ಕೆ.ಎಲ್ ರಾಹುಲ್ , ಅಥಿಯಾ ಶೆಟ್ಟಿ ಸಂಬಂಧಕ್ಕೆ ಮತ್ತಷ್ಟು ಕಿಕ್: ವದಂತಿಗಳಿಗೆ ಮತ್ತಷ್ಟು ಜೀವ
ಟೀಮ್ ಇಂಡಿಯಾ ಬ್ಯಾಟಿಂಗ್ ತಾರೆ ಕೆ.ಎಲ್.ರಾಹುಲ್ ಅವರು ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಅವರೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ವದಂತಿಗಳಿಗೆ ಮತ್ತಷ್ಟು ಉತ್ತೇಜನ ನೀಡಿದ್ದಾರೆ. ಕಳೆದ ಒಂದು ವರ್ಷಕ್ಕಿಂತ ಹೆಚ್ಚಾಗಿ ಇವರಿಬ್ಬರ ಸಂಬಂಧದ ವದಂತಿಗಳು ಹರಿದಾಡಿವೆ. ಇದರ ನಡುವೆ ರಾಹುಲ್ ಇನ್‌ಸ್ಟಾಗ್ರಾಮ್ ಪೋಸ್ಟ್ ವದಂತಿಗಳಿಗೆ ಮತ್ತಷ್ಟು ರೆಕ್ಕೆ-ಪುಕ್ಕ ನೀಡಿದೆ.
ಕೆ.ಎಲ್ ರಾಹುಲ್ ಹಾಗೂ ನಟಿ ಅಥಿಯಾ ಶೆಟ್ಟಿ ಆಗಾಗ್ಗೆ ಪರಸ್ಪರರ ಪೋಸ್ಟ್‌ಗಳಲ್ಲಿ ಪ್ರೀತಿಪಾತ್ರ ಕಾಮೆಂಟ್‌ಗಳನ್ನು ಮಾಡುತ್ತಿರುತ್ತಾರೆ, ಕೆ.ಎಲ್ ರಾಹುಲ್ ಅವರು ಅಥಿಯಾ ಅವರ ಇನ್‌ಸ್ಟಾಗ್ರಾ್ ಪೋಸ್ಟ್‌ಗಳಿಗೆ ಹಲವಾರು ಬಾರಿ ಹೃದಯ ಚಿಹ್ನೆಯ ಎಮೋಜಿಗಳನ್ನು ಪೋಸ್ಟ್ ಮಾಡಿದ್ದಾರೆ. ಹೀಗಾಗಿ ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ಅಭಿಮಾನಿಗಳು ಗ್ರಹಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಪೋಸ್ಟ್
ಈ ವರ್ಷದ ಆರಂಭದಲ್ಲಿ ಥೈಲ್ಯಾಂಡ್‌ನಲ್ಲಿ ಹೊಸ ವರ್ಷದಲ್ಲಿ ಒಟ್ಟಿಗೆ ಕಾಣಿಸಿಕೊಂಡಾಗ ಇವರಿಬ್ಬರ ಸಂಬಂಧದ ವದಂತಿಗಳು ಬಲವಾದವು. ಆದರೆ ಅವರಲ್ಲಿ ಯಾರೊಬ್ಬರೂ ತಮ್ಮ ನಡುವಿನ ವದಂತಿಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಆದರೆ ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಸೂಕ್ಷ್ಮ ಸುಳಿವುಗಳನ್ನು ಬಿಡುವುದರಿಂದ ದೂರ ಸರಿಯಲಿಲ್ಲ.

ಹೊಸ ವರ್ಷವನ್ನು ಒಟ್ಟಿಗೆ ಆಚರಿಸಿದ್ದ ಜೋಡಿ
ಕಳೆದ ವರ್ಷ ಕೆ.ಎಲ್.ರಾಹುಲ್ ಅವರು ಅಥಿಯಾ ಜೊತೆಗೆ ಫೋನ್ ಬೂತ್‌ನಲ್ಲಿರುವ ಫೋಟೋವನ್ನು ಪೋಸ್ಟ್ ಮಾಡಿದ್ದರು. ಅವರು ಅದನ್ನು "ಹಲೋ, ದೇವಿ ಪ್ರಸಾದ್....?" ಎಂದು ಶೀರ್ಷಿಕೆ ಹಾಕಿದ್ದರು. ಈ ಸಾಲು ಅಥಿಯಾ ಅವರ ತಂದೆ ಸುನಿಲ್ ಶೆಟ್ಟಿಯವರ ಚಿತ್ರ ಹೇರಾ ಫೆರಿಯಿಂದ ಬಂದಿದೆ.
KXIP ನಾಯಕತ್ವ, ಕೆ.ಎಲ್ ರಾಹುಲ್ ಫಾರ್ಮ್ ಮೇಲೆ ಪರಿಣಾಮ ಬೀರಿಲ್ಲ: ಅಜಿತ್ ಅಗರ್ಕರ್
ಅಥಿಯಾ ಶೆಟ್ಟಿಗೆ ವಿಶೇಷ ಬರ್ತ್‌ಡೇ ಸಂದೇಶ
ಇದೀಗ ಕೆ.ಎಲ್. ರಾಹುಲ್ ಅವರು ತಮ್ಮ ಇತ್ತೀಚಿನ ಸಂದೇಶದೊಂದಿಗೆ ಅಥಿಯಾ ಅವರೊಂದಿಗಿನ ಸಂಬಂಧವನ್ನು ದೃಢಪಡಿಸಿದ್ದಾರೆ. ಅಥಿಯಾ 28 ನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ, ರಾಹು್ಲ್ ಅಥಿಯಾ ಜೊತೆಗಿನ ತಮ್ಮ ಮುದ್ದಾದ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ಅಥಿಯಾ ಹುಟ್ಟುಹಬ್ಬವನ್ನು ಮತ್ತಷ್ಟು ವಿಶೇಷವಾಗಿಸಲು ಯತ್ನಿಸಿದ್ದಾರೆ.

ರಾಹುಲ್-ಅಥಿಯಾ ಸಂಬಂಧವನ್ನು ಗಟ್ಟಿಗೊಳಿಸಿದ ಫೋಟೊ
ರಾಹುಲ್ ಪೋಸ್ಟ್ ಮಾಡಿರುವ ಈ ಸೆಲ್ಫಿಯಲ್ಲಿ ಕೆಎಲ್ ರಾಹುಲ್ ಅವರ ಭುಜದ ಮೇಲೆ ಅಥಿಯಾ ತನ್ನ ತಲೆಯನ್ನು ಇಟ್ಟುಕೊಂಡು ಪೋಸ್ ನೀಡಿರುವುದನ್ನು ಕಾಣಬಹುದು. ಆಶ್ಚರ್ಯಕರವಾಗಿ, ಅವರ ಪೋಟೋ ಪೋಸ್ಟ್ ಆಗಿ ಕೆಲ ನಿಮಿಷಗಳಲ್ಲಿ ಕಾಮೆಂಟ್‌ಗಳಿಂದ ತುಂಬಿತ್ತು. ಭಾರತದ ಆಲ್‌ರೌಂಡರ್ ಕ್ರುನಾಲ್ ಪಾಂಡ್ಯ ಅವರ ಪತ್ನಿ ಪಂಖುರಿ ಶರ್ಮಾ ಕೂಡ ಫೋಟೋ ಕುರಿತು ಪ್ರತಿಕ್ರಿಯಿಸಿದ್ದು, ಎರಡು ಹೃದಯ ಚಿಹ್ನೆಯ ಎಮೋಜಿಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ರಾಹುಲ್ ಮತ್ತು ಅಥಿಯಾ ಕೇವಲ ಸ್ನೇಹಿತರಿಗಿಂತ ಹೆಚ್ಚಿನವರು ಎಂಬುದು ಮತ್ತಷ್ಟು ಸಾಬೀತಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications