ಗರ್ಲ್‌ಫ್ರೆಂಡ್ ಅಥಿಯಾ ಶೆಟ್ಟಿ ಜೊತೆ ಮೊದಲ ಬಾರಿಗೆ, ಸಾರ್ವಜನಿಕವಾಗಿ ಕಾಣಿಸಿಕೊಂಡ ಕೆ.ಎಲ್ ರಾಹುಲ್

ಟೀಂ ಇಂಡಿಯಾ ಟಿ20 ತಂಡದ ಉಪನಾಯಕ, ಐಪಿಎಲ್‌ನ ಸ್ಟಾರ್ ಐಕಾನ್‌ಗಳಲ್ಲಿ ಒಬ್ಬಾತ ಕನ್ನಡಿಗ ಕೆ.ಎಲ್ ರಾಹುಲ್ ತನ್ನ ಗರ್ಲ್‌ಫ್ರೆಂಡ್ ಅಥಿಯಾ ಶೆಟ್ಟಿ ಜೊತೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
ಕೆ.ಎಲ್ ರಾಹುಲ್ ಮತ್ತು ಬಾಲಿವುಡ್ ಸೂಪರ್ ಸ್ಟಾರ್ ಸುನಿಲ್ ಶೆಟ್ಟಿ ಮಗಳು ಅಥಿಯಾ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ ಎಂಬ ವದಂತಿಗಳಿದ್ದವು. ಆದ್ರೆ ಈ ಬಗ್ಗೆ ಇಬ್ಬರೂ ಯಾವುದೇ ಸಾರ್ವಜನಿಕ ಹೇಳಿಕೆಯಾಗಲಿ ಅಥವಾ ಕಾಣಿಸಿಕೊಂಡಿದ್ದಾಗಲಿ ಇಲ್ಲ. ಆದ್ರೆ ಪರಸ್ಪರ ಇಬ್ಬರು ಸೋಶಿಯಲ್ ಮೀಡಿಯಾದಲ್ಲಿ ಸಂವಹನ ನಡೆಸುತ್ತಿದ್ದರು. ಆದ್ರೀಗ ಮೊದಲ ಬಾರಿಗೆ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದೆ.
ಸುನಿಲ್ ಶೆಟ್ಟಿ ಅವರ ಪುತ್ರ ಅಹಾನ್ ಶೆಟ್ಟಿಯವರ ಚೊಚ್ಚಲ ಚಿತ್ರ 'ತಡಪ'ದ ಪ್ರೀಮಿಯರ್ ಶೋದಲ್ಲಿ ರಾಹುಲ್ ಅಥಿಯಾ ಜೊಡಿ ಕ್ಯಾಮೆರಾಗಳಿಗೆ ಪೋಸ್ ನೀಡಿದೆ. ಅಥಿಯಾ ಶೆಟ್ಟಿಯವರ ಸಹೋದರ ಅಹಾನ್ ಶೆಟ್ಟಿಯವರ ಚೊಚ್ಚಲ ಚಿತ್ರದ ಮೊದಲ ಪ್ರದರ್ಶನಕ್ಕೆ ಇಬ್ಬರು ಆಗಮಿಸಿದ್ದರು.
ತಡಪ್' ಚಿತ್ರದಲ್ಲಿ ತಾರಾ ಸುತಾರಿಯಾ ಕೂಡ ನಟಿಸಿದ್ದಾರೆ ಮತ್ತು ಚಿತ್ರದ ಟ್ರೇಲರ್‌ಗಳು ಸಾಕಷ್ಟು ಸಮಯದಿಂದ ಸುದ್ದಿ ಮಾಡುತ್ತಿವೆ. ಫೋಟೋ ಸೆಷನ್ ಸಮಯದಲ್ಲಿ, ಅಹಾನ್ ತನ್ನ ಗೆಳತಿ ತಾನಿಯಾ ಶ್ರಾಫ್ ಅವರೊಂದಿಗೆ ಕಾಣಿಸಿಕೊಂಡಿದ್ದು, ಈ ಜೋಡಿ ಕಳೆದ ಆರು ವರ್ಷಗಳಿಂದ ಡೇಟಿಂಗ್ ನಡೆಸುತ್ತಿದೆ.
ಫೋಟೋ ವೇಳೆ ಎಲ್ಲಿ ನಿಲ್ಲಬೇಕೆಂದು ಗೊಂದಲಗೊಂಡ ರಾಹುಲ್
ಇನ್ನು ಫೋಟೋ ಸೆಷನ್ ವೇಳೆ ಅಥಿಯಾ ಅವರ ಕುಟುಂಬ ಸದಸ್ಯರು ಒಟ್ಟಿಗೆ ಪೋಸ್ ನೀಡಿದಾಗ, ರಾಹುಲ್ ಎಲ್ಲಿ ನಿಲ್ಲಬೇಕು ಎಂದು ತಡಕಾಡಿದರು. ನಂತರ ಸುನೀಲ್ ಶೆಟ್ಟಿ ತನ್ನ ಮಗಳ ಜೊತೆ ನಿಲ್ಲುವಂತೆ ಹೇಳಿ ಕ್ಯಾಮರಾಗಳಿಗೆ ಪೋಸ್ ಕೊಟ್ಟರು.

ಅಥಿಯಾ ತನ್ನ ಸಂಗಾತಿ ಎಂದು ಬರೆದಿರುವ ಕೆ.ಎಲ್ ರಾಹುಲ್
ಜೂನ್‌ನಲ್ಲಿ, ನ್ಯೂಜಿಲೆಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಹೋಗುವ ಮೊದಲು ರಾಹುಲ್ ಅಧಿಕೃತ ದಾಖಲೆಯಲ್ಲಿ ಅಥಿಯಾ ಅವರನ್ನು ತಮ್ಮ ಪಾರ್ಟ್‌ನರ್ ಎಂದು ಪಟ್ಟಿ ಮಾಡಿದ್ದಾರೆ ಎಂದು ವರದಿಯಾಗಿದೆ. ಆದರೆ, ಅಥಿಯಾ ತನ್ನ ಸಹೋದರನೊಂದಿಗೆ ಅಲ್ಲಿಗೆ ಹೋಗಿದ್ದಳು ಎಂದು ಸುನೀಲ್ ಶೆಟ್ಟಿ ಹೇಳಿದ್ದಾರೆ.
ಶೆಟ್ಟಿ ಅವರಿಗೆ ಹಲವು ಬಾರಿ ರಾಹುಲ್ ಹಾಗೂ ಅವರ ಮಗಳ ಸಂಬಂಧದ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿದೆ. ಆದರೆ ಕೆಲ ಜಾಹೀರಾತುಗಳಲ್ಲಿ ಅವರು ಇಬ್ಬರನ್ನು ರಾಯಭಾರಿಗಳಾಗಿ ತೆಗೆದುಕೊಳ್ಳಲು ಆಯ್ಕೆ ಮಾಡಿದ್ದಾರೆ. ಅವರು ಒಟ್ಟಿಗೆ ಅದ್ಭುತವಾಗಿ ಕಾಣುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿ ಜಾರಿಕೊಂಡಿದ್ದಾರೆ.
ಐಪಿಎಲ್ 2022: ಕಡಿಮೆ ಬೆಲೆಗೆ ರೀಟೈನ್ ಆದ ಕೊಹ್ಲಿ, ಧೋನಿ: ವೇತನ ಕಡಿತಕ್ಕೆ ಹೇಗೆ ಒಪ್ಪಿಕೊಂಡ್ರು?

ಸುನಿಲ್ ಶೆಟ್ಟಿ ಕುಟುಂಬದೊಂದಿಗೆ ಕಾಣಿಸಿಕೊಂಡ ರಾಹುಲ್
ಕಳೆದ ಕೆಲ ತಿಂಗಳುಗಳಿಂದ ಇವರಿಬ್ಬರ ನಡುವೆ ಇರುವ ಪ್ರೀತಿ ಬಗ್ಗೆ ಅನೇಕ ಊಹಾಪೋಹಗಳು ಕೇಳಿಬಂದಿದ್ದವು. ಈ ಜೋಡಿ ಹಕ್ಕಿಗಳು ಎಲ್ಲೇ ಹೋದರು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಎರಡು ಕುಟುಂಬಸ್ಥರು ಇವರ ಪ್ರೇಮಕ್ಕೆ ಗ್ರೀನ್ಸಿಗ್ನಲ್ ಸಿಕ್ಕಿರುವಂತೆ ಕಾಣುತ್ತಿದೆ. ಅಷ್ಟೇ ಏಕೆ ಶೀಘ್ರದಲ್ಲೆ ರಾಹುಲ್ ಹಾಗೂ ಅಥಿಯಾ ಶೆಟ್ಟಿ ವಿವಾಹ ವಾಗಲಿದ್ದಾರೆ ಎಂಬ ವಿಚಾರವೂ ಕೇಳಿಬಂದಿದೆ. ಇದೇ ಮೊದಲ ಬಾರಿಗೆ ಕೆ.ಎಲ್. ರಾಹುಲ್, ಸುನೀಲ್ ಶೆಟ್ಟಿ ಹಾಗೂ ಅವರ ಕುಟುಂಬಸ್ಥರೊಂದಿಗೆ ಕಾಣಿಸಿಕೊಂಡಿದ್ದಾರೆ.

ಒಂದು ವರ್ಷ ಬ್ಯಾನ್ ಭಯದಲ್ಲಿರುವ ಕನ್ನಡಿಗ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) 15ನೇ ಆವೃತ್ತಿಯಿಂದ ಕೆ.ಎಲ್ ರಾಹುಲ್ ನಿಷೇಧಗೊಳ್ಳುವ ಆತಂಕ ಎದುರಾಗಿದೆ. ಏಕೆಂದರೆ ಪಂಜಾಬ್ ಕಿಂಗ್ಸ್ ಇನ್ನೂ ರೀಟೈನ್ ಮಾಡಿಕೊಳ್ಳುವ ಮೊದಲೇ ಆತ ಬೇರೊಂದ ಐಪಿಎಲ್ ತಂಡವನ್ನ ಸಂಪರ್ಕಿಸಿ ಮಾತುಕತೆ ನಡೆಸಿರುವ ಆರೋಪವನ್ನ ಎದುರಿಸುತ್ತಿದ್ದಾರೆ. ಒಂದು ವೇಳೆ ಇದು ನಿಜವಾದಲ್ಲಿ ಕೆ.ಎಲ್ ರಾಹುಲ್ ಹಾಗೂ ಸನ್‌ರೈಸರ್ಸ್ ಹೈದ್ರಾಬಾದ್‌ನ ರಶೀದ್ ಖಾನ್ ಒಂದು ವರ್ಷ ನಿಷೇಧಕ್ಕೆ ಒಳಗಾಗಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications