ಕೆಕೆಆರ್ ತಂಡ ಬ್ಯಾಕ್ ಟು ಬ್ಯಾಕ್ ಗೆದ್ದರೂ ಹಿರಿಯ ಕ್ರಿಕೆಟಿಗ ಹೇಳೋದು ಇನ್ನೊಂದು!
ಶಾರೂಖ್ ಖಾನ್ ಒಡೆತನದ, ದಿನೇಶ್ ಕಾರ್ತಿಕ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಜಯದ ರುಚಿಯನ್ನು ಕಾಣಲಾರಂಭಿಸಿದೆ. ಮೊದಲ ಪಂದ್ಯದ ಸೋಲಿನ ನಂತರ, ಬ್ಯಾಕ್ ಟು ಬ್ಯಾಕ್ ಎರಡು ಪಂದ್ಯದಲ್ಲಿ ಕೆಕೆಆರ್ ಜಯ ಸಾಧಿಸಿದೆ.
ಮುಂಬೈ ಇಂಡಿಯನ್ಸ್ ವಿರುದ್ದ 49 ರನ್ ಗಳ ಸೋಲಿನಿಂದ ಐಪಿಎಲ್ ಹಾಲೀ ಸರಣಿ ಆರಂಭಿಸಿದ ಕಾರ್ತಿಕ್ ಪಡೆ, ನಂತರದ ಪಂದ್ಯಗಳಲ್ಲಿ ಹೈದರಾಬಾದ್ ತಂಡದ ವಿರುದ್ದ ಏಳು ವಿಕೆಟ್ ಗಳ ಮತ್ತು ರಾಜಸ್ಥಾನ್ ರಾಯಲ್ಸ್ ವಿರುದ್ದ 37 ರನ್ ಗಳ ಸುಲಭ ಗೆಲುವು ಸಾಧಿಸಿತು.
ಕೆಕೆಆರ್ ತಂಡ ಆರಂಭಿಕ ಪಂದ್ಯಗಳಲ್ಲಿ ಜಯದ ಟ್ರ್ಯಾಕ್ ನಲ್ಲಿ ಬರದಿದ್ದರೆ, ತಂಡದ ನಾಯಕ ದಿನೇಶ್ ಕಾರ್ತಿಕ್ ತಲೆದಂಡ ಆಗಬಹುದು ಎನ್ನುವ ಮಾತು ಕೇಳಿ ಬರುತ್ತಿತ್ತು. ಆದರೆ, ಸದ್ಯ ಎರಡು ಪಂದ್ಯ ಗೆಲ್ಲುವ ಮೂಲಕ ದಿನೇಶ್ ಕಾರ್ತಿಕ್ ನಿಟ್ಟುಸಿರು ಬಿಡುವಂತಾಗಿದೆ.
ಆದರೂ, ಕಪಿಲ್ ದೇವ್ ನೇತೃತ್ವದ ಏಕದಿನ ವಿಶ್ವಕಪ್ ಗೆದ್ದ ತಂಡದಲ್ಲಿದ್ದ, ಅಂದಿನ ಪ್ರಮುಖ ಸ್ಟ್ರೈಕ್ ಬೌಲರ್ ಆಗಿದ್ದ ಮದನ್ ಲಾಲ್, ಕೋಲ್ಕತ್ತಾ ತಂಡಕ್ಕೆ ಕೆಲವೊಂದು ಟಿಪ್ಸ್ ಅನ್ನು ನೀಡಿದ್ದಾರೆ.

ಮೊದಲ ಪಂದ್ಯದ ಸೋಲಿನ ನಂತರ ಕೆಕೆಆರ್ ತಂಡ
"ಮೊದಲ ಪಂದ್ಯದ ಸೋಲಿನ ನಂತರ ಕೆಕೆಆರ್ ತಂಡ, ಬೌಲಿಂಗ್ ನಲ್ಲಿ ಸಾಕಷ್ಟು ಬದಲಾವಣೆಯನ್ನು ಮೈಗೂಡಿಸಿಕೊಂಡಿದೆ. ಯುವ ಬೌಲರ್ ಗಳಾದ ಶಿವಂ ಮಾವಿ, ಕಮಲೇಶ್ ನಾಗರಕೋಟಿ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಇದರ ಜೊತೆಗೆ, ವರುಣ್ ಚಕ್ರವರ್ತಿ ಉತ್ತಮವಾಗಿ ಬೌಲಿಂಗ್ ಮಾಡುತ್ತಿರುವುದರಿಂದ ಕುಲದೀಪ್ ಯಾದವ್ ಅವರಿಗೆ ಒತ್ತಡ ಕಮ್ಮಿಯಾಗಿದೆ" - ಮದಲ್ ಲಾಲ್.

ಸುನಿಲ್ ನರೇನ್
"ಆದರೆ, ಕೆಕೆಆರ್ ತಂಡ ಒಂದು ಬದಲಾವಣೆಯನ್ನು ಮಾಡಬೇಕಿದೆ. ತಂಡದ ಆರಂಭಿಕ ಆಟಗಾರರಾದ ಶುಭಂ ಗಿಲ್ ಮತ್ತು ಸುನಿಲ್ ನರೇನ್ ಜೋಡಿಯಿಂದ ಸರಿಯಾದ ಜೊತೆಯಾಟ ಬರುತ್ತಿಲ್ಲ. ಮೊದಲ ಆರು ಓವರ್ ನಲ್ಲಿ ಹೆಚ್ಚಿನ ರನ್ ಗಳಿಸುವ ಅವಕಾಶ ಇರುತ್ತದೆ. ಆದರೆ ಇದು ಸಾಧ್ಯವಾಗುತ್ತಿಲ್ಲ" - ಮದಲ್ ಲಾಲ್.

ನಾಯಕ ದಿನೇಶ್ ಕಾರ್ತಿಕ್ ಓಪನಿಂಗ್ ಬರಬೇಕು
"ಮುಂದಿನ ಪಂದ್ಯಗಳಲ್ಲಿ ಕೆಕೆಆರ್ ತಂಡ ಈ ರಿಸ್ಕ್ ಅನ್ನು ತೆಗೆದುಕೊಳ್ಳಬಾರದು. ಶುಭಂ ಗಿಲ್ ಉತ್ತಮ ಫಾರಂನಲ್ಲಿದ್ದಾರೆ. ನರೇನ್ ಬದಲಿಗೆ, ನಾಯಕ ದಿನೇಶ್ ಕಾರ್ತಿಕ್ ಓಪನಿಂಗ್ ಬರಬೇಕು. ಕಾರ್ತಿಕ್ ತನ್ನ ಬ್ಯಾಟಿಂಗ್ ಆರ್ಡರ್ ಅನ್ನು ಬದಲಾಯಿಸಕೊಳ್ಲಬೇಕು" - ಮದನ್ ಲಾಲ್.

ಹಿರಿಯ ಕ್ರಿಕೆಟಿಗ ಮದನ್ ಲಾಲ್ ಕೆಕೆಆರ್ ತಂಡಕ್ಕೆ ಸಲಹೆ
"ದಿನೇಶ್ ಕಾರ್ತಿಕ್ ಒಂದೋ ಓಪನಿಂಗ್ ಬರಬೇಕು , ಇಲ್ಲವೇ ಇಯಾನ್ ಮೋರ್ಗನ್ ಅಥವಾ ರಸೆಲ್ ನಂತರ ಬ್ಯಾಟಿಂಗ್ ಗೆ ಇಳಿಯಬೇಕು. ದಿನೇಶ್ ಕಾರ್ತಿಕ್ ಓಪನಿಂಗ್ ಬಂದರೆ, ಉತ್ತಮವಾಗಿ ಬ್ಯಾಟ್ ಬೀಸಬಲ್ಲರು"ಎಂದು ಹಿರಿಯ ಕ್ರಿಕೆಟಿಗ ಮದನ್ ಲಾಲ್ ಕೆಕೆಆರ್ ತಂಡಕ್ಕೆ ಸಲಹೆಯನ್ನು ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications