ಪ್ರೇಯಸಿ ಜೊತೆಗಿನ ಫೋಟೋ ಹಾಕಿ ಪ್ರೇಮಿಗಳ ದಿನದ ಶುಭ ಕೋರಿದ ರಾಹುಲ್; ನೆಟ್ಟಿಗರಿಂದ ಕ್ಲಾಸ್

ಟೀಮ್ ಇಂಡಿಯಾದ ಉಪನಾಯಕ ಕೆಎಲ್ ರಾಹುಲ್ ಮತ್ತು ಬಾಲಿವುಡ್ ಖ್ಯಾತ ನಟ ಸುನೀಲ್ ಶೆಟ್ಟಿ ಅವರ ಪುತ್ರಿ ಅಥಿಯಾ ಶೆಟ್ಟಿ ಇಬ್ಬರೂ ಸಹ ಪರಸ್ಪರ ಪ್ರೀತಿಯಲ್ಲಿದ್ದಾರೆ ಎಂಬ ಗಾಸಿಪ್ ಹಲವಾರು ದಿನಗಳಿಂದ ಹರಿದಾಡುತ್ತಿದೆ. ಈ ಹಿಂದೆ ಇಬ್ಬರ ನಡುವೆ ಪ್ರೀತಿ ಇದೆಯಾ ಎಂಬ ಪ್ರಶ್ನೆ ಪತ್ರಿಕಾಗೋಷ್ಠಿಯೊಂದರಲ್ಲಿ ಎದುರಾದಾಗ ನಾವಿಬ್ಬರು ಒಳ್ಳೆಯ ಸ್ನೇಹಿತರು ಎಂಬ ಉತ್ತರವನ್ನು ನೀಡಿ ಗಾಸಿಪ್‌ನಿಂದ ದೂರ ಉಳಿಯುವ ಯತ್ನ ಮಾಡಿದ್ದ ಕೆಎಲ್ ರಾಹುಲ್ ಇತ್ತೀಚಿನ ದಿನಗಳಲ್ಲಿ ಮುಕ್ತವಾಗಿಯೇ ಅತಿಯಾ ಶೆಟ್ಟಿ ಮತ್ತು ತನ್ನ ನಡುವೆ ಪ್ರೀತಿ ಇದೆ ಎಂಬ ವಿಷಯವನ್ನು ಭಿನ್ನ ವಿಭಿನ್ನ ಫೋಟೋಗಳನ್ನು ಹಂಚಿಕೊಳ್ಳುವುದರ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.
ಈ ಹಿಂದೆ ಅತಿಯಾ ಶೆಟ್ಟಿ ಹುಟ್ಟುಹಬ್ಬದ ದಿನದಂದು ವಿಶೇಷವಾದ ಫೋಟೋವನ್ನು ಹಂಚಿಕೊಂಡು ಶುಭಕೋರಿದ್ದ ಕೆಎಲ್ ರಾಹುಲ್ ಇಬ್ಬರ ನಡುವೆ ಪ್ರೀತಿ ಇದೆ ಎಂಬ ವಿಷಯವನ್ನು ಅದೇ ಮೊದಲ ಬಾರಿಗೆ ಪರೋಕ್ಷವಾಗಿ ಬಹಿರಂಗಪಡಿಸಿದ್ದರು. ಇದಾದ ಬಳಿಕ ಹಲವಾರು ಖಾಸಗಿ ಕಾರ್ಯಕ್ರಮಗಳು ಹಾಗೂ ಔತಣಕೂಟಗಳಲ್ಲಿ ಜೊತೆಜೊತೆಗೆ ಕಾಣಿಸಿಕೊಂಡಿದ್ದ ಕೆಎಲ್ ರಾಹುಲ್ ಮತ್ತು ಅತಿಯಾ ಶೆಟ್ಟಿ ಜೋಡಿ ಇತ್ತೀಚಿಗಷ್ಟೆ ಅಹಾನ್ ಶೆಟ್ಟಿ ನಟನೆಯ ತಡಪ್ ಎಂಬ ಬಾಲಿವುಡ್ ಚಿತ್ರದ ಪ್ರೀಮಿಯರ್ ಶೋ ವೇಳೆಯೂ ಒಟ್ಟಿಗೆ ಕಾಣಿಸಿಕೊಂಡಿತ್ತು.
ಸುನಿಲ್ ಶೆಟ್ಟಿ ಮಗನಾದ ಅಹಾನ್ ಶೆಟ್ಟಿ ನಟಿಸಿದ್ದ ಈ ಚಿತ್ರದ ಪ್ರೀಮಿಯರ್ ಶೋಗೆ ಆಗಮಿಸಿದ್ದ ಕೆ ಎಲ್ ರಾಹುಲ್ ಜೊತೆ ಅತಿಯಾ ಶೆಟ್ಟಿ ಮತ್ತು ಆಕೆಯ ತಂದೆ ಸುನೀಲ್ ಶೆಟ್ಟಿ ಬಹಳ ಅನ್ಯೋನ್ಯವಾಗಿ ಮಾತನಾಡಿದ್ದ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು ಹಾಗೂ ಈ ಇಬ್ಬರ ನಡುವಿನ ಪ್ರೀತಿ ಮುಂದಿನ ದಿನಗಳಲ್ಲಿ ಮದುವೆ ಹಂತವನ್ನು ತಲುಪುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು.
ಹೀಗೆ ಸುನೀಲ್ ಶೆಟ್ಟಿ ಕುಟುಂಬದವರ ಜೊತೆ ಕಾಣಿಸಿಕೊಂಡಿದ್ದ ಕೆಎಲ್ ರಾಹುಲ್ ಇದೀಗ ಪ್ರೇಮಿಗಳ ದಿನಾಚರಣೆಯ ಪ್ರಯುಕ್ತ ಸಾಮಾಜಿಕ ಜಾಲತಾಣದಲ್ಲಿನ ತಮ್ಮ ಅಧಿಕೃತ ಖಾತೆಗಳಲ್ಲಿ ಅಥಿಯಾ ಶೆಟ್ಟಿ ಜೊತೆಗಿನ ವಿಶೇಷ ಫೋಟೊವೊಂದನ್ನು ಹಂಚಿಕೊಂಡು ಶುಭಾಶಯವನ್ನು ಕೋರಿದ್ದಾರೆ. ಕೆಎಲ್ ರಾಹುಲ್ ತನ್ನ ಪ್ರೇಯಸಿ ಜೊತೆ ಫೋಟೋವನ್ನು ಹಂಚಿಕೊಂಡು ಈ ರೀತಿ ಶುಭಾಶಯವನ್ನು ಕೋರಿದ್ದಕ್ಕೆ ನೆಟ್ಟಿಗರು ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದು, 3 ವರ್ಷಗಳ ಹಿಂದೆ ಇದೇ ದಿನದಂದು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾಗಿದ್ದರ ಕುರಿತು ಯಾವುದೇ ಪೋಸ್ಟ್ ಹಾಕದೆ ಈ ರೀತಿ ಪ್ರೇಮಿಗಳ ದಿನಾಚರಣೆಯ ಪೋಸ್ಟ್ ಹಂಚಿಕೊಳ್ಳುವ ಅಗತ್ಯತೆ ಇದೆಯಾ ಎಂದು ಕಿಡಿಕಾರಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications