For Quick Alerts
ALLOW NOTIFICATIONS  
For Daily Alerts
 

ಬದುಕಿನ ಅತೀ ನೆಚ್ಚಿನ ಕ್ಷಣದ ಬಗ್ಗೆ ಹೇಳಿದ ಕೆಎಲ್ ರಾಹುಲ್

KL Rahul talking about his Favourite moment in life
ಇದು ನನ್ನ ಜೀವನದ ಅತ್ಯುತ್ತಮ ಕ್ಷಣ ಎಂದ KL Rahul | Oneindia Kannada

ಬೆಂಗಳೂರು: ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್‌ ಕಮ್ ವಿಕೆಟ್ ಕೀಪರ್ ಕೆಎಲ್ ರಾಹುಲ್ ತನ್ನ ಬದುಕಿನ ಅತೀ ನೆಚ್ಚಿನ ಕ್ಷಣ ಯಾವುದೆಂದು ಹೇಳಿಕೊಂಡಿದ್ದಾರೆ. ತಾನು ಟೆಸ್ಟ್‌ ಕ್ಯಾಪ್ ಪಡೆದುಕೊಂಡಿದ್ದು ತನ್ನ ಬದುಕಿನ ಅತೀ ಇಷ್ಟದ ಕ್ಷಣ ಎಂದು ರಾಹುಲ್ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಒಂದು ಪೋಸ್ಟ್‌ ಹಾಕಿಕೊಂಡಿದ್ದಾರೆ. ಇದರಲ್ಲಿ, 'ಬದುಕಿನ ನೆಚ್ಚಿನ ಕ್ಷಣ' ಎಂದು ಬರೆದುಕೊಂಡಿದ್ದಾರೆ. ಸದ್ಯ ರಾಹುಲ್ ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತೀಯ ತಂಡದ ಜೊತೆಗಿದ್ದಾರೆ. ಆಗಸ್ಟ್ 4ರಿಂದ ಭಾರತ-ಇಂಗ್ಲೆಂಡ್ ಮಧ್ಯೆ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ.

29ರ ಹರೆಯದ ಕೆಎಲ್ ರಾಹುಲ್ 2014ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಈ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ರಾಹುಲ್ ಕ್ರಮವಾಗಿ 3, 1 ರನ್ ಗಳಿಸಿದ್ದರು.

36 ಟೆಸ್ಟ್‌ ಪಂದ್ಯಗಳನ್ನಾಡಿರುವ ರಾಹುಲ್ 2006 ರನ್ ಗಳಿಸಿದ್ದಾರೆ. ಇದರಲ್ಲಿ 5 ಶತಕ, 11 ಅರ್ಧ ಶತಕಗಳು ಸೇರಿವೆ. ಇನ್ನು 38 ಏಕದಿನ ಪಂದ್ಯಗಳಲ್ಲಿ 1509 ರನ್, 48 ಟಿ20ಐ ಪಂದ್ಯಗಳಲ್ಲಿ 1557 ರನ್, 88 ಐಪಿಎಲ್ ಪಂದ್ಯಗಳಲ್ಲಿ 2978 ರನ್ ದಾಖಲೆ ರಾಹುಲ್ ಹೆಸರಿನಲ್ಲಿದೆ.

Story first published: Tuesday, July 13, 2021, 14:09 [IST]
Other articles published on Jul 13, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+