ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೊಹಮ್ಮದ್ ಶಮಿ ಯಾಕೆ ಅತ್ಯುತ್ತಮ ಬೌಲರ್ ಎನ್ನುವುದಕ್ಕೆ ಇಲ್ಲಿವೆ ಮೂರು ಕಾರಣಗಳು

T20 World Cup: These Three Reasons Make Mohammed Shami Best Bowler For India

ಐಸಿಸಿ ಟಿ20 ವಿಶ್ವಕಪ್‌ನ ಎಂಟನೇ ಆವೃತ್ತಿಗೆ ಮುನ್ನ ಗಾಯಗೊಂಡಿರುವ ಜಸ್ಪ್ರೀತ್ ಬುಮ್ರಾ ಬದಲಿಗೆ ಮೊಹಮ್ಮದ್ ಶಮಿ ಭಾರತದ 15 ಸದಸ್ಯರ ತಂಡದಲ್ಲಿ ಅವಕಾಶ ಪಡೆದರು. 2021ರಲ್ಲಿ ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಮೊಹಮ್ಮದ್ ಶಮಿ ಭಾರತಕ್ಕಾಗಿ ಆಡಿದ್ದರು. 5 ಪಂದ್ಯಗಳಲ್ಲಿ 6 ವಿಕೆಟ್ ಪಡೆದಿದ್ದರು, ಆದರೆ ಮೂರು ಪಂದ್ಯಗಳಲ್ಲಿ ವಿಕೆಟ್ ಪಡೆಯಲು ವಿಫಲರಾಗಿದ್ದರು.

ಆ ಇಬ್ಬರ ಕೈಯಲ್ಲಿ ಭಾರತದ ಟಿ20 ವಿಶ್ವಕಪ್ ಭವಿಷ್ಯ ಎಂದ ಸಂಜಯ್ ಬಂಗಾರ್ಆ ಇಬ್ಬರ ಕೈಯಲ್ಲಿ ಭಾರತದ ಟಿ20 ವಿಶ್ವಕಪ್ ಭವಿಷ್ಯ ಎಂದ ಸಂಜಯ್ ಬಂಗಾರ್

ನಿರ್ಣಾಯಕ ಪಂದ್ಯಗಳಲ್ಲಿ ಶಮಿ ತಮ್ಮ ಬೌಲಿಂಗ್‌ನಲ್ಲಿ ಹೆಚ್ಚಿನ ರನ್ ಬಿಟ್ಟುಕೊಟ್ಟಿದ್ದರು. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಓವರ್ ಗೆ 11 ಕ್ಕಿಂತ ಹೆಚ್ಚಿನ ರನ್ ಬಿಟ್ಟುಕೊಟ್ಟರು. ನ್ಯೂಜಿಲೆಂಡ್ ವಿರುದ್ಧ ಕೂಡ ಹೆಚ್ಚು ರನ್ ನೀಡಿದರು. ವಿಶ್ವಕಪ್ ಮುಗಿದ ನಂತರ ಟೀಂ ಇಂಡಿಯಾ ತನ್ನ ಪಂದ್ಯಗಳಲ್ಲಿ ಶಮಿಯನ್ನು ಆಯ್ಕೆ ಮಾಡಲಿಲ್ಲ. ಅವರು ಭಾರತ ತಂಡದಿಂದ ಬಹುತೇಕ ಕಡೆಗಣಿಸಲ್ಪಟ್ಟಿದ್ದರು.

ಆದರೆ, ಈ ಬಾರಿ ಮೊಹಮ್ಮದ್ ಶಮಿ ಮತ್ತೆ ತಂಡಕ್ಕೆ ಆಯ್ಕೆಯಾಗಿದ್ದಾರೆ. 2022ರ ಐಪಿಎಲ್‌ನಲ್ಲಿ ಅವರು ನೀಡಿದ ಪ್ರದರ್ಶನ ಮತ್ತು ಜಸ್ಪ್ರೀತ್ ಬುಮ್ರಾ ಗಾಯಗೊಂಡು ಹೊರಗುಳಿದ ಕಾರಣ ತಂಡದಲ್ಲಿ ಸ್ಥಾನ ಪಡೆದರು. ಕಳೆದ ಬಾರಿಗಿಂತ ಶಮಿ ಈ ಬಾರಿ ಉತ್ತಮವಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲೇ ಅದನ್ನು ಸಾಬೀತುಪಡಿಸಿದ್ದಾರೆ. ಈ ಬಾರಿ ಬುಮ್ರಾ ಸ್ಥಾನವನ್ನು ಸಮರ್ಥವಾಗಿ ತುಂಬಲಿದ್ದಾರೆ. ಅವರು ಯಾಕೆ ಮುಖ್ಯ ಎನ್ನುವುದಕ್ಕೆ ಮೂರು ಕಾರಣಗಳನ್ನು ನೀಡಬಹುದಾಗಿದೆ.

2022ರ ಐಪಿಎಲ್‌ನಲ್ಲಿ ಶಮಿ ಮಿಂಚು

2022ರ ಐಪಿಎಲ್‌ನಲ್ಲಿ ಶಮಿ ಮಿಂಚು

ಮೊಹಮ್ಮದ್ ಶಮಿ ಇಂಡಿಯನ್ ಪ್ರೀಮಿಯರ್ ಲೀಗ್‌ನ ಕಳೆದ ಎರಡು ಆವೃತ್ತಿಗಳಲ್ಲಿ ಪ್ರಭಾವಶಾಲಿ ಪ್ರದರ್ಶನಗಳನ್ನು ನೀಡಿದ್ದಾರೆ. ಈ ವರ್ಷ ಗುಜರಾತ್ ಟೈಟಾನ್ಸ್‌ನ ಬೌಲಿಂಗ್ ಪಡೆಯನ್ನು ಮುನ್ನಡೆಸಿದರು ಮತ್ತು ಮೊದಲ ಋತುವಿನಲ್ಲಿ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳಲು ಸಹಾಯ ಮಾಡಿದರು. 16 ಪಂದ್ಯಗಳಲ್ಲಿ 20 ವಿಕೆಟ್ ಪಡೆದು ಮಿಂಚಿದರು.

2021 ರಲ್ಲಿ, ಅವರು ಪಂಜಾಬ್ ಕಿಂಗ್ಸ್‌ಗಾಗಿ 7.5 ರ ಎಕನಾಮಿಯಲ್ಲಿ 14 ಪಂದ್ಯಗಳಲ್ಲಿ 19 ವಿಕೆಟ್‌ಗಳನ್ನು ಪಡೆದರು. 2020 ರ ಆವೃತ್ತಿಯಲ್ಲಿಯೂ ಸಹ, ಅವರು ಪಂಜಾಬ್‌ಗಾಗಿ ಒಂದು ಸಂದರ್ಭದಲ್ಲಿ ಸೂಪರ್ ಓವರ್‌ನಲ್ಲಿ ಕೇವಲ 6 ರನ್‌ಗಳನ್ನು ರಕ್ಷಿಸಿದರು.

ಐಪಿಎಲ್‌ನಲ್ಲಿ ಎರಡು ಋತುವಿನಲ್ಲಿ ಅವರು ಅಂತಿಮ ಓವರ್‌ಗಳ ಬೌಲರ್ ಆಗಿದ್ದರು. ಈ ಬಾರಿ ವಿಶ್ವಕಪ್‌ನಲ್ಲಿ ಅದೇ ಪ್ರದರ್ಶನವನ್ನು ಮುಂದುವರೆಸುವ ವಿಶ್ವಾಸದಲ್ಲಿದ್ದಾರೆ.

Pak Vs Afg: ಶಾಹೀನ್ ಅಫ್ರಿದಿ ಯಾರ್ಕರ್‌ಗೆ ಸೀದಾ ಆಸ್ಪತ್ರೆ ಸೇರಿದ ಅಫ್ಘಾನಿಸ್ತಾನ ಬ್ಯಾಟರ್

ಅಪಾರ ಅನುಭವ ಹೊಂದಿರುವ ಶಮಿ

ಅಪಾರ ಅನುಭವ ಹೊಂದಿರುವ ಶಮಿ

ಮೊಹಮ್ಮದ್ ಶಮಿ ಅಪಾರ ಅನುಭವಿ ಬೌಲರ್ ಆಗಿದ್ದಾರೆ. ಭಾರತದ ಪರವಾಗಿ 17 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ಐಪಿಎಲ್‌ನಲ್ಲಿ 93 ಪಂದ್ಯಗಳನ್ನಾಡಿರು ಶಮಿ ತಮ್ಮ ಅನುಭವವನ್ನು ಬಳಸುವ ಮೂಲಕ ತಂಡಕ್ಕೆ ಸಹಕಾರಿಯಾಗಲಿದ್ದಾರೆ.

ಆಟದ ಆರಂಭಿಕ ಓವರ್‌ಗಳಲ್ಲಿ ಚೆಂಡನ್ನು ಸ್ವಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಅಂತಿಮ ಓವರ್‌ಗಳಲ್ಲಿ ಯಾರ್ಕರ್‌ಗಳನ್ನು ಎಸೆಯುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅವರು ಅವರು ತಮ್ಮ ಯಾರ್ಕರ್ ಬೌಲಿಂಗ್‌ನಲ್ಲಿ ಅದ್ಭುತವಾಗಿದ್ದಾರೆ. ಒತ್ತಡಗಳಲ್ಲಿ ಹೇಗೆ ಬೌಲಿಂಗ್ ಮಾಡಬೇಕು ಎನ್ನುವುದು ಶಮಿಗೆ ಅರಿವಿದೆ. ಅವರ ಅನುಭವವೇ ಪ್ರಮುಖ ಅಸ್ತ್ರ

ಅಭ್ಯಾಸ ಪಂದ್ಯದಲ್ಲಿ ಭಾರತವನ್ನು ಗೆಲ್ಲಿಸಿದ ಶಮಿ

ಅಭ್ಯಾಸ ಪಂದ್ಯದಲ್ಲಿ ಭಾರತವನ್ನು ಗೆಲ್ಲಿಸಿದ ಶಮಿ

ಕೋವಿಡ್ 19 ಸೋಂಕಿಗೆ ತುತ್ತಾದ ಕಾರಣ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿಗಳನ್ನು ತಪ್ಪಿಸಿಕೊಂಡರು. ಕೆಲ ಸಮಯದವರೆಗೆ ಅವರು ಕ್ರಿಕೆಟ್‌ನಿಂದ ದೂರವಿದ್ದರು. ಆದರೂ, ಅವರು ಅತ್ಯುತ್ತಮವಾಗಿ ಬೌಲಿಂಗ್ ಅಭ್ಯಾಸ ಮಾಡಿದರು.

ಭಾರತ ಆಸ್ಟ್ರೇಲಿಯಾ ವಿರುದ್ಧ ಆಡಿದ ಅಭ್ಯಾಸ ಪಂದ್ಯದಲ್ಲಿ, ವಿಶ್ವಕಪ್‌ನಲ್ಲಿ ಮೊಹಮ್ಮದ್ ಶಮಿಯಿಂದ ನಾವು ಏನನ್ನು ನಿರೀಕ್ಷಿಸಬಹುದು ಎನ್ನುವ ಬಗ್ಗೆ ಅವರು ಸೂಚನೆ ನೀಡಿದ್ದಾರೆ. ಪಂದ್ಯದ ಕೊನೆಯ ಓವರ್ ನಲ್ಲಿ 11 ರನ್ ರಕ್ಷಿಸಿಕೊಳ್ಳಬೇಕಾಗಿದ್ದ ಸಮಯದಲ್ಲಿ ಅವರು ಬೌಲಿಂಗ್ ಮಾಡಲು ಬಂದರು. ಪಂದ್ಯದಲ್ಲಿ ಅದು ಅವರ ಮೊದಲನೇ ಓವರ್ ಆಗಿತ್ತು. ಒತ್ತಡವನ್ನು ಶಮಿ ಹೇಗೆ ನಿಭಾಯಿಸುತ್ತಾರೆ ಎನ್ನುವ ಕುತೂಹಲ ಎಲ್ಲರಿಗೂ ಇತ್ತು.

ಅಂತಿಮ ಓವರ್ ಬೌಲಿಂಗ್‌ನ ಅದ್ಭುತ ಪ್ರದರ್ಶನದಲ್ಲಿ, ಪ್ರತಿಭಾನ್ವಿತ ವೇಗಿ ಓವರ್‌ನಲ್ಲಿ 3 ವಿಕೆಟ್‌ಗಳನ್ನು ಪಡೆದರು, ಎರಡು ಪರಿಪೂರ್ಣ ಯಾರ್ಕರ್ ಎಸೆದರು. ಹಾಗೆಯೇ ರನ್-ಔಟ್ ಕೂಡ ಮಾಡಿದರು ಬೀರಿದರು. ಅವರ ಪ್ರದರ್ಶನದಿಂದ ಭಾರತ ಅಭ್ಯಾಸ ಪಂದ್ಯವನ್ನು ಗೆದ್ದುಕೊಂಡಿತು.

ಈ ಎಲ್ಲಾ ಕಾರಣಗಳನ್ನು ಪರಿಗಣಿಸಿ, ಮುಂಬರುವ ವಿಶ್ವಕಪ್‌ನಲ್ಲಿ ಮೊಹಮ್ಮದ್ ಶಮಿ ಭಾರತ ತಂಡದ ಪ್ರಮುಖ ಬೌಲರ್ ಆಗಲಿದ್ದಾರೆ ಎಂದು ನಂಬಲಾಗಿದೆ.

Story first published: Thursday, October 20, 2022, 5:15 [IST]
Other articles published on Oct 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X