Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕನ್ನಡಿಗ ಕೆಎಲ್ ರಾಹುಲ್‌ಗೆ ಟೆಸ್ಟ್‌ ತಂಡದಲ್ಲಿ ದೊಡ್ಡ ಜವಾಬ್ದಾರಿ: ಏಕದಿನ ತಂಡಕ್ಕೆ ಮರಳಿದ ಇಶಾನ್‌

ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯಕ್ಕೆ ಭಾರತ ತಂಡವನ್ನು ಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕದ ಸೂಪರ್ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಅವರಿಗೆ ಟೆಸ್ಟ್‌ ತಂಡದಲ್ಲಿ ದೊಡ್ಡ ಜವಾಬ್ದಾರಿಯನ್ನು ನೀಡಲಾಗಿದೆ. ಇನ್ನು ರಿಷಭ್ ಪಂತ್ ಅವರಿಗೆ ದೊಡ್ಡ ಹಿನ್ನಡೆಯಾಗಿದೆ. ಬಿಸಿಸಿಐ ಬುಧವಾರ ತಂಡವನ್ನು ಪ್ರಕಟಿಸಿದ್ದು, ಪಂತ್ ಅವರನ್ನು ಏಕದಿನ ತಂಡದಿಂದ ಕೈಬಿಡಲಾಗಿದೆ. ತಿಂಗಳುಗಳು ಬಳಿಕ ಇಶಾನ್ ಕಿಶನ್‌ಗೆ ಭಾರತದ ಏಕದಿನ ತಂಡದಲ್ಲಿ ಸ್ಥಾನ ನೀಡಲಾಗಿದೆ.

ಭಾರತದಲ್ಲಿ ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಡೆದಿದ್ದು, ಈ ಲೀಗ್‌ ಮೇ ನಲ್ಲಿ ಅಂತ್ಯವಾಗಲಿದೆ. ಈ ಲೀಗ್‌ ಬಳಿಕ ಅಫ್ಘಾನಿಸ್ತಾನ ಏಕೈಕ ಟೆಸ್ಟ್‌ ಹಾಗೂ ಮೂರು ಏಕದಿನ ಸರಣಿಗಳನ್ನು ಆಡಲು ಭಾರತ ಪ್ರವಾಸ ಬೆಳೆಸಲಿದೆ. ಇದೇ ವೇಳೆ ಶುಭಮನ್‌ ಗಿಲ್ ಟೆಸ್ಟ್‌ ತಂಡದ ನಾಯಕರಾಗಿದ್ದಾರೆ. ಇನ್ನು ಕನ್ನಡಿಗ ಕೆಎಲ್ ರಾಹುಲ್ ಅವರಿಗೆ ಉಪನಾಯಕತ್ವ ನೀಡಲಾಗಿದೆ.

KL Rahul

ರಿಷಭ್ ಪಂತ್ ಆಗಸ್ಟ್ 2024 ರಲ್ಲಿ ಭಾರತದ ಪರ ಕೊನೆಯ ಬಾರಿಗೆ ಏಕದಿನ ಪಂದ್ಯವನ್ನು ಆಡಿದ್ದರು. ಅಂದಿನಿಂದ, ಅವರನ್ನು ಏಕದಿನ ಮಾದರಿಯ ಕ್ರಿಕೆಟ್‌ನಿಂದ ಹೊರಗಿಡಲಾಗುತ್ತಿದೆ. ಈ ಬಾರಿಯೂ ಆಯ್ಕೆದಾರರು ಪಂತ್‌ ಮೇಲೆ ವಿಶ್ವಾಸವನ್ನು ವ್ಯಕ್ತಪಡಿಸಿಲ್ಲ. ಏಕದಿನ ಕ್ರಿಕೆಟ್‌ ತಂಡದ ಸಂಯೋಜನೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಮುಂಬರುವ ಏಕದಿನ ವಿಶ್ವಕಪ್‌ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ತಂಡಕ್ಕೆ ಮರಳಿದ ಇಶಾನ್‌

ಅಕ್ಟೋಬರ್ 2023 ರ ನಂತರ ಭಾರತದ ಏಕದಿನ ತಂಡದಿಂದ ಇಶಾನ್‌ ಕಿಶನ್‌ ಹೊರ ನಡೆದಿದ್ದರು. ದೇಶೀಯ ಕ್ರಿಕೆಟ್‌, ಟಿ20 ವಿಶ್ವಕಪ್‌ ಹಾಗೂ ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಇಶಾನ್‌ ಅವರಿಗೆ ಏಕದಿನ ತಂಡದಲ್ಲಿ ಸ್ಥಾನ ನೀಡಲಾಗಿದೆ. ಆಯ್ಕೆದಾರರು ಮತ್ತೊಮ್ಮೆ ಅವರ ಮೇಲೆ ನಂಬಿಕೆ ಇಟ್ಟಿದ್ದಾರೆ.

KL Rahul

ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಪಂತ್ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ರಿಷಭ್ ಪಂತ್ ಟೆಸ್ಟ್ ತಂಡದಲ್ಲಿ ಮಹತ್ವದ ಆಟಗಾರನಾಗಿ ಉಳಿದಿದ್ದಾರೆ. ಆದರೆ ಏಕದಿನ ಸ್ವರೂಪದಲ್ಲಿ, ತಂಡದ ಆಡಳಿತವು ಎರಡು ವಿಭಿನ್ನ ಆಯ್ಕೆಗಳೊಂದಿಗೆ ಮುಂದುವರಿಯಲು ಬಯಸುತ್ತದೆ ಎಂದು ತಿಳಿಸಿದ್ದಾರೆ. ಜೂನ್ 6 ರಂದು ಮುಲ್ಲನ್‌ಪುರದಲ್ಲಿ ಪ್ರಾರಂಭವಾಗುವ ಏಕೈಕ ಟೆಸ್ಟ್ ಪಂದ್ಯಕ್ಕೆ ಹಿರಿಯ ಆಲ್‌ರೌಂಡರ್ ರವೀಂದ್ರ ಜಡೇಜಾ ಮತ್ತು ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಭಾರತ ತಂಡ: ಶುಭಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್ (ಉಪನಾಯಕ), ಸಾಯಿ ಸುದರ್ಶನ್, ರಿಷಭ್ ಪಂತ್, ದೇವದತ್ ಪಡಿಕ್ಕಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಮಾನವ್ ಸುಥರ್, ಗುರ್ನೂರ್ ಬ್ರಾರ್, ಹರ್ಷ ದುಬೆ, ಧ್ರುವ್ ಜುರೇಲ್‌,

ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ: ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ನಿತೀಶ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್ರ್, ಗುರ್ನೂರ್ ಬ್ರಾರ್, ಹರ್ಷ್ ದುಬೆ.

Story first published: Tuesday, May 19, 2026, 19:59 [IST]
Other articles published on May 19, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+