For Quick Alerts
ALLOW NOTIFICATIONS  
For Daily Alerts
 

ವಿಂಡೀಸ್‌ಗೆ ಶುರುವಾಯಿತು ಕನ್ನಡಿಗನ ಭಯ

ಇನ್ನು ಒಂದು ವಾರದಲ್ಲಿ ವೆಸ್ಟ್‌ ಇಂಡೀಸ್ ಹಾಗೂ ಭಾರತ ನಡುವಿನ ಟೆಸ್ಟ್ ಸರಣಿ ಆರಂಭವಾಗಲಿದೆ. ಈಗಾಗಲೇ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ಸರಣಿಗೆ ತಯಾರಿ ಸಹ ಭರದಿಂದ ಸಾಗುತ್ತಿದೆ. ಈ ನಡುವೆ ಲಕ್ನೋದಿಂದ ಬರುತ್ತಿರುವ ಸುದ್ದಿಯೊಂದು, ಭಾರತ ಪ್ರವಾಸ ಬೆಳೆಸಲಿರುವ ವಿಂಡೀಸ್ ತಂಡಕ್ಕೆ ಭಯ ಹುಟ್ಟಿಸಿದೆ. ಆ ಸುದ್ದಿ ಏನು ಎಂಬ ಬಗ್ಗೆ ಕಂಪ್ಲೀಟ್‌ ರಿಪೋರ್ಟ್‌ ಇಲ್ಲಿದೆ.

ಲಕ್ನೋದಲ್ಲಿ ಭಾರತ "ಎ" ಹಾಗೂ ಆಸ್ಟ್ರೇಲಿಯಾ "ಎ" ನಡುವಣ ಎರಡನೇ ಅನಧಿಕೃತ ಟೆಸ್ಟ್‌ ಪಂದ್ಯ ನಡೆಯುತ್ತಿದೆ. ಶುಕ್ರವಾರ ಭಾರತ 2 ವಿಕೆಟ್‌ಗೆ 169 ರನ್‌ಗಳಿಂದ ಆಟ ಮುಂದುವರೆಸಿತು. ಈ ವೇಳೆ ಮನು ಸುತಾರ್‌ ದೊಡ್ಡ ಇನಿಂಗ್ಸ್‌ ಕಟ್ಟದೇ ನಿರಾಸೆ ಅನುಭವಿಸಿದರು. ಆದರೆ ಟೀಮ್ ಇಂಡಿಯಾದ ಭರವಸೆಯ ಆಟಗಾರ ಕನ್ನಡಿಗ ಕೆಎಲ್ ರಾಹುಲ್‌ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾದರು. ಇವರು ತಮ್ಮ ಕ್ಲಾಸಿಕ್‌ ಫಾರ್ಮ್‌ನ್ನು ತವರಿನಲ್ಲೂ ಮುಂದುವರೆಸಿದ್ದಾರೆ.

KL Rahul Hits Century in A Game Puts West Indies on High Alert

ಇಂಗ್ಲೆಂಡ್‌ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಆರಂಭಿಕ ಸ್ಥಾನಕ್ಕೆ ನ್ಯಾಯ ಒದಗಿಸಿದ್ದ ಕೆಎಲ್ ರಾಹುಲ್‌, ಭಾರತ "ಎ" ಪರವೂ ಇದೇ ಸ್ಥಿರ ಪ್ರದರ್ಶನ ನೀಡಿದರು. ಇವರು ತಮ್ಮ ಕಲಾತ್ಮಕ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು. ಇವರು 143 ಎಸೆತಗಳಲ್ಲಿ 12 ಬೌಂಡರಿ ಸೇರಿದಂತೆ ಅಜೇಯ 103 ರನ್‌ ಬಾರಿಸಿದರು. ಇವರ ಈ ಭರ್ಜರಿ ಬ್ಯಾಟಿಂಗ್‌ ನಿಜಕ್ಕೂ ವಿಂಡೀಸ್‌ ಆಟಗಾರರಿಗೆ ಭಯ ಹುಟ್ಟಿಸಿರುತ್ತದೆ. ಇವರನ್ನು ಕಟ್ಟಿ ಹಾಕುವ ಬಗ್ಗೆ ಈಗಾಗಲೇ ಕೆರಿಬಿಯನ್‌ ಪಡೆ ತಲೆ ಕೆಡಿಸಿಕೊಂಡಿರುತ್ತದೆ.

ಇಂಗ್ಲೆಂಡ್‌ನಲ್ಲಿ ಪ್ರದರ್ಶನ

ಇತ್ತೀಚಿಗೆ ಇಂಗ್ಲೆಂಡ್‌ ಪ್ರವಾಸದಲ್ಲಿ ಟೀಮ್ ಇಂಡಿಯಾದ ಪರ ಆರಂಭಿಕರಾಗಿ ಕಣಕ್ಕೆ ಇಳಿದಿದ್ದ ಕೆಎಲ್ ರಾಹುಲ್ ಅವರು ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಇವರು ಆಂಡರ್ಸನ್‌ ಹಾಗೂ ತೆಂಡೂಲ್ಕರ್ ಸರಣಿಯಲ್ಲಿ ಆಡಿದ 5 ಪಂದ್ಯಗಳ 10 ಇನಿಂಗ್ಸ್‌ಗಳಲ್ಲಿ 53ರ ಸರಾಸರಿಯಲ್ಲಿ ರನ್‌ ಕಲೆ ಹಾಕಿ 532 ರನ್‌ ಸಿಡಿಸಿದ್ದಾರೆ. ಇದರಲ್ಲಿ 2 ಶತಕ ಹಾಗೂ 2 ಅರ್ಧಶತಕ ಬಾರಿಸಿ ತಂಡಕ್ಕೆ ಆಧಾರವಾಗಿದ್ದರು. ಈಗ ತವರಿನಲ್ಲಿ ವಿಂಡೀಸ್ ಬೌಲರ್‌ಗಳನ್ನು ಕಾಡಲು ಇವರು ಸಿದ್ಧತೆ ನಡೆಸಿದ್ದಾರೆ.

ರಾಹುಲ್ ಸಾಧನೆ

ಕನ್ನಡಿಗ ರಾಹುಲ್‌ ಈಗಾಗಲೇ 63 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು 35ರ ಸರಾಸರಿಯಲ್ಲಿ 3789 ರನ್‌ ಕಲೆ ಹಾಕಿದ್ದಾರೆ. ಈ ವೇಳೆ 10 ಶತಕ ಹಾಗೂ 19 ಅರ್ಧಶತಕಗಳನ್ನು ಸಹ ಸಿಡಿಸಿದ್ದಾರೆ. ಟೀಮ್ ಇಂಡಿಯಾದ ಟೆಸ್ಟ್‌ ತಂಡದಲ್ಲಿ ಹಲವು ಕ್ರಮಾಂಕದಲ್ಲಿ ಬ್ಯಾಟ್ ಮಾಡಿರುವ ಕೆಎಲ್ ರಾಹುಲ್, ಈಗ ಆರಂಭಿಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರೋಹಿತ್ ಶರ್ಮಾ ಅವರಿಂದ ತೆರವಾದ ಓಪನರ್ ಸ್ಥಾನವನ್ನು ಇವರು ತುಂಬಿದ್ದು, ಈ ಸ್ಥಾನಕ್ಕೆ ನ್ಯಾಯ ಒದಗಿಸಿದ್ದಾರೆ. ಈಗ ತವರಿನಲ್ಲೂ ತಮ್ಮ ಕ್ಷಮತೆಯನ್ನು ಸಾಬೀತು ಪಡಿಸಲು ರಾಹುಲ್ ಸಿದ್ಧರಾಗಿದ್ದಾರೆ.

Story first published: Friday, September 26, 2025, 12:53 [IST]
Other articles published on Sep 26, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+