
ಮೊಹಾಲಿ, ಏಪ್ರಿಲ್ 13: ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಶನಿವಾರ (ಏಪ್ರಿಲ್ 13) ನಡೆಯುವ ಐಪಿಎಲ್ 28ನೇ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸವಾಲಿಗಿಳಿಯುತ್ತಿವೆ.
ಐಪಿಎಲ್: ಪಂಜಾಬ್ vs ಬೆಂಗಳೂರು ಪಂದ್ಯದ Live ಸ್ಕೋರ್‌ಕಾರ್ಡ್ ಇಲ್ಲಿದೆ
ಪಂಜಾಬ್ ಈವರೆಗೆ ಆಡಿರುವ 7ರಲ್ಲಿ 4 ಪಂದ್ಯಗಳನ್ನು ಗೆದ್ದಿದೆ. ಆದರೆ ಬೆಂಗಳೂರು ಒಂದು ಪಂದ್ಯವನ್ನೂ ಗೆದ್ದಿಲ್ಲ. ಹೀಗಾಗಿ ಗೆಲುವಿನ ಹಸಿವಿನಲ್ಲಿರುವ ಆರ್‌ಸಿಬಿ ಮೇಲುಗೈ ಸಾಧಿಸುವತ್ತ ಕಣ್ಣಿಟ್ಟಿದೆ. ಪಂಜಾಬ್ ತಂಡದಲ್ಲಿ ಈ ಸಾರಿ ಮಯಾಂಕ್ ಅಗರ್ವಾಲ್ ಸೇರ್ಪಡೆಯಾದರೆ ಕರುಣ್ ನಾಯರ್ ಹೊರಗುಳಿಯುವ ಸಾಧ್ಯತೆಯಿದೆ. ಇಂದಿನ ಪಂದ್ಯದಲ್ಲಿ ಆರ್‌ಸಿಬಿಯಲ್ಲಿ ಡೇಲ್ ಸ್ಟೇನ್ ಆಡುವ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸಿಲ್ಲ.
ಕಿಂಗ್ಸ್ ಇಲೆವೆನ್ ಪಂಜಾಬ್ ಸಂಭಾವ್ಯ ತಂಡ: ಕೆಎಲ್ ರಾಹುಲ್ (ವಿಕೆ), ಕ್ರಿಸ್ ಗೇಲ್, ಮಾಯಾಂಕ್ ಅಗರ್ವಾಲ್, ಸರ್ಫರಾಜ್ ಖಾನ್, ಡೇವಿಡ್ ಮಿಲ್ಲರ್, ಮನ್ದೀಪ್ ಸಿಂಗ್, ಸ್ಯಾಮ್ ಕರನ್, ಹಾರ್ಡಸ್ ವಿಲ್ಜೊಯೆನ್, ರವಿಚಂದ್ರನ್ ಅಶ್ವಿನ್ (ನಾಯಕ), ಮುರುಗನ್ ಅಶ್ವಿನ್, ಮೊಹಮ್ಮದ್ ಶಮಿ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ತಂಡ: ಪಾರ್ಥಿವ್ ಪಟೇಲ್ (ವಿಕೆಟ್ ಕೀಪರ್), ವಿರಾಟ್ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್, ಮಾರ್ಕಸ್ ಸ್ಟೊಯಿನಿಸ್, ಮೊಯಿನ್ ಅಲಿ, ಅಕ್ಷದೀಪ್ ನಾಥ್, ಪವನ್ ನೇಗಿ, ಟಿಮ್ ಸೌಥಿ, ನವದೀಪ್ ಸೈನಿ, ಯುಜುವೇಂದ್ರ ಚಾಹಲ್, ಉಮೇಶ್ ಯಾದವ್.