Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಬಿಡಿ ಒಬ್ಬರೇ 360 ಡಿಗ್ರಿ ಆಟಗಾರ ಎಂದ ಸೂರ್ಯಕುಮಾರ್ ಯಾದವ್‌ಗೆ ಎಬಿಡಿ ಕೊಟ್ಟ ಉತ್ತರ ಹೇಗಿತ್ತು ನೋಡಿ

Know How AB De Villiers Reacts To Suryakumar Yadav Comment Over 360 Degree Player Comment

ಟಿ20 ವಿಶ್ವಕಪ್‌ನಲ್ಲಿ ಮಾತ್ರವಲ್ಲದೆ ಎಲ್ಲಾ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಸೂರ್ಯಕುಮಾರ್ ಯಾದವ್ ಸದ್ಯ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು 2022 ರಲ್ಲಿ 1,000 ಕ್ಕೂ ಹೆಚ್ಚು ಟಿ20 ರನ್‌ಗಳೊಂದಿಗೆ ಐಸಿಸಿ ಶ್ರೇಯಾಂಕದಲ್ಲಿ ನಂಬರ್ ಒನ್ ಟಿ20 ಆಟಗಾರರಾಗಿದ್ದಾರೆ.

ಸೂರ್ಯಕುಮಾರ್ ಯಾದವ್ ಅವರು ಕ್ರೀಸ್‌ನಲ್ಲಿನ ಶಾಂತ ಮತ್ತು ಸಂಯೋಜನೆಯ ಸ್ವಭಾವಕ್ಕಾಗಿ ಮತ್ತು ಅವರ ಶಾಟ್ ಆಯ್ಕೆಗಳಿಗಾಗಿ ನಿರ್ದಿಷ್ಟವಾಗಿ ಪ್ರಶಂಸಿಸಲ್ಪಟ್ಟಿದ್ದಾರೆ, ಎಲ್ಲಾ ದಿಕ್ಕುಗಳಲ್ಲಿ ಸಿಕ್ಸರ್‌ಗಳನ್ನು ಹೊಡೆಯುವ ಸಾಮರ್ಥ್ಯ ಹೊಂದಿದ್ದಾರೆ, ಇದು ಅವರನ್ನು ಭಾರತದ ಮಿಸ್ಟರ್.360 ಬ್ಯಾಟರ್ ಎಂದು ಹಲವರು ಕರೆದಿದ್ದಾರೆ.

ಭಾರತ ಜಿಂಬಾಬ್ವೆ ನಡುವಿನ ಪಂದ್ಯದದಲ್ಲಿ ಅವರು ಕೇವಲ 25 ಎಸೆತಗಳಲ್ಲಿ 61 ರನ್ ಗಳಿಸಿದರು, ಜಿಂಬಾಬ್ವೆ ವಿರುದ್ದ ಅವರು ಹೊಡೆದ ಸಿಕ್ಸರ್ ಗಳು ಅವರನ್ನು ಮತ್ತೆ 360 ಡಿಗ್ರಿ ಪ್ಲೇಯರ್ ಎಂದು ಸಾಬೀತು ಪಡಿಸಿತು. ಅವರ ಅತ್ಯುತ್ತಮ ಪ್ರದರ್ಶನದ ಮೂಲಕ ಭಾರತ 186 ರನ್‌ ಕಲೆಹಾಕಿತು.

ಪಂದ್ಯದ ನಂತರ ತಮ್ಮನ್ನು ಎಬಿ ಡಿವಿಲಿಯರ್ಸ್‌ಗೆ ಹೋಲಿಕೆ ಮಾಡುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಜಗತ್ತಿನಲ್ಲಿ ಒಬ್ಬನೇ 360 ಡಿಗ್ರಿ ಆಟಗಾರನಿದ್ದಾರೆ, ನಾನು ಅವರಂತೆ ಆಡಲು ಪ್ರಯತ್ನಿಸುತ್ತೇನೆ" ಎಂದು ಹೇಳಿದರು.

Know How AB De Villiers Reacts To Suryakumar Yadav Comment Over 360 Degree Player Comment

ಸೂರ್ಯಕುಮಾರ್ ಯಾದವ್‌ ಹೇಳಿಕೆಗೆ ಎಬಿಡಿ ಪ್ರತಿಕ್ರಿಯೆ

ಸೂರ್ಯಕುಮಾರ್ ಹೇಳಿಕೆಗೆ ಮಿಸ್ಟರ್ 360 ಆಟಗಾರ ಎಬಿ ಡಿವಿಲಿಯರ್ಸ್ ಪ್ರತಿಕ್ರಿಯೆ ನೀಡಿದ್ದಾರೆ. "ಆದಷ್ಟು ಬೇಗ ನೀವು ನನಗಿಂದ ಅತ್ಯುತ್ತಮ 360 ಡಿಗ್ರಿ ಪ್ಲೇಯರ್ ಆಗುತ್ತೀರಿ. ಇಂದು ಚೆನ್ನಾಗಿ ಆಡಿದ್ದೀರಿ." ಎಂದು ಅವರು ಟ್ವೀಟ್ ಮಾಡಿದ್ದಾರೆ.

ಸೂರ್ಯಕುಮಾರ್ ಯಾದವ್ ಭಾರತೀಯ ಕ್ರಿಕೆಟ್ ತಂಡದ ಹೊಸ ತಾರೆಯಾಗಿ ಹೊರಹೊಮ್ಮುತ್ತಿದ್ದಾರೆ, ಅವರ ಪ್ರಭಾವಶಾಲಿ ಬ್ಯಾಟಿಂಗ್ ಶೈಲಿಯಿ ಬಗ್ಗೆ ಅನೇಕ ಮಾಜಿ ಆಟಗಾರರು ಆಶ್ಚರ್ಯಚಕಿತರಾಗಿದ್ದಾರೆ. ಬೌಲರ್ ಗಳನ್ನು ಅವರು ವಿಶ್ಲೇಷಿಸುವ ಬಗ್ಗೆ ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಕಠಿಣ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಇನ್ನಿಂಗ್ಸ್‌ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಯಿತು. ಬೌಲಿಂಗ್‌ಗೆ ಸಹಕಾರಿಯಾದ ಪಿಚ್‌ನಲ್ಲಿ 68 ರನ್‌ ಗಳಿಸಿ, ಭಾರತ ಗೌರವಾನ್ವಿತ ಮೊತ್ತ ಕಲೆಹಾಕಲು ಕಾರಣವಾಗಿದ್ದರು.

ಆ ಸಮಯದಲ್ಲಿ ಬೌಲರ್ ಏನು ಬೌಲ್ ಮಾಡುತ್ತಾನೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಅದು ಆ ಕ್ಷಣದಲ್ಲಿ ಸ್ವಲ್ಪ ಪೂರ್ವನಿರ್ಧರಿತವಾಗಿದೆ. ನಾನು ಬಹಳಷ್ಟು ರಬ್ಬರ್-ಬಾಲ್ ಕ್ರಿಕೆಟ್ ಆಡುತ್ತಿದ್ದಾಗ ನಾನು ಸ್ಟ್ರೋಕ್ ಅನ್ನು ಸಾಕಷ್ಟು ಅಭ್ಯಾಸ ಮಾಡಿದ್ದೇನೆ ಎಂದು ಸೂರ್ಯಕುಮಾರ್ ಯಾದವ್ ತಮ್ಮ 360 ಡಿಗ್ರಿ ಬ್ಯಾಟಿಂಗ್ ಬಗ್ಗೆ ಹೇಳಿದ್ದಾರೆ.

Story first published: Monday, November 7, 2022, 22:18 [IST]
Other articles published on Nov 7, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+