ಪಂದ್ಯದ ವೇಳೆ ಕೆಎಲ್ ರಾಹುಲ್ ಅಪ್ಪಿದ ಹಾರ್ದಿಕ್ ಪಾಂಡ್ಯ: ವಿಡಿಯೋ

ಮುಂಬೈ, ಏಪ್ರಿಲ್ 11: ಮುಂಬೈ ಇಂಡಿಯನ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಐಪಿಎಲ್ ಪಂದ್ಯದ ವೇಳೆ ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಅಪ್ಪಿಕೊಂಡು ಅಭಿನಂದನೆ ವಿನಿಮಯಿಸಿಕೊಂಡ ದೃಶ್ಯ ಕಾಣಸಿಕ್ಕಿತು. ಕಾಫೀ ವಿತ್ ಕರಣ್ ಟಿವಿ ಟಾಕ್ ಶೋನಲ್ಲಿ ಇಬ್ಬರೂ ಈ ಮೊದಲು ವಿವಾದಕ್ಕೀಡಾಗಿದ್ದರಿಂದ ಈ ದೃಶ್ಯ ಪಂದ್ಯ ವೀಕ್ಷಿಸುತ್ತಿದ್ದವರನ್ನು ಸಹಜವಾಗೇ ಆಕರ್ಷಿಸಿತು.
ಬುಧವಾರ (ಏಪ್ರಿಲ್ 10) ಮುಂಬೈಯ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 24ನೇ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆರಂಭಿಕ ಆಟಗಾರರಾದ ರಾಹುಲ್ ಮತ್ತು ಕ್ರಿಸ್ ಗೇಲ್ ಉತ್ತಮ ಜೊತೆಯಾಟ ಆಡಿದ್ದರು. ರಾಹುಲ್ ಶತಕ (64 ಎಸೆತಗಳಿಗೆ 100 ರನ್), ಗೇಲ್ ಅರ್ಧಶತಕ (36 ಎಸೆತಗಳಿಗೆ 63 ರನ್) ಬಾರಿಸಿದ್ದರು.
ಮುಂಬೈ ಇಂಡಿಯನ್ಸ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರ 19ನೇ ಓವರ್‌ನಲ್ಲಿ ರಾಹುಲ್ 3 ಸಿಕ್ಸ್ ಮತ್ತು 1 ಬೌಂಡರಿ ಬಾರಿಸಿ ಕಾಡಿದ್ದರು. ರಾಹುಲ್-ಗೇಲ್ ಬಿರುಸಿನ ಬ್ಯಾಟಿಂಗ್ ಕಾರಣದಿಂದಲೇ ಪಂಜಾಬ್ 20 ಓವರ್‌ಗೆ 4 ವಿಕೆಟ್ ಕಳೆದು 197 ರನ್ ಪೇರಿಸಿತ್ತು.
ಪಂಜಾಬ್ ಇನ್ನಿಂಗ್ಸ್ ಮುಗಿಸಿ ಬ್ರೇಕ್‌ಗೆ ತೆರಳುವಾಗ ರಾಹುಲ್ ಅವರನ್ನು ಪಾಂಡ್ಯ ಅಪ್ಪಿ ಅಭಿನಂದಿಸಿದ್ದು ವಿಡಿಯೋದಲ್ಲಿ ಸೆರೆಯಾಗಿತ್ತು. ಅಂದ್ಹಾಗೆ ಪಂದ್ಯವನ್ನು ಮುಂಬೈ ಇಂಡಿಯನ್ಸ್ 3 ವಿಕೆಟ್‌ಗಳಿಂದ ರೋಚಕವಾಗಿ ಜಯಿಸಿತ್ತು. ಮುಂಬೈ ನಾಯಕತ್ವ ವಹಿಸಿದ್ದ ಕೀರನ್ ಪೊಲಾರ್ಡ್ 31 ಎಸೆತಗಳಿಗೆ 83 ರನ್ ಚಚ್ಚಿ ತಂಡಕ್ಕೆ ಗೆಲುವನ್ನು ತಂದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications