Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

KL Rahul: ಸಚಿನ್‌ ತೆಂಡುಲ್ಕರ್‌ ದಾಖಲೆಯ ಮೇಲೆ ಕನ್ನಡಿಗ ರಾಹುಲ್ ಕಣ್ಣು

ಭಾರತ ಸದ್ಯ ಇಂಗ್ಲೆಂಡ್‌ ಪ್ರವಾಸದಲ್ಲಿದೆ. ಈ ವೇಳೆ ಟೀಮ್ ಇಂಡಿಯಾ, ಆತಿಥೇಯ ತಂಡದ ವಿರುದ್ಧ ಆಂಡರ್ಸನ್‌ ಹಾಗೂ ತೆಂಡುಲ್ಕರ್ ಸರಣಿಯ ಐದು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆಡುತ್ತಿದೆ. ಈ ಸರಣಿಯಲ್ಲಿ ಈಗಾಗಲೇ ನಾಲ್ಕು ಪಂದ್ಯಗಳನ್ನು ಆಡಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ 2-1 ರಿಂದ ಹಿನ್ನಡೆ ಅನುಭವಿಸುತ್ತಿದೆ. ಈ ಸರಣಿಯಲ್ಲಿ ಬಾರತ ತಂಡದ ಸ್ಟಾರ್ ಬ್ಯಾಟರ್‌ಗಳು ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಇದೇ ಸರಣಿಯಲ್ಲಿ ಭಾರತದ ಪರ ಕನ್ನಡಿಗ ಕೆಎಲ್ ರಾಹುಲ್‌ ಸಹ ಸೊಗಸಾದ ಬ್ಯಾಟಿಂಗ್ ನಡೆಸಿದ್ದಾರೆ.

ಮ್ಯಾಂಚೆಸ್ಟರ್‌ ಟೆಸ್ಟ್‌ನಲ್ಲಿ ಕೆಎಲ್ ರಾಹುಲ್‌ ಒಬ್ಬ ಪಕ್ಕಾ ಟೆಸ್ಟ್ ಬ್ಯಾಟರ್‌ ರೀತಿ ಬ್ಯಾಟ್ ಮಾಡಿದರು. ಅಲ್ಲದೆ ತಾಳ್ಮೆಯಿಂದ ಇನಿಂಗ್ಸ್ ಕಟ್ಟಿ ತಂಡಕ್ಕೆ ಆಧಾರವಾದರು. ಕೆಟ್ಟ ಎಸೆತಗಳನ್ನು ದಂಡಿಸುತ್ತಾ, ಒಳ್ಳೆಯ ಎಸೆತಗಳಿಗೆ ತಕ್ಕ ಮಾರ್ಯದೆ ನೀಡಿ ಆಡಿದ ಅವರು 90 ರನ್ ಗಳ ಹೋರಾಟದ ಇನ್ನಿಂಗ್ಸ್ ಕಟ್ಟಿದರು. ಮತ್ತು ಟೀಮ್ ಇಂಡಿಯಾ ನಾಲ್ಕನೇ ಟೆಸ್ಟ್‌ ಪಂದ್ಯವನ್ನು ಡ್ರಾ ಸಾಧಿಸುವಲ್ಲಿ ಸಫಲವಾಯಿತು. ಟೀಮ್ ಇಂಡಿಯಾ ಪರ ಇವರು ಆಡಿದ 4 ಟೆಸ್ಟ್‌ ಪಂದ್ಯಗಳಲ್ಲಿ 511 ರನ್ ಗಳಿಸಿದ್ದಾರೆ.

KL Rahul Eyes Sachin Tendulkar s Records in England Test Series

ಇನ್ನು ಈ ಸರಣಿಯ ಐದನೇ ಟೆಸ್ಟ್ ಪಂದ್ಯ ಓವೆಲ್‌ನಲ್ಲಿ ನಡೆಯಲಿದೆ.ಈ ಪಂದ್ಯದಲ್ಲಿ ಈಗಾಗಲೇ ರಾಹುಲ್‌ ಅಮೋಘ ಪ್ರದರ್ಶನ ನೀಡಿ ರನ್‌ಗಳನ್ನು ಕಲೆ ಹಾಕಿದ್ದಾರೆ. ಇವರು ಈ ಮೈದಾನದಲ್ಲಿ ಒಟ್ಟು 249 ಟೆಸ್ಟ್ ರನ್ ಗಳಿಸಿದ್ದು, ಇದರಲ್ಲಿ ಒಂದು ಶತಕ ಸಹ ಸೇರಿದೆ. ಓವಲ್‌ ಅಂಗಳದಲ್ಲಿ ಅತಿ ಹೆಚ್ಚು ರನ್‌ ಬಾರಿಸಿದ ಟೀಮ್ ಇಂಡಿಯಾದ ಬ್ಯಾಟರ್‌ಗಳ ಪಟ್ಟಿಯಲ್ಲಿ ಸದ್ಯ ನಾಲ್ಕನೇ ಸ್ಥಾನದಲ್ಲಿದ್ದಾರೆ. ಐದನೇ ಟೆಸ್ಟ್‌ ಪಂದ್ಯದಲ್ಲಿ ರಾಹುಲ್‌ 24 ರನ್ ಬಾರಿಸಿದ್ದೇ ಆದಲ್ಲಿ ಸಚಿನ್ ತೆಂಡುಲ್ಕರ್‌ ಅವರ ದಾಖಲೆಯನ್ನು ಅಳಿಸಿ ಹಾಕಬಹುದು.

ಓವಲ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ಅತಿ ಹೆಚ್ಚು ಸಿಡಿಸಿದ ಬ್ಯಾಟರ್ಸ್‌

ರಾಹುಲ್ ದ್ರಾವಿಡ್ - 443 ರನ್‌
ಸಚಿನ್ ತೆಂಡೂಲ್ಕರ್ - 272 ರನ್‌
ರವಿ ಶಾಸ್ತ್ರಿ - 253 ರನ್‌
ಕೆಎಲ್ ರಾಹುಲ್ - 249 ರನ್‌
ಗುಂಡಪ್ಪ ವಿಶ್ವನಾಥ್ - 241 ರನ್‌

KL Rahul Eyes Sachin Tendulkar s Records in England Test Series

ಮತ್ತೊಂದು ದಾಖಲೆ

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಒಟ್ಟಾರೆ ಇಂಗ್ಲೆಂಡ್‌ ನಲ್ಲಿ ನಾಲ್ಕು ಶತಕಗಳನ್ನು ಸಿಡಿಸಿದ್ದಾರೆ. ಇನ್ನು ಇಂಗ್ಲೆಂಡ್‌ನಲ್ಲಿ ಸಚಿನ್ ತೆಂಡುಲ್ಕರ್ ಸಹ ನಾಲ್ಕು ಟೆಸ್ಟ್‌ ಶತಕಗಳನ್ನು ಸಿಡಿಸಿದ್ದಾರೆ. ಓವಲ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಒಂದು ಶತಕ ಬಾರಿಸಿದ್ದೇ ಆದಲ್ಲಿ ಸಚಿನ್ ತೆಂಡುಲ್ಕರ್ ಅವರ ದಾಖಲೆಯನ್ನು ಮೀರಿ ನಿಲ್ಲುವ ಅವಕಾಶವನ್ನು ಹೊಂದಿದ್ದಾರೆ. ಕೆಎಲ್ ರಾಹುಲ್ 62 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 3768 ರನ್‌ಗಳನ್ನು ಗಳಿಸಿದ್ದಾರೆ, ಇದರಲ್ಲಿ 10 ಶತಕಗಳು ಮತ್ತು 19 ಅರ್ಧಶತಕ ಸಿಡಿಸಿದ್ದಾರೆ.

Story first published: Tuesday, July 29, 2025, 8:20 [IST]
Other articles published on Jul 29, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+