Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

KL Rahul: ಸಚಿನ್ ತೆಂಡುಲ್ಕರ್ ದಾಖಲೆಯ ಮೇಲೆ ಕನ್ನಡಿಗ ರಾಹುಲ್ ಕಣ್ಣು

ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಮೂರನೇ ಟೆಸ್ಟ್‌ ಪಂದ್ಯ ಲಾರ್ಡ್ಸ್‌ನಲ್ಲಿ ನಡೆಯಲಿದೆ. ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಆಂಡರ್ಸನ್‌ ತೆಂಡುಲ್ಕರ್‌ ಸರಣಿಯ ಮೂರನೇ ಪಂದ್ಯದಲ್ಲಿ ಗೆಲುವು ಸಾಧಿಸಲು ಉಭಯ ತಂಡಗಳು ಪ್ಲ್ಯಾನ್ ಮಾಡಿಕೊಂಡಿವೆ. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಬ್ಯಾಟರ್‌ಗಳು ಅಮೋಘ ಬ್ಯಾಟಿಂಗ್ ನಡೆಸಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಭಾರತದ ಪರ ಐದು ಶತಕಗಳು ದಾಖಲಾಗಿದ್ದವು. ಇನ್ನು ಎರಡನೇ ಟೆಸ್ಟ್‌ನಲ್ಲಿ ಶುಭಮನ್‌ ಗಿಲ್‌ ಕ್ಲಾಸಿಕ್ ಬ್ಯಾಟಿಂಗ್‌ ನಡೆಸಿ ಎಲ್ಲರ ಗಮನ ಸೆಳೆದಿದ್ದರು.

ಇಂಗ್ಲೆಂಡ್ ಸರಣಿಯಲ್ಲಿ ಆರಂಭಿಕರಾಗಿ ಕಾಣಿಸಿಕೊಂಡಿರುವ ಕೆಎಲ್ ರಾಹುಲ್‌ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿದ್ದಾರೆ. ಇವರು ಬ್ಯಾಟ್ ಮಾಡುವಾಗ ಔಟ್ ಸೈಡ್ ಹಾಫ್‌ ಸ್ಟಂಪ್‌ ಆಚೆಗಿನ ಚೆಂಡನ್ನು ಬಿಡುವ ರೀತಿ, ಒಳ್ಳೆಯ ಎಸೆತಗಳನ್ನು ಗುರುತಿಸಿರುವ ಧಾಟಿ, ಕೆಟ್ಟ ಎಸೆತಗಳನ್ನು ದಂಡಿಸುವ ಪರಿಯಿಂದ ಇವರು ಅಭಿಮಾಣಿಗಳ ಮನ ಗೆದ್ದಿದ್ದಾರೆ. ಇವರಿಗೆ ಲಾರ್ಡ್ಸ್‌ನಲ್ಲಿ ದಾಖಲೆ ನಿರ್ಮಿಸುವ ಅವಕಾಶ ಇದೆ.

KL Rahul Eyes Sachin Tendulkar s Lord s Record in Third England Test

ಲಾರ್ಡ್ಸ್‌ನಲ್ಲಿ ಕನ್ನಡಿಗ ಕೆಎಲ್ ರಾಹುಲ್ ಉತ್ತಮವಾಗಿ ಬ್ಯಾಟ್ ಮಾಡಿದ್ದಾರೆ. 2021ರಲ್ಲಿ ನಡೆದಿದ್ದ ಲಾರ್ಡ್ಸ್‌ ಟೆಸ್ಟ್‌ ಪಂದ್ಯದಲ್ಲಿ ರಾಹುಲ್‌ ಅವರಿಗೆ ಆಡುವ ಅವಕಾಶ ಸಿಕ್ಕಿತ್ತು. ಅಲ್ಲದೆ ಇವರು ಆರಂಭಿಕರಾಗಿ ಕಣಕ್ಕೆ ಇಳಿದರು. ಈ ಅವಕಾಶವನ್ನು ಬಳಸಿಕೊಂಡ ರಾಹುಲ್ 250 ಎಸೆತಗಳಲ್ಲಿ 12 ಬೌಂಡರಿ, 1 ಸಿಕ್ಸರ್ ಸಹಾಯದಿಂದ 129 ರನ್‌ ಸಿಡಿಸಿದ್ದಾರೆ. ಕೆಎಲ್ ರಾಹುಲ್ ಲಾರ್ಡ್ಸ್‌ನಲ್ಲಿ ಇದುವರೆಗೆ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ, ಅವರು ಅಲ್ಲಿ 152 ರನ್ ಗಳಿಸಿದ್ದಾರೆ.

ಲಾರ್ಡ್ಸ್‌ನಲ್ಲಿ ರಾಹುಲ್ ಪ್ರದರ್ಶನ

ಕೆಎಲ್ ರಾಹುಲ್‌ ಅವರಿಗೆ ಲಾರ್ಡ್ಸ್‌ ಟೆಸ್ಟ್‌ ಪಂದ್ಯದಲ್ಲಿ ಸಚಿನ್ ತೆಂಡುಲ್ಕರ್ ಅವರ ರನ್‌ಗಳ ದಾಖಲೆಯನ್ನು ಅಳಿಸಿ ಹಾಕುವ ಸುವರ್ಣ ಅವಕಾಶ ಇದೆ. ಮೂರನೇ ಟೆಸ್ಟ್‌ ಪಂದ್ಯದಲ್ಲಿ ರಾಹುಲ್‌ 44 ರನ್‌ ಬಾರಿಸಿದರೆ, ಸಚಿನ್ ತೆಂಡುಲ್ಕರ್ ಅವರ ದಾಖಲೆಯನ್ನು ಅಳಿಸಿ ಹಾಕಬಹುದು. ಟೀಮ್ ಇಂಡಿಯಾದ ದಿಗ್ಗಜ ಸಚಿನ್ ತೆಂಡುಲ್ಕರ್ ಲಾರ್ಡ್ಸ್‌ನಲ್ಲಿ ಆಡಿದ ಐದು ಪಂದ್ಯಗಳಲ್ಲಿ 195 ರನ್ ಗಳಿಸಿದ್ದಾರೆ. ಲಾರ್ಡ್ಸ್‌ನಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ದಿಲೀಪ್ ವೆಂಗ್‌ಸರ್ಕಾರ್‌ ಅವರು ಮೊದಲ ಸ್ಥಾನದಲ್ಲಿದ್ದಾರೆ. ಇವರು ಆಡಿದ 4 ಪಂದ್ಯಗಳ 8 ಇನಿಂಗ್ಸ್‌ನಲ್ಲಿ 408 ರನ್‌ ಸಿಡಿಸಿದ್ದಾರೆ.

KL Rahul Eyes Sachin Tendulkar s Lord s Record in Third England Test

ಈ ಸರಣಿಯಲ್ಲಿ ರಾಹುಲ್ ಸಾಧನೆ

ಇಂಗ್ಲೆಂಡ್‌ ಟೆಸ್ಟ್‌ ಸರಣಿಗೂ ಮುನ್ನ ಭಾರತದ ನಾಯಕ ರೋಹಿತ್ ಶರ್ಮಾ ಟೆಸ್ಟ್‌ಗೆ ವಿದಾಯ ಹೇಳಿದ ಬಳಿಕ, ಕೆಎಲ್ ರಾಹುಲ್ ಆರಂಭಿಕರಾಗಿ ಬಡ್ತಿ ಪಡೆದರು. ರೋಹಿತ್ ಶರ್ಮಾ ಇನಿಂಗ್ಸ್ ಆರಂಭಿಸಿದ್ದಾಗ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿದ್ದರು. ಈಗ ರಾಹುಲ್‌ ಆರಂಭಿಕರಾಗಿ ಕಾಣಿಸಿಕೊಂಡಿದ್ದರು. ಇವರು ಈ ಸರಣಿಯಲ್ಲಿ ಆಡಿದ 2 ಪಂದ್ಯಗಳ 4 ಇನಿಂಗ್ಸ್‌ನಲ್ಲಿ 59ರ ಸರಾಸರಿಯಲ್ಲಿ 236 ರನ್‌ ಸಿಡಿಸಿದ್ದಾರೆ.

Story first published: Wednesday, July 9, 2025, 8:40 [IST]
Other articles published on Jul 9, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+