ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಇನ್ಮುಂದೆ 'ಸ್ಪೋರ್ಟ್ಸ್ ಇಂಡಿಯಾ'

Sports Authority for India to be renamed Sports India

ನವದೆಹಲಿ, ಜು. 4: ಕ್ರೀಡಾರಂಗದಲ್ಲಿ ಅನೇಕ ಬದಲಾವಣೆಗಳಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಅದರಂತೆ ಇನ್ನು ಭಾರತದ ಕ್ರೀಡಾಡಳಿತ ವಿಭಾಗ 'ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ'ದ ಹೆಸರು 'ಸ್ಪೋರ್ಟ್ಸ್ ಇಂಡಿಯಾ'ಕ್ಕೆ ಬದಲಾಗಲಿದೆ. ಇದನ್ನು ಭಾರತದ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಸ್ಪಷ್ಟ ಪಡಿಸಿದ್ದಾರೆ.

ವಿಶ್ವಕಪ್ ಬಳಿಕ ಐಸಿಸಿ ಹುದ್ದೆ ತ್ಯಜಿಸಲಿರುವ ಡೇವಿಡ್ ರಿಚರ್ಡ್ಸನ್ವಿಶ್ವಕಪ್ ಬಳಿಕ ಐಸಿಸಿ ಹುದ್ದೆ ತ್ಯಜಿಸಲಿರುವ ಡೇವಿಡ್ ರಿಚರ್ಡ್ಸನ್

'ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಹೆಸರು ಸ್ಪೋರ್ಟ್ಸ್ ಇಂಡಿಯಾವಾಗಿ ಮರು ನಾಮಕರಣಗೊಳ್ಳಲಿದೆ. ಜೊತೆಗೆ ವಿಭಾಗ ಕೊಂಚ ಕಿರಿದಾಗಲಿದೆ. ಅಂದರೆ ಕೆಲ ಪೋಸ್ಟ್ ನಲ್ಲಿರುವ ಅಧಿಕಾರಿಗಳ ನಿವೃತ್ತಿಯಾದ ಬಳಿಕ ಆ ಪೋಸ್ಟ್ನ್ನು ಮತ್ತೆ ಉಳಿಸಿಕೊಳ್ಳಲಾಗುವುದಿಲ್ಲ. ಇದಲ್ಲದೆ ಅಥ್ಲೀಟ್ ಗಳಿಗೆ ನೀಡಲಾಗುವ ದೈನಂದಿನ ಆಹಾರಗಳ ಖರ್ಚುನ್ನು ಹೆಚ್ಚಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದ ಸಮಿತಿಯ ರಚನೆಯೂ ಆಗಲಿದೆ' ಎಂದು ರಾಥೋಡ್ ಎಎನ್ಐಗೆ ತಿಳಿಸಿದ್ದಾರೆ.

ಕ್ರೀಡಾಪಟುಗಳಿಗೆ ಹೆಚ್ಚಿನ ಪೌಷ್ಟಿಕಾಂಶಯುಕ್ತ ಆಹಾರ ನೀಡುವ ಸಲುವಾಗಿ ಆಹಾರ ವೆಚ್ಚವನ್ನು ಹೆಚ್ಚಿಸುವ ನಿರ್ಧಾರಕ್ಕೆ ಎಲ್ಲಡೆ ಸ್ವಾಗತ ವ್ಯಕ್ತವಾಗಿದೆ. ಬೆಂಗಳೂರು ಸಾಯ್ (ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ) ಕೇಂದ್ರದಲ್ಲಿನ ಹಾಕಿ ಆಟಗಾರರಿಗೆ ನೀಡುವ ಆಹಾರದಲ್ಲಿ ಹೆಚ್ಚಿನ ಪೌಷ್ಟಿಕಾಂಶದ ಕೊರತೆಯಿದೆ ಎಂದು ಭಾರತದ ಹಾಕಿ ಕೋಚ್ ಹರೇಂದ್ರ ಸಿಂಗ್ ಅವರು ಹಾಕಿ ಇಂಡಿಯಾದ ಮೂಲಕ ದೂರಿತ್ತ ಬಳಿಕ ಸಾಯ್ ಈ ನಿರ್ಧಾರಕ್ಕೆ ಬಂದಿದೆ.

'ಬೆಂಗಳೂರು ಸಾಯ್ ಕೇಂದ್ರದ ಬಗ್ಗೆ ಒಂದು ವಿಚಾರ ಹೇಳಲು ಬಯಸಿದ್ದೇನೆ. ಈ ವಿಭಾಗದಲ್ಲಿನ ಆಹಾರದ ಗುಣಮಟ್ಟ ಇನ್ನಿತರ ವೃತ್ತಿಪರ ಕ್ರೀಡಾಕೇಂದ್ರಗಳಲ್ಲಿನ ಆಹಾರ ಗುಣಮಟ್ಟಕ್ಕಿಂತ ಕೆಳಗಿದೆ. ಇಲ್ಲಿ ಅತಿಯಾದ ಎಣ್ಣೆ ಬಳಕೆ, ಮೂಳೆಗಳೇ ಹೆಚ್ಚಾಗಿರುವ ಮಾಂಸಾಹಾರ ನೀಡಲಾಗುತ್ತಿದೆ. ಹುಳ-ಕೀಟ-ಕೂದಲೂ ಆಹಾರದಲ್ಲಿ ಸಿಕ್ಕುತ್ತಿವೆ' ಎಂದು ಹರೇಂದರ್ ಅವರು ಕ್ರೀಡಾ ಸಚಿವಾಲಯಕ್ಕೆ ಹಾಕಿ ಇಂಡಿಯಾ ಅಧಿಕಾರಿಗಳ ಮುಖಾಂತರ ದೂರಿತ್ತಿದ್ದರು. ಇದಕ್ಕೆ ಪ್ರತಿಕ್ರಿಯೆಯೆಂಬಂತೆ ಕ್ರೀಡಾ ವಿಭಾಗದಲ್ಲಿ ಕೆಲ ಬದಲಾವಣೆಗಳಾಗಿವೆ.

Story first published: Wednesday, July 4, 2018, 22:03 [IST]
Other articles published on Jul 4, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X