ಗುಜರಾತ್‌ಗೆ ಸವಾಲಿನ ಮೊತ್ತದ ಗುರಿ ನೀಡಿದ ಕೆಕೆಆರ್
ಕೋಲ್ಕತ್ತಾ: ಭರವಸೆಯ ಆರಂಭಿಕ ಆಟಗಾರ ಫಿನ್ ಅಲೆನ್ (92 ರನ್) ಹಾಗೂ ಮಧ್ಯಮ ಕ್ರಮಾಂಕದ ಆಂಗ್‌ಕ್ರಿಷ್ ರಘುವಂಶಿ (ಅಜೇಯ 82) ಇವರುಗಳ ಭರ್ಜರಿ ಪ್ರದರ್ಶನ ಬಲದಿಂದ ಕೋಲ್ಕತ್ತಾ ನೈಟ್ ರೈಡರ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 19ನೇ ಆವೃತ್ತಿಯ 60ನೇ ಪಂದ್ಯದಲ್ಲಿ 248 ರನ್‌ಗಳ ಸವಾಲಿನ ಮೊತ್ತವನ್ನು ನೀಡಿದೆ.
ಟಾಸ್ ಸೋತರೂ ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದ ಕೆಕೆಆರ್ ತಂಡದ ಆರಂಭಿಕರು ಸಾಧಾರಣ ಮೊತ್ತದ ಜೊತೆಯಾಟದ ಕಾಣಿಕೆ ನೀಡಿದರು. ನಾಯಕ ಅಜಿಂಕ್ಯ ರಹಾನೆ (14) ಹಾಗೂ ಸ್ಫೋಟಕ ಬ್ಯಾಟರ್ ಫಿನ್ ಅಲೆನ್ ಮೊದಲ ವಿಕೆಟ್ 4.3 ಓವರ್‌ಗಳಲ್ಲಿ 44 ರನ್ ಜೊತೆಯಾಟದ ಕಾಣಿಕೆ ನೀಡಿದರು. ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ಫಿನ್ ಅಲೆನ್ ಇದೇ ಧಾಟಿಯಲ್ಲಿ ಬ್ಯಾಟ್ ಮಾಡಿದರು. ಇವರ ಆಟಕ್ಕೆ ಬ್ರೇಕ್ ಹಾಕುವಲ್ಲಿ ಟೈಟಾನ್ಸ್ ಬೌಲರ್‌ಗಳು ವಿಫಲರಾದರು.

ಎರಡನೇ ವಿಕೆಟ್‌ಗೆ ಫಿನ್ ಅಲೆನ್ ಹಾಗೂ ಅಂಗ್‌ಕ್ರಿಷ್ ರಘುವಂಶಿ ಜೋಡಿ ಭರ್ಜರಿ ಜೊತೆಯಾಟ ನೀಡಿತು. ಈ ಜೋಡಿ ಮಧ್ಯದ ಓವರ್‌ಗಳಲ್ಲಿ ವಿಕೆಟ್ ಬೀಳದಂತೆ ನೋಡಿಕೊಂಡು ಬ್ಯಾಟ್ ಮಾಡಿತು. ಅಲ್ಲದೆ ತಂಡ ಸವಾಲಿನ ಮೊತ್ತ ಕಲೆ ಹಾಕುವತ್ತ ದೃಷ್ಟಿ ನೆಡುವಂತೆ ಮಾಡಿತು. ಈ ಜೋಡಿ ಎರಡನೇ ವಿಕೆಟ್‌ಗೆ 41 ಎಸೆತಗಳಲ್ಲಿ 95 ರನ್ ಸೇರಿಸಿತು. ಈ ಹಂತದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ಫಿನ್ ಅಲೆನ್ ಅವರಿಗೆ ಸಾಯಿ ಕಿಶೋರ್ ಖೆಡ್ಡಾ ತೋಡಿದರು. ಫಿನ್ ಅಲೆನ್ 35 ಎಸೆತಗಳಲ್ಲಿ 93 ರನ್ ಸೇರಿಸಿದರು. ಇವರ ಕ್ಲಾಸ್ ಇನಿಂಗ್ಸ್‌ನಲ್ಲಿ 4 ಬೌಂಡರಿ, 10 ಸಿಕ್ಸರ್ ಸೇರಿವೆ.
ಅಂಗ್‌ಕ್ರಿಷ್ ಕಮಾಲ್ ಬ್ಯಾಟಿಂಗ್
3ನೇ ವಿಕೆಟ್‌ಗೆ ಅಂಗ್‌ಕ್ರಿಷ್ ರಘುವಂಶಿ ಹಾಗೂ ಸ್ಟಾರ್ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಜೋಡಿ ಸೊಗಸಾದ ಬ್ಯಾಟಿಂಗ್ ನಡೆಸಿತು. ಈ ಜೋಡಿ ಡೆತ್ ಓವರ್‌ಗಳಲ್ಲಿ ಅಬ್ಬರಿಸಿ ರನ್ ಹಿಗ್ಗಿಸಿತು. ಈ ಜೋಡಿಯ ಆಟಕ್ಕೆ ಬ್ರೇಕ್ ಹಾಕುವಲ್ಲಿ ಟೈಟಾನ್ಸ್ ತಂಡದ ಬೌಲರ್‌ಗಳು ವಿಫಲರಾದರು. ಈ ಜೋಡಿ 53 ಎಸೆತಗಳಲ್ಲಿ ಅಜೇಯ 108 ಸೇರಿಸಿತು. ಮಧ್ಯಮ ಕ್ರಮಾಂಕದ ಯುವ ಆಟಗಾರ ಅಂಗ್‌ಕ್ರಿಷ್ ರಘುವಂಶಿ 44 ಎಸೆತಗಳಲ್ಲಿ 4 ಬೌಂಡರಿ, 7 ಸಿಕ್ಸರ್ ಸಹಾಯದಿಂದ ಅಜೇಯ 82 ರನ್ ಸೇರಿಸಿದರು. ಕ್ಯಾಮರೂನ್ ಗ್ರೀನ್ 28 ಎಸೆತಗಳಲ್ಲಿ ಅಜೇಯ 52 ರನ್ ಬಾರಿಸಿದರು.
ಗುಜರಾತ್ ಟೈಟಾನ್ಸ್ ತಂಡದ ಪರ ಜೇಸನ್ ಹೋಲ್ಡರ್ ಅವರನ್ನು ಹೊರತು ಪಡಿಸಿದರೆ ಉಳಿದ ಬೌಲರ್‌ಗಳ ಎಕಾನಮಿ ಎರಡಂಕಿ ಮುಟ್ಟಿದ್ದವು. ಅಂತಿಮವಾಗಿ ಕೆಕೆಆರ್ 20 ಓವರ್‌ಗಳಲ್ಲಿ 2 ವಿಕೆಟ್‌ಗೆ 247 ರನ್ ಸೇರಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications