Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೀಮ್ ಇಂಡಿಯಾಗೆ ಸಿಹಿಸುದ್ದಿ: ಏಷ್ಯಾಕಪ್‌ಗೆ ಕಮ್‌ಬ್ಯಾಕ್ ಮಾಡಲಿದ್ದಾರೆ ಇಬ್ಬರು ಸ್ಟಾರ್‌ಗಳು

ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ ಟೂರ್ನಿಯ ಆರಂಭಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಅಕ್ಟೋಬರ್-ನವೆಂಬರ್‌ನಲ್ಲಿ ಆರಂಭವಾಗಲಿರುವ ಈ ವಿಶ್ವಕಪ್ ಟೂರ್ನಿಗೂ ಮುನ್ನ ಭಾರತ ಕ್ರಿಕೆಟ್ ತಂಡಕ್ಕೆ ಕೆಲ ಸಕಾರಾತ್ಮಕ ಸುದ್ದಿಗಳು ಹೊರಬೀಳುತ್ತಿದೆ. ಇತ್ತೀಚಿನ ದಿನಗಳಲ್ಲಿ ಟೀಮ್ ಇಂಡಿಯಾದ ಆಟಗಾರರ ಗಾಯದ ಸುದ್ದಿಗಳೇ ಅತಿಯಾಗಿದ್ದರು ಕೂಡ ಇದೀಗ ಕೆಲ ಆಟಗಾರರು ವಿಶ್ವಕಪ್ ಟೂರ್ನಿಗೂ ಮುನ್ನ ಸಂಪೂರ್ಣ ಸಿದ್ಧವಾಗುವ ಲಕ್ಷಣಗಳು ಕಾಣಿಸುತ್ತಿದೆ.

ವಿಶ್ವಕಪ್ ಟೂರ್ನಿಗೂ ಮುನ್ನ ಟೀಮ್ ಇಂಡಿಯಾದ ಮೂವರು ಆಟಗಾರರು ಚೇತರಿಕೆಯ ಹಾದಿಯಲ್ಲಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಗಾಯಗೊಂಡು ಸದ್ಯ ಎನ್‌ಸಿಎನಲ್ಲಿ ರಿಹ್ಯಾಬ್‌ನಲ್ಲಿ ಭಾಗಿಯಾಗಿರುವ ಆಟಗಾರರಾದ ಜಸ್ಪ್ರೀತ್ ಬೂಮ್ರಾ, ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಐಯ್ಯರ್ ನಿರೀಕ್ಷೆಯಂತೆಯೇ ಚೇತರಿಸಿಕೊಳ್ಳುತ್ತಿದ್ದಾರೆ. ಈ ಪೈಕಿ ಇಬ್ಬರು ಆಟಗಾರರಾದ ಕೆಎಲ್ ರಾಹುಲ್ ಹಾಗೂ ಜಸ್ಪ್ರೀತ್ ಬೂಮ್ರಾ ಏಷ್ಯಾ ಕಪ್ ಟೂರ್ನಿಗೆ ಲಭ್ಯವಾಗುವುದು ಬಹುತೇಕ ಖಚಿತವಾಗಿದೆ. ಆದರೆ ಐಯ್ಯರ್ ಲಭ್ಯತೆ ಸ್ಪಷ್ಟವಾಗಿಲ್ಲ

Jasprit Bumrah and KL Rahul recovering from injury likely to play Asia Cup in September

ಶ್ರೇಯಸ್ ಐಯ್ಯರ್ ಇನ್ನು ಕೂಡ ಸಂಪೂರ್ಣ ಚೇತರಿಕೆ ಕಂಡಿಲ್ಲ. ಹೀಗಾಗಿ ಅವರ ಬದಲಿಗೆ ಸಂಜು ಸ್ಯಾಮ್ಸನ್ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಏಕದಿನ ವಿಶ್ವಕಪ್ ತಂಡಕ್ಕೆ ಬದಲಿ ಆಟಗಾರರಾದ ಅವಕಾಶ ಪಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.

ಗಾಯದಿಂದಾಗಿ ಸುದೀರ್ಘ ಕಾಲದಿಂದ ಭಾರತ ತಂಡದಿಂದ ಹೊರಗುಳಿದಿರುವ ಜಸ್ಪ್ರೀತ್ ಬೂಮ್ರಾ ಕಳೆದ ಮಾರ್ಚ್‌ನಲ್ಲಿ ಬೆನ್ನು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅದಾದ ಬಳಿಕ ಚೇತರಿಸಿಕೊಳ್ಳುತ್ತಿದ್ದು ಎಲ್ಲವೂ ಅಂದುಕೊಂಡಂತೆಯೇ ಸಾಗುತ್ತಿದೆ. ಸದ್ಯ ಎನ್‌ಸಿಎನಲ್ಲಿ ಬೂಮ್ರಾ ಬೌಲಿಂಗ್ ಅಭ್ಯಾಸ ಕೂಡ ಆರಂಭಿಸಿದ್ದು ಮುಂದಿನ ಐರ್ಲೆಂಡ್ ಪ್ರವಾಸಕ್ಕೆ ಅವರು ಸಿದ್ಧವಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಆತುರವಾಗಿ ಐರ್ಲೆಂಡ್ ಪ್ರವಾಸಕ್ಕೆ ಆಯ್ಕೆ ಮಾಡದಿರಲು ಮ್ಯಾನೇಜ್‌ಮೆಂಟ್ ನಿರ್ಧರಿಸಿದ್ದು ಏಷ್ಯಾಕಪ್ ಟೂರ್ನಿಗೆ ಬೂಮ್ರಾ ಸಂಪೂರ್ಣವಾಗಿ ಸಿದ್ಧವಾಗಲಿದ್ದಾರೆ ಎಂದು ವರದಿಯಾಗಿದೆ

ಇನ್ನು ಕೆಎಲ್ ರಾಹುಲ್ ಕಳೆದ ಐಪಿಎಲ್ ಟೂರ್ನಿಯ ಮಧ್ಯ ಭಾಗದಲ್ಲಿ ತೊಡೆಯ ನೋವಿಗೆ ತುತ್ತಾಗಿದ್ದರು. ಅದಾದ ಬಳಿಕ ಟೂರ್ನಿಯನ್ನು ತೊರೆದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ರಾಹುಲ್ ಕೂಡ ಎನ್‌ಸಿಎನಲ್ಲಿ ರಿಹ್ಯಾಬ್‌ನಲ್ಲಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.

Story first published: Wednesday, June 28, 2023, 23:52 [IST]
Other articles published on Jun 28, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+