Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೊಹ್ಲಿ, ಸಚಿನ್ ದಾಖಲೆ ಮುರಿದ ಕೆಎಲ್ ರಾಹುಲ್

ಬೆಂಗಳೂರು, ಮಾರ್ಚ್ 07: ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೊಮ್ಮೆ ಭಾರತದ ಆರಂಭಿಕ ಜೋಡಿ ಉತ್ತಮ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲವಾಗಿದೆ. ಆದರೆ, ಕೆಎಲ್ ರಾಹುಲ್ ಮಾತ್ರ ಎರಡು ಇನ್ನಿಂಗ್ಸ್ ನಲ್ಲೂ ಅರ್ಧ ಶತಕ ಗಳಿಸಿ ಮೆಚ್ಚುಗೆ ಪಡೆದಿದ್ದಾರೆ. ಇದರ ಜತೆಗೆ ಕೆಲ ದಾಖಲೆಗಳನ್ನು ಮುರಿದಿದ್ದಾರೆ.

ಬಾರ್ಡರ್ -ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್‌ ಪಂದ್ಯದ ಎರಡು ಇನ್ನಿಂಗ್ಸ್ ನಲ್ಲಿ ಅರ್ಧಶತಕ ಬಾರಿಸಿದ್ದಲ್ಲದೆ, ತ್ವರಿತ ಗತಿಯಲ್ಲಿ ಸಾವಿರ ರನ್ ಗಳಿಸಿ ಕೆಎಲ್ ರಾಹುಲ್ ಸಾಧನೆ ಮಾಡಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಹಾಗೂ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ.

KL Rahul quicker than Virat Kohli and Sachin Tendulkar to reach 1000 Test runs

14 ಟೆಸ್ಟ್‌ ಪಂದ್ಯಗಳನ್ನಾಡಿರುವ ರಾಹುಲ್‌, 23 ಇನ್ನಿಂಗ್ಸ್‌ಗಳಲ್ಲಿ ಸಾವಿರ ರನ್‌ ಗಳಿಸಿದ್ದು, 199 ಅವರ ಅಧಿಕ ಸ್ಕೋರ್‌ ಆಗಿದೆ.

ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮವಾಗಿ ಆಟವಾಡುತ್ತಿದ್ದ ಕೆ.ಎಲ್‌. ರಾಹುಲ್‌‌, ಆಸೀಸ್ ತಂಡದ ನಾಯಕ ಸ್ಟೀವ್ ಸ್ಮಿತ್ ಹಿಡಿದ ಅದ್ಭುತ ಕ್ಯಾಚ್‌ಗೆ ಬಲಿಯಾದರು. ಸ್ಪಿನ್ನರ್‌ ಓ'ಕೆಫೆ ಎಸೆದ ಓವರ್‌ನಲ್ಲಿ ಸ್ಮಿತ್‌ ಅದ್ಭುತ್ ಕ್ಯಾಚ್ ಹಿಡಿದರು.

ರಾಹುಲ್ ಸಾಧನೆ:
* ಆಸ್ಟ್ರೇಲಿಯಾ ವಿರುದ್ಧ ಮೂರನೇ ಅರ್ಧಶತಕ ಹಾಗೂ ಒಂದೇ ಟೆಸ್ಟ್ ಪಂದ್ಯದಲ್ಲಿ ಸತತ ಅರ್ಧಶತಕ ದಾಖಲು.
* ತ್ವರಿತ ಗತಿಯಲ್ಲಿ 1000 ರನ್ ಗಳಿಕೆ, ಕೊಹ್ಲಿ, ಸಚಿನ್ ಸಾಧನೆ ಹಿಂದಕ್ಕೆ ಹಾಕಿದ ರಾಹುಲ್.
* 45.45 ರನ್ ಸರಾಸರಿ ಹೊಂದಿದ್ದು, ಆರಂಭಿಕ ಆಟಗಾರರ ಪೈಕಿ ಸುನಿಲ್ ಗವಾಸ್ಕರ್ ಹಾಗೂ ವೀರೇಂದ್ರ ಸೆಹ್ವಾಗ್ ನಂತರ ಸ್ಥಾನದಲ್ಲಿದ್ದಾರೆ.

ತ್ವರಿತಗತಿಯಲ್ಲಿ 1000ರನ್ ಗಳಿಕೆ(ಆರಂಭಿಕ ಆಟಗಾರರು)
* ಸುನಿಲ್ ಗವಾಸ್ಕರ್ (20 ಇನ್ನಿಂಗ್ಸ್)
* ರವಿಶಾಸ್ತ್ರಿ(20)
* ವಿರೇಂದ್ರ ಸೆಹ್ವಾಗ್ (23)
* ಕೆಎಲ್ ರಾಹುಲ್ (23)
* ಶಡಗೋಪನ್ ರಮೇಶ್ (25)
(ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+