ಕೆಎಲ್ ರಾಹುಲ್ ಆಟ ಕೊಂಡಾಡಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಶತಕ ಸಿಡಿಸಿದ್ದಾರೆ. ಕೆಎಲ್ ರಾಹುಲ್ 137 ಎಸೆತಗಳಲ್ಲಿ 101 ರನ್ ಗಳಿಸಿ ಅಬ್ಬರಿಸಿದ್ದಾರೆ.
ರಾಹುಲ್ ಇನ್ನಿಂಗ್ಸ್‌ನಲ್ಲಿ 14 ಬೌಂಡರಿ ಮತ್ತು 4 ಸಿಕ್ಸರ್ ಸೇರಿವೆ. ಇದೇ ವೇಳೆ ಕೆಎಲ್ ರಾಹುಲ್ ಶತಕದ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪ್ರತಿಕ್ರಿಯಿಸಿದ್ದಾರೆ.

ಸಚಿನ್ ತೆಂಡೂಲ್ಕರ್ ಸಮಾಜಿಕ ತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಕೆಎಲ್ ರಾಹುಲ್ ಉತ್ತಮವಾಗಿ ಆಡಿದ್ದಾರೆ. ನನ್ನನ್ನು ಹೆಚ್ಚು ಪ್ರಭಾವಿಸಿದ ವಿಷಯವೆಂದರೆ ಕೆಎಲ್ ರಾಹುಲ್ ಅವರ ಯೋಚನೆ. ಇದರ ಹೊರತಾಗಿ ಅವರ ಫುಟ್‌ವರ್ಕ್ ಅತ್ಯುತ್ತಮ, ನಿಖರ ಮತ್ತು ಖಚಿತವಾಗಿತ್ತು. ಬ್ಯಾಟ್ಸ್‌ಮನ್ ಆಗಿ ನೀವು ಸರಿಯಾಗಿ ಯೋಚಿಸುತ್ತಿರುವಾಗ ಇದು ಸಾಧ್ಯವಾಗುತ್ತದೆ' ಎಂದು ಬರೆದುಕೊಂಡಿದ್ದಾರೆ.
ಮಾಸ್ಟರ್ ಬ್ಲಾಸ್ಟರ್ ತಮ್ಮ ಪೋಸ್ಟ್‌ನಲ್ಲಿ ಮತ್ತಷ್ಟು ಬರೆದಿದ್ದಾರೆ - ಈ ಟೆಸ್ಟ್ ಸರಣಿಯ ದೃಷ್ಟಿಯಿಂದ ಕೆಎಲ್ ರಾಹುಲ್ ಅವರ ಶತಕ ಬಹಳ ಮುಖ್ಯವಾಗಿದೆ. ಭಾರತ ತಂಡ 245 ರನ್ ಗಳಿಸಿತು. ಈ ಸ್ಕೋರ್‌ನಿಂದ ಟೀಮ್ ಇಂಡಿಯಾ ಸಮಾಧಾನ ಪಡಲಿದೆ. ಮೊದಲ ದಿನದಲ್ಲಿ ಭಾರತ ತಂಡವು ಒಂದು ಸಮಯದಲ್ಲಿ ಇದ್ದ ಸ್ಥಾನದಿಂದ, 245 ರನ್‌ಗಳನ್ನು ತಲುಪುವುದು ಉತ್ತಮ ಸ್ಕೋರ್ ಎಂದು ಪರಿಗಣಿಸಲಾಗುತ್ತದೆ ಎಂದು ಬರೆದಿದ್ದಾರೆ.

ಸಚಿನ್ ತೆಂಡೂಲ್ಕರ್ ಅವರು ದಕ್ಷಿಣ ಆಫ್ರಿಕಾದ ವೇಗದ ಬೌಲರ್‌ಗಳಾದ ನಾಂದ್ರೆ ಬರ್ಗರ್ ಮತ್ತು ಜೆರಾಲ್ಡ್ ಕೋಟ್ಜಿ ಅವರನ್ನು ಹೊಗಳಿದರು. ದಕ್ಷಿಣ ಆಫ್ರಿಕಾಕ್ಕೆ ನಾಂದ್ರೆ ಬರ್ಗರ್ ಮತ್ತು ಜೆರಾಲ್ಡ್ ಕೋಟ್ಜಿ ಉತ್ತಮ ಕೊಡುಗೆ ನೀಡುತ್ತಿದ್ದಾರೆ ಎಂದು ಅವರು ಹೇಳಿದರು. ಆದರೆ ದಕ್ಷಿಣ ಆಫ್ರಿಕಾ ತಂಡವು ಅವರ ಬೌಲಿಂಗ್ ಮಾಡಿದ ಧಾಟಿಯಿಂದ ತೃಪ್ತಿ ಹೊಂದುವುದಿಲ್ಲ ಎಂದು ನಾನು ಭಾವಿಸುತ್ತೇನೆ.
ಟೀಮ್ ಇಂಡಿಯಾದ ಮೊದಲ ಇನ್ನಿಂಗ್ಸ್ 245 ರನ್‌ಗಳಿಗೆ ಸೀಮಿತಯಿತು. ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ ಬ್ಯಾಟಿಂಗ್‌ಗೆ ಬಂದಿತು ಮತ್ತು ಭೋಜನ ವಿರಮಾದ ವರೆಗೆ 1 ವಿಕೆಟ್‌ಗೆ 49 ರನ್ ಆಗಿತ್ತು. ದಕ್ಷಿಣ ಆಫ್ರಿಕಾ ಪರ ಡೀನ್ ಎಲ್ಗರ್ ಮತ್ತು ಟೋನಿ ಡಿ ಜಾರ್ಜಿ ಕ್ರೀಸ್‌ನಲ್ಲಿದ್ದಾರೆ. ಅದೇ ವೇಳೆ ಏಡನ್ ಮಾರ್ಕ್ರಾಮ್ ಪೆವಿಲಿಯನ್ ಗೆ ಮರಳಿದ್ದಾರೆ. ಏಡೆನ್ ಮಾರ್ಕ್ರಾಮ್ ಅವರನ್ನು ಮೊಹಮ್ಮದ್ ಸಿರಾಜ್ ಔಟ್ ಮಾಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications