ಸುನಿಲ್ ನರೈನ್ 115 ಐಪಿಎಲ್ ಪಂದ್ಯಗಳನ್ನಾಡಿದ್ದಾರೆ, ಈಗ ಬೌಲಿಂಗ್ ಶೈಲಿ ಕುರಿತು ಅನುಮಾನವೇಕೆ?

ವೆಸ್ಟ್ ಇಂಡೀಸ್ ಮಿಸ್ಟರಿ ಸ್ಪಿನ್ನರ್, ಐಪಿಎಲ್‌ನಲ್ಲಿ ಕೆಕೆಆರ್ ಪ್ರಮುಖ ಸ್ಪಿನ್ ಬೌಲರ್ ಆಗಿರುವ ಸುನಿಲ್ ನರೈನ್ ಕುರಿತು ಅನುಮಾನಸ್ಪದ ಬೌಲಿಂಗ್ ಶೈಲಿ ಕುರಿತಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ತನ್ನ ಹೇಳಿಕೆಯನ್ನು ನೀಡಿದೆ.
2020 ರ ಅಕ್ಟೋಬರ್ 10 ರಂದು ಅಬುಧಾಬಿಯಲ್ಲಿ ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದ ನಂತರ ಕೆಕೆಆರ್‌ನ ಸುನಿಲ್ ನರೈನ್ ಅವರನ್ನು ಮ್ಯಾಚ್ ಅಧಿಕಾರಿಗಳು ಶಂಕಿತ ಕ್ರಮಕ್ಕಾಗಿ ವರದಿ ಮಾಡಿದ್ದಾರೆ.
ಆದರೆ ಈ ಕುರಿತಾಗಿ ಆಶ್ಚರ್ಯ ವ್ಯಕ್ತಪಡಿಸಿರುವ ಕೆಕೆಆರ್ ಫ್ರಾಂಚೈಸಿ ಸುನಿಲ್ ನರೈನ್ 2012ರಿಂದ 115 ಐಪಿಎಲ್ ಪಂದ್ಯಗಳನ್ನಾಡಿದ್ದಾರೆ. 2015ರ ನಂತರ 68 ಪಂದ್ಯಗಳನ್ನಾಡಿದ್ದಾರೆ. ಈ ಹಿಂದೆ ಆತನ ಬೌಲಿಂಗ್ ಶೈಲಿಯ ಕುರಿತು ಅನುಮಾನ ವ್ಯಕ್ತಪಡಿಸಿದಾಗ ಎಸ್‌ಆರ್‌ಎಎಸ್‌ಸಿ, ಐಸಿಸಿ ಮಾನ್ಯತೆ ಪಡೆದ ಸೌಲಭ್ಯದಿಂದ ಉತ್ತೀರ್ಣರಾಗಿ ಬಂದಿದ್ದಾರೆ. ಆತನ ಬೌಲಿಂಗ್ ಮೇಲಿನ ಅನುಮಾವನ್ನು SRASSC ಸಂಪೂರ್ಣ ತೆರವುಗೊಳಿಸಿದೆ.
ಇದಲ್ಲದೆ, ಈ ಋತುವಿನಲ್ಲಿ ಅವರು ತಮ್ಮ 6 ನೇ ಪಂದ್ಯವನ್ನು ಆಡುತ್ತಿದ್ದರು, ಇದುವರೆಗೂ ಪಂದ್ಯದ ಅಧಿಕಾರಿಗಳುಔಪಚಾರಿಕವಾಗಿ ಅಥವಾ ಅನೌಪಚಾರಿಕವಾಗಿ ಈ ಅನುಮಾನ ವ್ಯಕ್ತಪಡಿಸಿಲ್ಲ. ಆದರೆ ಈಗೇಕೆ ಎನ್ನುವಂತೆ ಕೆಕೆಆರ್ ಆಶ್ಚರ್ಯ ವ್ಯಕ್ತಪಡಿಸಿದೆ.
ಇದನ್ನು ಹೇಳಿದ ನಂತರ, ಐಪಿಎಲ್ ತನ್ನ ಕ್ರಮವನ್ನು ಪರಿಶೀಲಿಸಲು ಜಾರಿಗೆ ತಂದಿರುವ ಪ್ರಕ್ರಿಯೆಯನ್ನು ನಾವು ಗೌರವಿಸುತ್ತೇವೆ ಮತ್ತು ಈ ವಿಷಯದಲ್ಲಿ ಐಪಿಎಲ್ ಜೊತೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಸೂಕ್ತವಾದ ನಿರ್ಧಾರ ತ್ವರಿತವಾಗಿ ಬರಲಿದೆ ಎಂದು ನಾವು ಭಾವಿಸುತ್ತೇವೆ. ಈ ವಿಷಯವನ್ನು ತ್ವರಿತಗೊಳಿಸಲು ಐಪಿಎಲ್ ಸಹಕಾರ ನೀಡುತ್ತಿರುವುದನ್ನು ನಾವು ಪ್ರಶಂಸಿಸುತ್ತೇವೆ ಎಂದು ಕೆಕೆಆರ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications