತು 61 ಅರ್ಧಶತಕ ಬಾರಿಸಿದ್ದಾರೆ.

Kieron Pollard Sets T20 World Record in Major League Cricket

ಪಂದ್ಯದ ಫಲಿತಾಂಶ

ಮೊದಲು ಬ್ಯಾಟ್ ಮಾಡಿದ ಸ್ಯಾನ್‌ ಫ್ರಾನ್ಸಿಸ್ಕೋ ಯುನಿಕಾರ್ನಸ್ ತಂಡ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 246 ರನ್‌ ಸಿಡಿಸಿತು. ಈ ವೇಳೆ ಮ್ಯಾಥ್ಯೂ ಶಾರ್ಟ್ 43 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸರ್ ಸಹಾಯದಿಂದ 91 ರನ್‌ ಸಿಡಿಸಿ ತಂಡಕ್ಕೆ ಆಧಾರವಾದರು. ಇನ್ನು ಜೇಕ್ ಫ್ರೇಸರ್-ಮೆಕ್‌ಗುರ್ಕ್ 1 ಬೌಂಡರಿ, 7 ಸಿಕ್ಸರ್‌ ನೆರವಿನಿಂದ 64 ರನ್‌ ಬಾರಿಸಿ ತಂಡಕ್ಕೆ ಆಧಾರವಾದರು. ಗುರಿಯನ್ನು ಬೆನ್ನಟ್ಟಿದ ನ್ಯೂಯಾರ್ಕ್‌ ಎಂಐ ತಂಡದ ಆರಂಭ ಭರ್ಜರಿಯಾಗಿತ್ತು. ಕ್ವಿಂಟನ್ ಡಿಕಾಕ್‌ ಹಾಗೂ ಮೋನಾಂಕ್ ಪಟೇಲ್ ಭರ್ಜರಿ ಆರಂಭವನ್ನು ನೀಡಿತು. ಈ ಜೋಡಿ 9.3 ಓವರ್‌ಗಳಲ್ಲಿ 119 ರನ್‌ ಸಿಡಿಸಿತು. ಈ ವೇಳೆ ಮೋನಾಂಕ್ ಪಟೇಲ್ 60 ರನ್ ಬಾರಿಸಿದ್ದಾಗ ಔಟ್ ಆದರು. ನಾಯಕ ನಿಕೋಲಸ್ ಪೂರನ್‌ 15, ಕೀರನ್‌ ಪೊಲಾರ್ಡ್‌ 34 ರನ್‌ ಸಿಡಿಸಿದರು. ಆರಂಭಿಕ ಕ್ವಿಂಟನ್‌ ಡಿಕಾಕ್‌ 70 ರನ್‌ ಬಾರಿಸಿದರೂ ತಂಡಕ್ಕೆ ಗೆಲುವಿನ ಮಾಲೆ ತೊಡಿಸಲು ಸಾಧ್ಯವಾಗಲಿಲ್ಲ. ನ್ಯೂಯಾರ್ಕ್‌ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 199 ರನ್‌ ಸೇರಿಸಿತು.

Story first published: Tuesday, June 24, 2025, 15:49 [IST]
Other articles published on Jun 24, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+