ದ.ಆಫ್ರಿಕಾ ವಿರುದ್ಧದ ಪ್ರಥಮ ಏಕದಿನ ಪಂದ್ಯದ ಸೋಲಿಗೆ ಕಾರಣ ಯಾರೆಂಬುದನ್ನು ಬಿಚ್ಚಿಟ್ಟ ನಾಯಕ ರಾಹುಲ್

ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡು ಹರಿಣಗಳ ನಾಡಿನಲ್ಲಿ ಬೀಡುಬಿಟ್ಟಿರುವ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲಿಗೆ ನಡೆದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1 - 2 ಅಂತರದಿಂದ ಹೀನಾಯವಾಗಿ ಸೋಲನ್ನು ಅನುಭವಿಸಿತು. ಹೀಗೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸೋತು ಮುಖಭಂಗಕ್ಕೊಳಗಾದ ಟೀಮ್ ಇಂಡಿಯಾ ಈ ಬಾರಿಯೂ ಕೂಡ ಹರಿಣಗಳ ನೆಲದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆಲ್ಲುವ ತನ್ನ ಕನಸನ್ನು ನನಸು ಮಾಡಿಕೊಳ್ಳುವಲ್ಲಿ ವಿಫಲವಾಗಿದೆ.
ಹೀಗೆ ಟೆಸ್ಟ್ ಸರಣಿಯಲ್ಲಿ ಸೋತ ಟೀಮ್ ಇಂಡಿಯಾ ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಕೂಡ ಕೆಟ್ಟ ಆರಂಭವನ್ನು ಪಡೆದುಕೊಂಡಿದೆ. ಹೌದು, ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೊದಲ ಏಕದಿನ ಪಂದ್ಯ ಪಾರ್ಲ್‌ನ ಬೊಲ್ಯಾಂಡ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದಿದ್ದು ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಟೀಮ್ ಇಂಡಿಯಾ 31 ರನ್‌ಗಳ ಹೀನಾಯ ಸೋಲನ್ನು ಅನುಭವಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತನ್ನ ಮೊದಲ 3 ವಿಕೆಟ್‍ಗಳನ್ನು ವೇಗವಾಗಿ ಕರೆದುಕೊಂಡರೂ ಸಹ ಟೆಂಬಾ ಬವುಮಾ ( 110 ರನ್ ) ಮತ್ತು ವಾನ್ ಡರ್ ಡಸನ್ ( ಅಜೇಯ 129 ರನ್ ) ಅದ್ಭುತ ಆಟದ ನೆರವಿನಿಂದ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 296 ರನ್ ಗಳಿಸಿ ಟೀಮ್ ಇಂಡಿಯಾಗೆ ಗೆಲ್ಲಲು 297 ರನ್‌ಗಳ ಪೈಪೋಟಿಯುತ ಗುರಿಯನ್ನು ನೀಡಿತು.
ಈ ಮೊತ್ತವನ್ನು ಟೀಮ್ ಇಂಡಿಯಾ ಬೆನ್ನಟ್ಟುವ ಮೂಲಕ ಗೆಲುವು ಸಾಧಿಸಲಿದೆ ಎಂದು ಬಹುತೇಕರು ಊಹಿಸಿದ್ದರು. ಆದರೆ ಈ ಊಹೆಗಳನ್ನು ನಿಜ ಮಾಡುವಲ್ಲಿ ಎಡವಿರುವ ಟೀಮ್ ಇಂಡಿಯಾ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 265 ರನ್ ಕಲೆಹಾಕಿ 31 ರನ್‌ಗಳ ಸೋಲನ್ನು ಅನುಭವಿಸಿದೆ. ಇನ್ನು ಟೀಮ್ ಇಂಡಿಯಾದ ಶಿಖರ್ ಧವನ್ ( 79 ರನ್ ), ವಿರಾಟ್ ಕೊಹ್ಲಿ ( 51 ರನ್ ) ಮತ್ತು ಶಾರ್ದೂಲ್ ಠಾಕೂರ್ ( ಅಜೇಯ 50 ರನ್) ಅರ್ಧಶತಕದಾಟ ವ್ಯರ್ಥವಾಗಿದೆ. ಹೀಗೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ನಾಯಕನಾಗಿ ಮುನ್ನಡೆಸಿದ್ದ ಕೆ ಎಲ್ ರಾಹುಲ್ ಪಂದ್ಯ ಮುಗಿದ ನಂತರ ಮಾತನಾಡಿದ್ದು, ಸೋಲಿಗೆ ಕಾರಣವೇನೆಂಬುದನ್ನು ಈ ಕೆಳಕಂಡಂತೆ ತಿಳಿಸಿದ್ದಾರೆ.

ಸೋಲಿಗೆ ಕಾರಣ ಮಧ್ಯಮ ಕ್ರಮಾಂಕದ ಆಟಗಾರರು
ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ಸೋಲಿಗೆ ಭಾರತ ಬ್ಯಾಟಿಂಗ್ ವಿಭಾಗದ ಮಧ್ಯಮ ಕ್ರಮಾಂಕ ಹಾಗೂ ಪಂದ್ಯದ ಮಧ್ಯದ ವೇಳೆ ಬೌಲರ್‌ಗಳು ವಿಕೆಟ್ ತೆಗೆಯಲಾಗದೇ ಇದ್ದದ್ದು ಎಂದು ಕೆಎಲ್ ರಾಹುಲ್ ತಿಳಿಸಿದ್ದಾರೆ. 20-25 ಓವರ್‌ಗಳವರೆಗೂ ಸಮಬಲವನ್ನು ಸಾಧಿಸಿದ್ದ ಟೀಮ್ ಇಂಡಿಯಾ ನಂತರದಲ್ಲಿ ಮಧ್ಯಮ ಕ್ರಮಾಂಕದ ಆಟಗಾರರು ಉತ್ತಮ ಜತೆಯಾಟ ನೀಡುವಲ್ಲಿ ವಿಫಲವಾದ ಕಾರಣದಿಂದ ಸೋಲನುಭವಿಸಿತು ಎಂದು ರಾಹುಲ್ ತಿಳಿಸಿದ್ದಾರೆ. ಇನ್ನು ಪಂದ್ಯದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿಕೆಟ್‍ಗಳನ್ನು ವೇಗವಾಗಿ ಕಬಳಿಸಿದ ಬೌಲಿಂಗ್ ವಿಭಾಗ ಪಂದ್ಯದ ಮಧ್ಯ ವಿಕೆಟ್ ಪಡೆಯದೇ ಇದ್ದದ್ದು ಸೋಲಿಗೆ ಮತ್ತೊಂದು ಕಾರಣ ಎಂದು ರಾಹುಲ್ ತಿಳಿಸಿದ್ದಾರೆ.

ಕೊಡುಗೆ ನೀಡದ ರಾಹುಲ್, ಪಂತ್
ಇನ್ನು ಟೀಮ್ ಇಂಡಿಯಾದ ಪ್ರಮುಖ ಆಟಗಾರರಾದ ನಾಯಕ ಕೆಎಲ್ ರಾಹುಲ್ ( 12 ರನ್ ) , ರಿಷಭ್ ಪಂತ್ (16 ರನ್), ಶ್ರೇಯಸ್ ಅಯ್ಯರ್ (17 ರನ್) ಹಾಗೂ ವೆಂಕಟೇಶ್ ಅಯ್ಯರ್ (2 ರನ್) ತಂಡಕ್ಕೆ ಉತ್ತಮ ರನ್ ಗಳಿಸಿಕೊಡುವಲ್ಲಿ ವಿಫಲವಾಗಿದ್ದಾರೆ.

ದ.ಆಫ್ರಿಕಾ ಪರ ಮಿಂಚಿದ ಬವುಮಾ, ವಾನ್ ಡರ್ ಡಸನ್
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತನ್ನ ಮೊದಲ 3 ವಿಕೆಟ್‍ಗಳನ್ನು ವೇಗವಾಗಿ ಕರೆದುಕೊಂಡರೂ ಸಹ ಟೆಂಬಾ ಬವುಮಾ ( 110 ರನ್ ) ಮತ್ತು ವಾನ್ ಡರ್ ಡಸನ್ ( ಅಜೇಯ 129 ರನ್ ) ಅದ್ಭುತ ಆಟದ ನೆರವಿನಿಂದ ಎದುರಾಳಿ ಟೀಮ್ ಇಂಡಿಯಾಗೆ ಪೈಪೋಟಿಯುತ ಗುರಿಯನ್ನು ನೀಡುವಲ್ಲಿ ಯಶಸ್ವಿಯಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications