Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶತಕ ಸಿಡಿಸಿದ ರಾಹುಲ್ ಆ ಪರಿ ಸಂಭ್ರಮಾಚರಿಸಿದ ಗುಟ್ಟೇನು ಗೊತ್ತಾ?

IND vs ENG 1st T20 : ಶತಕ ಸಿಡಿಸಿದ ರಾಹುಲ್ ಆ ಪರಿ ಸಂಭ್ರಮಾಚರಿಸಿದ ಗುಟ್ಟೇನು ಗೊತ್ತಾ?
KL Rahul Reveals Cristiano Ronaldo Inspiration Behind Celebration

ಮ್ಯಾಂಚೆಸ್ಟರ್, ಜು. 5: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಮಂಗಳವಾರ ಓಲ್ಡ್ ಟ್ರಾಫರ್ಡ್ ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟಿ20 ಮೊದಲ ಪಂದ್ಯದಲ್ಲಿ ಕೆಎಲ್ ರಾಹುಲ್ ಸ್ಫೋಟಕ ಶತಕದ ನೆರವಿನಿಂದ ಗೆದ್ದಿತ್ತು. ಶತಕ ಪೂರೈಸುತ್ತಲೇ ರಾಹುಲ್ ಕೊಂಚ ಭಿನ್ನವಾಗೇ ಸೆಲೆಬ್ರೇಷನ್ ಮಾಡಿದ್ದರು. ಅದರ ಗುಟ್ಟನ್ನೀಗ ರಾಹುಲ್ ಬಿಚ್ಚಿಟ್ಟಿದ್ದಾರೆ.

ಅನೇಕ ಸಮಯ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಶತಕದ ಬರ ಎದುರಿಸಿದ್ದ ವಿಚಾರ ನನ್ನ ತಲೆಯಲ್ಲಿತ್ತು. ಇದಕ್ಕಾಗೆ ಇಂಗ್ಲೆಂಡ್ ವಿರುದ್ಧದ ಆರಂಭಿಕ ಟಿ20 ಪಂದ್ಯದಲ್ಲಿ ಶತಕ ಬಾರಿಸಿದೆ. ಈ ಶತಕ ನನಗೆ ಜಗತ್ತನ್ನೇ ಅರ್ಥೈಸಿದೆ ಎಂದು ಕೆಎಲ್ ರಾಹುಲ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಜೊತೆಗೆ ನನ್ನೀ ಸಂಭ್ರಮಕ್ಕೆ ಫುಟ್ಬಾಲಿಗ ಕ್ರಿಸ್ಚಿಯಾನೊ ರೊನಾಲ್ಡೋ ಮತ್ತು ವಿರಾಟ್ ಕೊಹ್ಲಿ ಸ್ಫೂರ್ತಿ ಎಂದೂ ರಾಹುಲ್ ತಿಳಿಸಿದ್ದಾರೆ.

ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ್ದ 160 ರನ್ ಗುರಿಯನ್ನು ಬೆನ್ನಟ್ಟಿದ ಭಾರತ 18.2 ಓವರ್ ಗಳಲ್ಲೇ ಗೆದ್ದು ಬೀಗಿತ್ತು. ಈ ಪಂದ್ಯದಲ್ಲಿ 54 ಎಸೆತಗಳನ್ನು ಎದುರಿಸಿದ್ದ ರಾಹುಲ್ 101ರನ್ ಚಚ್ಚಿದ್ದರು. ಈ ವೇಳೆ ರಾಹುಲ್ ಕೊಂಚ ಭಿನ್ನವಾಗೇ ಸಂಭ್ರಮಿಸಿದ್ದರು. ಈ ಸಂಭ್ರಮಾಚರಣೆಯ ಶೈಲಿ ಸ್ವಲ್ಪ ಕೊಹ್ಲಿಯನ್ನೇ ಹೋಲುವಂತಿತ್ತು. ಆ ಸಂದರ್ಭ ರಾಹುಲ್ ಭಾವೋದ್ವೇಗದ ಸಂಭ್ರಮ ಕಂಡು ಅತ್ತ ಪೆವಿಲಿಯನ್ ನಲ್ಲಿ ಕೂತಿದ್ದ ಧೋನಿ ನಕ್ಕಿದ್ದರು.

ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಇನ್ಮುಂದೆ 'ಸ್ಪೋರ್ಟ್ಸ್ ಇಂಡಿಯಾ'

'ಈ ಶತಕ ನನಗೆ ತುಂಬಾನೇ ಸಂತೃಪ್ತಿ ನೀಡಿದೆ. ಯಾಕೆಂದರೆ ನಾನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಾರಿಸಿದ್ದು ಕೆಲವೇ ಶತಕ. ಅದರಲ್ಲಿ ಇದು ನನಗೆ ಜಗತ್ತೇ ಗೆದ್ದಷ್ಟು ಖುಷಿ ನೀಡಿದೆ. ಈ ಶತಕ ವಿಶೇಷವಾದದು ಯಾಕೆಂದರೆ ನಾನು ಮೊದಲ ಶತಕ ಬಾರಿಸಿ ಎರಡು ವರ್ಷಗಳೇ ಕಳೆದಿತ್ತು' ಎಂದು ಬಿಸಿಸಿಐ ಡಾಟ್ ಟಿವಿ ಸಂದರ್ಶನದ ವೇಳೆ ಸಹ ಆಟಗಾರ ದಿನೇಶ್ ಕಾರ್ತಿಕ್ ಬಳಿ ರಾಹುಲ್ ಹೇಳಿಕೊಂಡಿದ್ದರು.

ರಾಹುಲ್ ಮೊದಲ ಅಂತಾರಾಷ್ಟ್ರೀಯ ಶತಕ ಬಾರಿಸಿದ್ದು 2016ರಲ್ಲಿ ಚೆನ್ನೈಯಲ್ಲಿ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ರಾಹುಲ್ ಭರ್ಜರಿ 199ರನ್ ಸಿಡಿಸಿದ್ದರು. ಅದಾಗಿ ಎರಡು ವರ್ಷಗಳ ಕಾಲ ಶತಕ ಬಾರಿಸುವುದು ಸಾಧ್ಯವಾಗಿರಲಿಲ್ಲ. ಅದಕ್ಕಾಗೇ ಓಲ್ಡ್ ಟ್ರಾಫರ್ಡ್ ನಲ್ಲಿ ರಾಹುಲ್ ಸೆಕೆಂಡ್ ಸೆಂಚುರಿಯನ್ನು ಗ್ರ್ಯಾಂಡ್ ಸೆಲೆಬ್ರೇಟ್ ಮಾಡಿದ್ದರು.

Story first published: Thursday, July 5, 2018, 2:54 [IST]
Other articles published on Jul 5, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+