DEXA Test: ಡೆಕ್ಸಾ ಪರೀಕ್ಷೆ ಕಡ್ಡಾಯಗೊಳಿಸಿದ ಬಿಸಿಸಿಐ : ಡೆಕ್ಸಾ ಪರೀಕ್ಷೆಯ ಬಗ್ಗೆ ಇಲ್ಲಿದೆ ಮಾಹಿತಿ

ಜನವರಿ 1ರಂದು ಮುಂಬೈನಲ್ಲಿ ನಡೆದ ಟೀಂ ಇಂಡಿಯಾ ಕಾರ್ಯಕ್ಷಮತೆ ಪರಿಶೀಲನಾ ಸಭೆಯಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ಈಗ ಯೋ-ಯೋ ಪರೀಕ್ಷೆಯ ಜೊತೆ ಡೆಕ್ಸಾ (DEXA) ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ.
ಗಾಯಗೊಂಡ ಆಟಗಾರರು ಭಾರತ ತಂಡಕ್ಕೆ ಮರಳಬೇಕಾದರೆ ಡೆಕ್ಸಾ (DEXA) ಅಥವಾ ಡ್ಯುಯಲ್ ಎನರ್ಜಿ ಎಕ್-ರೇ ಅಬ್ಸಾರ್ಪ್ಟಿಯೋಮೆಟ್ರಿ ಟೆಸ್ಟ್ (Dual-energy X-ray absorptiometry Test) ನಲ್ಲಿ ಉತ್ತೀರ್ಣರಾಗಬೇಕಿದೆ. ಡೆಕ್ಸಾ ಪರೀಕ್ಷೆಯ ಜೊತೆಗೆ ಯೋ-ಯೋ ಪರೀಕ್ಷೆಯಲ್ಲಿ ಉತ್ತೀರ್ಣವಾದರೆ ಮಾತ್ರ ಆತನಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ದೊರೆಯಲಿದೆ.
ಹಾಗಾದರೆ ಈ ಡೆಕ್ಸಾ ಪರೀಕ್ಷೆ ಎಂದರೇನು ಎನ್ನುವ ಬಗ್ಗೆ ಸಾಕಷ್ಟು ಕುತೂಹಲ ಮೂಡುವುದು ಸಹಜ. ಡೆಕ್ಸಾ ಟೆಸ್ಟ್‌ನಲ್ಲಿ ಸ್ಪೆಕ್ಟ್ರಲ್ ಇಮೇಜಿಂಗ್ ಎನ್ನುವ ವಿಶೇಷ ತಂತ್ರವನ್ನು ಬಳಸಿಕೊಂಡು ಆಟಗಾರನ ಮೂಳೆ ಖನಿಜ ಸಾಂದ್ರತೆಯನ್ನು ನಿರ್ಧರಿಸಲಾಗುತ್ತದೆ.
ಎಕ್ಸ್‌ರೇ ಅಥವಾ ಎಂಆರ್ ಐ ಟೆಸ್ಟ್‌ನಂತೆ ಈ ಟೆಸ್ಟ್ ನಡೆಯುತ್ತದೆ. ಎರುಡು ಎಕ್ಸ್-ರೇ ಕಿರಣಗಳು ವ್ಯಕ್ತಿಯ ಮೂಳೆಯನ್ನು ಸ್ಕ್ಯಾನ್ ಮಾಡುತ್ತವೆ. ಈ ಟೆಸ್ಟ್‌ನಲ್ಲಿ ವ್ಯಕ್ತಿಯನ ಮೂಳೆಯ ಸಾಂದ್ರತೆ ಬಗ್ಗೆ ಸ್ಪಷ್ಟವಾದ ಮಾಹಿತಿ ಸಿಗುವುದರಿಂದ, ಆತನ ಫಿಟ್ನೆಸ್, ಗಾಯದ ಬಗ್ಗೆ ಸ್ಪಷ್ಟ ವಿವರ ಸಿಗಲಿದೆ.

ಡೆಕ್ಸಾ ಪರೀಕ್ಷೆ ಯಾಕೆ ಮುಖ್ಯ?
ಆಟಗಾರನ ಮೂಳೆಯ ಬಲ ಮತ್ತು ಮೂಳೆ ಖನಿಜ ಸಾಂದ್ರತೆಯನ್ನು (Bone Mineral Density) ನಿರ್ಧರಿಸಲು ಡೆಕ್ಸಾ ಪರೀಕ್ಷೆಯನ್ನು ಮಾಡಲಾಗುತ್ತದೆ. ಸಾಮಾನ್ಯ ಜನರಿಗೆ ಹೋಲಿಕೆ ಮಾಡಿದಾಗ ಕ್ರೀಡಾಪಟುಗಳು, ಆಟಗಾರರು ಹೆಚ್ಚಿನ ಮೂಳೆ ಖನಿಜ ಸಾಂದ್ರತೆಯನ್ನು ಹೊಂದಿರುತ್ತಾರೆ.
ಆಟಗಾರರು ಗಾಯಗೊಂಡಾಗ ಮೂಳೆಯ ಬಲ ಮತ್ತು ಖನಿಜ ಸಾಂದ್ರತೆಯ ಮೇಲೆ ಹೆಚ್ಚಿನ ಹೊಡೆತ ಬೀಳುತ್ತದೆ. ಆಟಗಾರರು ನಿರಂತರವಾಗಿ ತರಬೇತಿಯಲ್ಲಿ ತೊಡಗಿಸಿಕೊಂಡಿದ್ದಾಗ ಅವರು ಫಿಟ್ ಆಗಿರುತ್ತಾರೆ, ಮೂಳೆಯ ಆರೋಗ್ಯ ಕೂಡ ಉತ್ತಮವಾಗಿರುತ್ತದೆ. ಆದರೆ, ಗಾಯಗೊಂಡು ವಿಶ್ರಾಂತಿ ಪಡೆಯುವಾಗ ಮೂಳೆ ಖನಿಜ ಸಾಂದ್ರತೆ ಕಡಿಮೆಯಾಗುತ್ತದೆ. ಇದನ್ನು ಪರೀಕ್ಷೆ ಮಾಡಲೆಂದು ಬಿಸಿಸಿಐ ಡೆಕ್ಸಾ ಪರೀಕ್ಷೆಯನ್ನು ಕಡ್ಡಾಯ ಮಾಡಿದೆ.
Ind vs SL 1st T20: ಶಿವಂ ಮಾವಿ ಭಾರತ ತಂಡದ ಆಡುವ ಬಳಗದಲ್ಲಿರಬೇಕು ಎನ್ನಲು ಮೂರು ಕಾರಣಗಳಿವು

ಡೆಕ್ಸಾ ಪರೀಕ್ಷೆಯ ಉಪಯೋಗ
ಗಾಯಗೊಂಡ ಆಟಗಾರರು ತಂಡಕ್ಕೆ ಮರಳುವಾಗ ಅವರು ಎಷ್ಟು ಫಿಟ್ ಆಗಿದ್ದಾರೆ ಎಂದು ಡೆಕ್ಸಾ ಪರೀಕ್ಷೆಯಲ್ಲಿ ನಿಖರವಾಗಿ ತಿಳಿಯಲಿದೆ. ಅನೇಕ ಸಂದರ್ಭದಲ್ಲಿ ಗಾಯಗೊಂಡ ಆಟಗಾರ ಮತ್ತೆ ತಂಡಕ್ಕೆ ವಾಪಸಾಗಿ ಮೊದಲ ಪಂದ್ಯದಲ್ಲೇ ಮತ್ತೆ ಗಾಯಗೊಂಡ ಉದಾಹರಣೆಗಳಿವೆ. ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಬುಮ್ರಾ ಕೂಡ ಇದೇ ರೀತಿ ಮತ್ತೆ ಗಾಯಗೊಂಡಿದ್ದನ್ನು ನೋಡಿದ್ದೇವೆ.
ಆದರೆ, ಡೆಕ್ಸಾ ಪರೀಕ್ಷೆಯಲ್ಲಿ ಆಟಗಾರನ ಮೂಳೆಯ ಬಲ, ಮೂಳೆ ಖನಿಜ ಸಾಂದ್ರತೆ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದ್ದು, ಆಟಗಾರ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದರೆ ಮಾತ್ರ ಅವರಿಗೆ ಕ್ರಿಕೆಟ್‌ಗೆ ಮರಳಲು ಅನುಮತಿ ಸಿಗುತ್ತದೆ, ಇಲ್ಲವಾದಲ್ಲಿ ಅವರಿಗೆ ಮತ್ತೆ ವಿಶ್ರಾಂತಿಗೆ ಸೂಚನೆ ನೀಡಲಾಗುತ್ತದೆ.

ಗಾಯದ ಸಮಸ್ಯೆ ಪರಿಹರಿಸಲು ಬಿಸಿಸಿಐ ನಿರ್ಧಾರ
2022ರಲ್ಲಿ ಭಾರತ ತಂಡವನ್ನು ಬಿಟ್ಟೂ ಬಿಡದಂತೆ ಕಾಡಿದ್ದು ಆಟಗಾರರ ಗಾಯದ ಸಮಸ್ಯೆ. ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ಹರ್ಷಲ್ ಪಟೇಲ್, ಮೊಹಮ್ಮದ್ ಶಮಿ, ರೋಹಿತ್ ಶರ್ಮಾ, ಕೆಎಲ್ ರಾಹುಲ್ ಸೇರಿದಂತೆ ಅನೇಕ ಆಟಗಾರರು ಗಾಯದಿಂದ ಹಲವು ತಿಂಗಳು ಕ್ರಿಕೆಟ್‌ನಿಂದ ದೂರವಿದ್ದರು. ಇದು ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಮೇಲೆ ಭಾರಿ ಪರಿಣಾಮ ಬೀರಿತ್ತು.
2023ರಲ್ಲಿ ಏಕದಿನ ವಿಶ್ವಕಪ್ ಬಹಳ ಮುಖ್ಯವಾಗಿರುವುದರಿಂದ ಬಿಸಿಸಿಐ ಆಟಗಾರರ ಗಾಯದ ಸಮಸ್ಯೆಯ ಬಗ್ಗೆ ಗಂಭೀರವಾಗಿ ಪರಿಗಣಿಸಿದೆ. ಡೆಕ್ಸಾ ಟೆಸ್ಟ್ ಜೊತೆಯಲ್ಲಿ ಯೋ-ಯೋ ಟೆಸ್ಟ್ ಕೂಡ ಕಡ್ಡಾಯವಾಗಿದ್ದು, ಸಂಪೂರ್ಣವಾಗಿ ಫಿಟ್ ಆಗಿದ್ದರೆ ಮಾತ್ರ ಈ ಎರಡು ಟೆಸ್ಟ್‌ನಲ್ಲಿ ಆಟಗಾರ ಉತ್ತೀರ್ಣವಾಗಲು ಸಾಧ್ಯ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications