
ಟೀಮ್ ಇಂಡಿಯಾದ ಮುಖ್ಯ ಕೋಚ್ ದ್ರಾವಿಡ್
ಟೀಮ್ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರಾಗಿದ್ದರು. ದ್ರಾವಿಡ್ 2008 ರಿಂದ 2010 ರವರೆಗೆ ಆರ್‌ಸಿಬಿಗಾಗಿ ಆಡಿದ್ದರು. ಅವರು 2009 ರಲ್ಲಿ ಫೈನಲ್‌ಗೆ ಪ್ರವೇಶಿಸಿದ ಆರ್‌ಸಿಬಿ ತಂಡದಲ್ಲಿ ದ್ರಾವಿಡ್ ಇದ್ದರು.
ಮೂರು ಸೀಸನ್‌ನಲ್ಲಿ ರಾಹುಲ್ ದ್ರಾವಿಡ್ ಆರ್‌ಸಿಬಿ ಪರವಾಗಿ 43 ಪಂದ್ಯಗಳನ್ನಾಡಿದ್ದಾರೆ. ಆರ್‌ಸಿಬಿ ಪರವಾಗಿ 898 ರನ್‌ಗಳನ್ನು ಗಳಿಸಿದ್ದಾರೆ. 2010ರ ನಂತರ ಆರ್‌ಸಿಬಿ ಅವರನ್ನು ಬಿಡುಗಡೆ ಮಾಡಿದ ನಂತರ ಮೂರು ಸೀಸನ್‌ಗಳಲ್ಲಿ ರಾಜಸ್ಥಾನ್ ರಾಯಲ್ಸ್ ಪರವಾಗಿ ಆಡಿದರು.
ಮೊಹಮ್ಮದ್ ಶಮಿ ಯಾಕೆ ಅತ್ಯುತ್ತಮ ಬೌಲರ್ ಎನ್ನುವುದಕ್ಕೆ ಇಲ್ಲಿವೆ ಮೂರು ಕಾರಣಗಳು

ಡೇನಿಯಲ್ ಕ್ರಿಶ್ಚಿಯನ್ ನೆದರ್ಲೆಂಡ್ಸ್‌ಗೆ ಸಲಹೆಗಾರ
ಡೇನಿಯಲ್ ಕ್ರಿಶ್ಚಿಯನ್ ತನ್ನ ಐಪಿಎಲ್ ವೃತ್ತಿಜೀವನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಎರಡು ಪಂದ್ಯಗಳನ್ನು ಆಡಿದ್ದಾರೆ. 2013 ರಲ್ಲಿ ಮೊದಲ ಬಾರಿಗೆ ತಂಡವನ್ನು ಸೇರಿಕೊಂಡರು. ಆ ಋತುವಿನಲ್ಲಿ ಎರಡು ಪಂದ್ಯಗಳಲ್ಲಿ ಅವರು ಆಡಿದರು. ಎರಡು ಪಂದ್ಯಗಳಲ್ಲಿ ಆರು ರನ್ ಗಳಿಸಿದ ಅವರು ವಿಕೆಟ್ ಪಡೆಯಲು ವಿಫಲರಾದರು.
ಆರ್‌ಸಿಬಿ ಅವರನ್ನು 2014ಕ್ಕಿಂತ ಮುಂಚಿತವಾಗಿ ಬಿಡುಗಡೆ ಮಾಡಿತು. 2021ರಲ್ಲಿ ಅವರು ಮತ್ತೆ ಆರ್‌ಸಿಬಿ ತಂಡಕ್ಕೆ ಆಯ್ಕೆಯಾದರು, ಹೆಚ್ಚಿನ ಅವಕಾಶಗಳನ್ನು ಪಡೆದರು ಉತ್ತಮ ಪ್ರದರ್ಶನ ನೀಡಲಿಲ್ಲ. ಒಂಬತ್ತು ಪಂದ್ಯಗಳಲ್ಲಿ ಕೇವಲ 14 ರನ್ ಗಳಿಸಿ ನಾಲ್ಕು ವಿಕೆಟ್ ಪಡೆದರು. ಅವರು ಐಪಿಎಲ್ 2022 ರಲ್ಲಿ ಆಡಲಿಲ್ಲ ಮತ್ತು ಈಗ ನೆದರ್ಲ್ಯಾಂಡ್ಸ್ ತಂಡದ ಸಲಹೆಗಾರರಾಗಿದ್ದಾರೆ.

ನಮೀಬಿಯಾದ ಸಹಾಯಕ ಕೋಚ್ ಅಲ್ಬಿ ಮೊರ್ಕೆಲ್
ದಕ್ಷಿಣ ಆಫ್ರಿಕಾದ ಮಾಜಿ ಆಲ್‌ರೌಂಡರ್ ಆಲ್ಬಿ ಮೊರ್ಕೆಲ್ ಐಪಿಎಲ್ 2014 ರಲ್ಲಿ ಆರ್‌ಸಿಬಿಗಾಗಿ ಏಳು ಪಂದ್ಯಗಳನ್ನು ಆಡಿದರು. ಅವರು ಆ ಪಂದ್ಯಗಳಲ್ಲಿ 45 ರನ್ ಗಳಿಸಿದರು ಮತ್ತು ನಾಲ್ಕು ವಿಕೆಟ್‌ಗಳನ್ನು ಪಡೆದರು. ಮುಂದಿನ ಋತುವಿನಲ್ಲಿ ಆರ್‌ಸಿಬಿ ಅವರನ್ನು ಉಳಿಸಿಕೊಳ್ಳಲಿಲ್ಲ.
ಮೊರ್ಕೆಲ್ ಪ್ರಸ್ತುತ ನಮೀಬಿಯಾ ತಂಡದ ಸಹಾಯಕ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ವರ್ಷದ ಟಿ20 ವಿಶ್ವಕಪ್ ವೇಳೆಯೂ ತಂಡದ ಕೋಚಿಂಗ್ ಸಿಬ್ಬಂದಿಯ ಸದಸ್ಯರಾಗಿದ್ದರು.

ದಕ್ಷಿಣ ಆಫ್ರಿಕಾದ ಮುಖ್ಯ ಕೋಚ್ ಮಾರ್ಕ್ ಬೌಚರ್
ದಕ್ಷಿಣ ಆಫ್ರಿಕಾದ ಮುಖ್ಯ ಕೋಚ್ ಮಾರ್ಕ್ ಬೌಚರ್ ಕೂಡ ಆರ್‌ಸಿಬಿ ತಂಡದ ಭಾಗವಾಗಿದ್ದರು. ಅವರು 2008 ರಿಂದ 2010 ರವರೆಗೆ ಆರ್‌ಸಿಬಿಗಾಗಿ ಆಡಿದರು. 27 ಪಂದ್ಯಗಳಲ್ಲಿ ಅವರು 388 ರನ್ ಗಳಿಸಿದರು ಮತ್ತು 13 ಕ್ಯಾಚ್ ಪಡೆದರು.
ಬೌಚರ್ 2011 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ಗಾಗಿ ತಮ್ಮ ಐಪಿಎಲ್ ವೃತ್ತಿಜೀವನದ ಕೊನೆಯ ಋತುವನ್ನು ಆಡಿದರು. ಅವರು ಸ್ವಲ್ಪ ಸಮಯದಿಂದ ದಕ್ಷಿಣ ಆಫ್ರಿಕಾದ ಕೋಚಿಂಗ್ ಸಿಬ್ಬಂದಿಯ ಭಾಗವಾಗಿದ್ದಾರೆ. ಟಿ20 ವಿಶ್ವಕಪ್ ನಂತರ ಐಪಿಎಲ್‌ನ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

ಆಸ್ಟ್ರೇಲಿಯಾದ ಮುಖ್ಯ ಕೋಚ್ ಮೆಕ್‌ಡೊನಾಲ್ಡ್
ಆಂಡ್ರ್ಯೂ ಮೆಕ್‌ಡೊನಾಲ್ಡ್ ಐಪಿಎಲ್ 2012 ಮತ್ತು 2013 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಐದು ಪಂದ್ಯಗಳನ್ನು ಆಡಿದರು. ಆದರು ಅವರು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ, ಆಡಿದ ಐದು ಪಂದ್ಯಗಳಲ್ಲಿ ಕೇವಲ 44 ರನ್ ಗಳಿಸಿದರು ಮತ್ತು 6 ವಿಕೆಟ್ ಪಡೆದರು.
ಆಸ್ಟ್ರೇಲಿಯಾದ ಮುಖ್ಯ ಕೋಚ್ ಆಗಿ ಜಸ್ಟಿನ್ ಲ್ಯಾಂಗರ್ ನಂತರ ಆಂಡ್ರ್ಯೂ ಮೆಕ್‌ಡೊನಾಲ್ಡ್ ಆಸ್ಟ್ರೇಲಿಯಾದ ಮುಖ್ಯ ಕೋಚ್ ಆಗಿ ನೇಮಕವಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಆಸೀಸ್ ತಮ್ಮ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಳ್ಳಬಹುದೇ ಎಂಬುದು ಕುತೂಹಲಕಾರಿಯಾಗಿದೆ.


Click it and Unblock the Notifications












