Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ20ಐ ದಾಖಲೆ ಬರೆಯಲು ಕೆಎಲ್ ರಾಹುಲ್‌ಗೆ ಬರೀ 26 ರನ್‌ಗಳು ಬೇಕು!

KL Rahul 26 runs away from joining Indian stalwarts in illustrious T20I list

ಬೆಂಗಳೂರು, ಡಿಸೆಂಬರ್ 5: ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾ, ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟಿ20 ಪಂದ್ಯಕ್ಕಾಗಿ ಮೈದಾನಕ್ಕಿಳಿಯಲಿದೆ. ಈ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ದಾಖಲೆಯೊಂದನ್ನು ನಿರ್ಮಿಸಲಿದ್ದಾರೆ.

ಭಾರತಕ್ಕೆ ಪ್ರವಾಸ ಬರಲಿರುವ ಕೆರಿಬಿಯನ್ನರು ಆತಿಥೇಯ ಭಾರತದ ವಿರುದ್ಧ ಡಿಸೆಂಬರ್ 6ರಂದು ಹೈದರಾಬಾದ್‌ನಲ್ಲಿ ಮೊದಲ ಟಿ20 ಪಂದ್ಯವನ್ನಾಡಲಿದ್ದಾರೆ. ಈ ವೇಳೆ ಕೆಎಲ್ ರಾಹುಲ್ ಕೇವಲ 26 ರನ್ ಗಳಿಸಿದರೂ ಟಿ20ಐ ಮೈಲಿಗಲ್ಲು ನಿರ್ಮಾಣವಾಗಲಿದೆ.

ಮೊದಲ ಟಿ20 ಪಂದ್ಯದಲ್ಲೇ ರಾಹುಲ್ 26 ರನ್ ಗಳಿಸಿದರೆ, ಅಂತಾರಾಷ್ಟ್ರೀಯ ಟಿ20ಯಲ್ಲಿ 1000+ ರನ್ ಬಾರಿಸಿದ ಭಾರತದ 7ನೇ ಬ್ಯಾಟ್ಸ್‌ಮನ್ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಹಿಟ್‌ಮ್ಯಾನ್ ರೋಹಿತ್ ಕಿಂಗ್

ಹಿಟ್‌ಮ್ಯಾನ್ ರೋಹಿತ್ ಕಿಂಗ್

ಅಂತಾರಾಷ್ಟ್ರೀಯ ಟಿ20ಯಲ್ಲಿ ಒಟ್ಟು ಅತ್ಯಧಿಕ ರನ್ ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳಲ್ಲಿ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ನಂ.1 ಸ್ಥಾನದಲ್ಲಿದ್ದಾರೆ. ರೋಹಿತ್ 2539 ರನ್‌ಗಳೊಂದಿಗೆ ಈ ಪಟ್ಟಿಯಲ್ಲಿ ಮುಂದಿದ್ದಾರೆ. 2539 ರನ್ ಗಳಿಸಿರುವ ನಾಯಕ ವಿರಾಟ್ ಕೊಹ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ.

3 ಪಂದ್ಯಗಳ ಟಿ20 ಸರಣಿ

3 ಪಂದ್ಯಗಳ ಟಿ20 ಸರಣಿ

ಭಾರತ vs ವೆಸ್ಟ್‌ ಇಂಡೀಸ್ ನಡುವಿನ ಟಿ20 ಸರಣಿ 3 ಪಂದ್ಯಗಳನ್ನು ಒಳಗೊಂಡಿದೆ. ಮೊದಲ ಪಂದ್ಯ ಡಿಸೆಂಬರ್ 6ರಂದು ಹೈದರಾಬಾದ್‌ನಲ್ಲಿ 7 pmಗೆ ಆರಂಭಗೊಳ್ಳಲಿದೆ. ಅಂದ್ಹಾಗೆ ರೋಹಿತ್ ಶರ್ಮಾ ಈ ಟಿ20 ಸರಣಿಯಲ್ಲಿ 1 ಸಿಕ್ಸರ್ ಬಾರಿಸಿದರೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 400 ಸಿಕ್ಸರ್ ಬಾರಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಆಗಿ ದಾಖಲೆ ಬರೆಯಲಿದ್ದಾರೆ.

6ನೇ ಸ್ಥಾನದಲ್ಲಿ ಯುವರಾಜ್

6ನೇ ಸ್ಥಾನದಲ್ಲಿ ಯುವರಾಜ್

ಭಾರತದ ಪರ ಟಿ20ಐನಲ್ಲಿ 1000+ ರನ್ ಬಾರಿಸಿದವರಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ 6ನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ (2539 ರನ್), ವಿರಾಟ್ ಕೊಹ್ಲಿ (2450), ಎಂಎಸ್ ಧೋನಿ (1617), ಸುರೇಶ್ ರೈನಾ (1605), ಶಿಖರ್ ಧವನ್ (1504), ಯುವರಾಜ್ ಸಿಂಗ್ (1177) ಈ ದಾಖಲೆ ಸಾಲಿನಲ್ಲಿದ್ದಾರೆ. ಕೆಎಲ್ ರಾಹುಲ್ ಸದ್ಯ 974 ಟಿ20ಐ ರನ್ ಬಾರಿಸಿದ್ದಾರೆ.

ವಿಂಡೀಸ್ ವಿರುದ್ಧ 3 ಟಿ20ಐಗಳಿಗೆ ಭಾರತ ತಂಡ

ವಿಂಡೀಸ್ ವಿರುದ್ಧ 3 ಟಿ20ಐಗಳಿಗೆ ಭಾರತ ತಂಡ

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಭ್ ಪಂತ್ (ವಿಕೆ), ಶಿವಮ್ ದೂಬೆ, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಯುಜುವೇಂದ್ರ ಚಾಹಲ್, ಕುಲದೀಪ್ ಯಾದವ್, ದೀಪಕ್ ಚಹಾರ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಸಂಜು ಸ್ಯಾಮ್ಸನ್.

ಟಿ20ಐ ಸರಣಿಗೆ ವೆಸ್ಟ್ ಇಂಡೀಸ್ ತಂಡ

ಟಿ20ಐ ಸರಣಿಗೆ ವೆಸ್ಟ್ ಇಂಡೀಸ್ ತಂಡ

ಫ್ಯಾಬಿಯನ್ ಅಲೆನ್, ಬ್ರಾಂಡನ್ ಕಿಂಗ್, ದಿನೇಶ್ ರಾಮ್ಡಿನ್, ಶೆಲ್ಡನ್ ಕಾಟ್ರೆಲ್, ಎವಿನ್ ಲೂಯಿಸ್, ಶೆರ್ಫೇನ್ ರುದರ್ಫೋರ್ಡ್, ಶಿಮ್ರಾನ್ ಹೆಟ್ಮೈರ್, ಖಾರಿ ಪಿಯರೆ, ಲೆಂಡ್ಲ್ ಸಿಮ್ಮನ್ಸ್, ಜೇಸನ್ ಹೋಲ್ಡರ್, ಕೀರನ್ ಪೊಲಾರ್ಡ್ (ನಾಯಕ), ಹೇಡನ್ ವಾಲ್ಶ್ ಜೂನಿಯರ್, ಕೀಮೋ ಪಾಲ್, ನಿಕೋಲಸ್ ಪೂರನ್ , ಕೆಸ್ರಿಕ್ ವಿಲಿಯಮ್ಸ್.

Story first published: Thursday, December 5, 2019, 11:28 [IST]
Other articles published on Dec 5, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+