ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs SL 1st T20: ಶಿವಂ ಮಾವಿ ಭಾರತ ತಂಡದ ಆಡುವ ಬಳಗದಲ್ಲಿರಬೇಕು ಎನ್ನಲು ಮೂರು ಕಾರಣಗಳಿವು

Ind vs SL: Know Why Shivam Mavi Should Include In India Playing XI Against Sri Lanka T20 Series

ಟೀಂ ಇಂಡಿಯಾ 2023ರ ಆರಂಭದಲ್ಲೇ ಶ್ರೀಲಂಕಾ ವಿರುದ್ಧ ಟಿ20 ಸರಣಿ ಆಡಲು ಸಜ್ಜಾಗಿದೆ. ಏಷ್ಯಾಕಪ್ ಚಾಂಪಿಯನ್ನರನ್ನು ಎದುರಿಸಲು ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಟೀಂ ಇಂಡಿಯಾ ಸಜ್ಜಾಗುತ್ತಿದೆ.

ಹಲವು ಹಿರಿಯ ಆಟಗಾರರಿಗೆ ಸರಣಿಯಿಂದ ವಿಶ್ರಾಂತಿ ನೀಡಲಾಗಿದ್ದು, ಯುವ ಕ್ರಿಕೆಟಿಗರಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. ಇದೇ ಮೊದಲ ಬಾರಿಗೆ ಹಲವು ಯುವ ಕ್ರಿಕೆಟಿಗರು ಭಾರತ ತಂಡದಲ್ಲಿ ಅವಕಾಶ ಪಡೆದಿದ್ದು, ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಲು ಕಾಯುತ್ತಿದ್ದಾರೆ.

ರಾಹುಲ್ ತ್ರಿಪಾಠಿ, ಶಿವಂ ಮಾವಿ, ಮುಖೇಶ್ ಕುಮಾರ್ ಈ ಸರಣಿಯಲ್ಲಿ ಆಡುವ ಬಳಗದಲ್ಲಿ ಅವಕಾಶ ಪಡೆಯುವ ಸಾಧ್ಯತೆ ಇದೆ. 2018ರ ಅಂಡರ್-19 ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದ ಬೌಲರ್ ಶಿವಂ ಮಾವಿ.

ಭಾರತ vs ಶ್ರೀಲಂಕಾ ಟಿ20 ಸರಣಿಗೆ ಕ್ಷಣಗಣನೆ: ವೇಳಾಪಟ್ಟಿ, ಸ್ಕ್ವಾಡ್ ಹಾಗೂ ನೇರಪ್ರಸಾರ ಮಾಹಿತಿಭಾರತ vs ಶ್ರೀಲಂಕಾ ಟಿ20 ಸರಣಿಗೆ ಕ್ಷಣಗಣನೆ: ವೇಳಾಪಟ್ಟಿ, ಸ್ಕ್ವಾಡ್ ಹಾಗೂ ನೇರಪ್ರಸಾರ ಮಾಹಿತಿ

ಅಂಡರ್-19 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನದ ನಂತರ ಮಾವಿ ಐಪಿಎಲ್‌ನಲ್ಲಿ ಆಡುವ ಅವಕಾಶ ಪಡೆದರು. ಐಪಿಎಲ್‌ನಲ್ಲಿ ಆಡಿರುವ ಮಾವಿ ಅನುಭವ ಪಡೆದುಕೊಂಡಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಕೂಡ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಶಿವಂ ಮಾವಿ ಯಾಕೆ ಆಡುವ ಬಳಗದಲ್ಲಿ ಸ್ಥಾನ ಪಡೆಯಬೇಕು ಎನ್ನುವುದಕ್ಕೆ ಪ್ರಮುಖವಾಗಿ ಮೂರು ಕಾರಣಗಳನ್ನು ನೋಡಬಹುದಾಗಿದೆ.

145 ಕಿ.ಮೀ. ವೇಗದಲ್ಲಿ ಬೌಲಿಂಗ್

145 ಕಿ.ಮೀ. ವೇಗದಲ್ಲಿ ಬೌಲಿಂಗ್

ಶಿವಂ ಮಾವಿ 145 ಕಿಮೀಗಿಂತ ಹೆಚ್ಚಿನ ವೇಗದಲ್ಲಿ ಬೌಲಿಂಗ್ ಮಾಡುವ ಕೆಲವೇ ಭಾರತೀಯ ವೇಗಿಗಳಲ್ಲಿ ಒಬ್ಬರಾಗಿದ್ದಾರೆ. 2022ರ ಐಪಿಎಲ್‌ನಲ್ಲಿ ಅವರು ರಾಜಸ್ಥಾನ ರಾಯಲ್ಸ್ ವಿರುದ್ಧ 147.8 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದರು.

ಇಷ್ಟು ವೇಗದಲ್ಲಿ ಬೌಲಿಂಗ್ ಮಾಡುವ ಯಾವುದೇ ಬೌಲರ್ ತಂಡದ ಆಸ್ತಿಯಾಗಿದ್ದಾರೆ. ಅವರ ವೇಗದ ಬೌಲಿಂಗ್ ಎದುರಾಳಿ ಬ್ಯಾಟರ್ ಗಳನ್ನು ತಬ್ಬಿಬ್ಬು ಮಾಡುತ್ತದೆ. ಪವರ್ ಪ್ಲೇನಲ್ಲಿ ಬೌಲಿಂಗ್ ಮಾಡುವ ಮೂಲಕ ಮಾವಿ ಆರಂಭದಲ್ಲೇ ವಿಕೆಟ್ ಪಡೆಯಬಹುದು. ಉಮ್ರಾನ್ ಮಲಿಕ್, ಶಿವಂ ಮಾವಿ ಜೋಡಿ ಎದುರಾಳಿಗಳಿಗೆ ಮಾರಕವಾಗುವ ಸಾಮರ್ಥ್ಯ ಹೊಂದಿದ್ದಾರೆ.

 ಐಪಿಎಲ್‌ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ಸಾಧನೆ

ಐಪಿಎಲ್‌ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ಸಾಧನೆ

ಶಿವಂ ಮಾವಿ ಇದುವರೆಗೂ ನಾಲ್ಕು ಐಪಿಎಲ್‌ ಆವೃತ್ತಿಯಲ್ಲಿ ಆಡಿದ್ದಾರೆ. 31.4 ಸರಾಸರಿಯಲ್ಲಿ 30 ವಿಕೆಟ್ ಪಡೆದಿದ್ದಾರೆ. ಅವರ ಎಕಾನಮಿ 8.71 ಇದ್ದು, ಹೆಚ್ಚಿನ ಪಂದ್ಯಗಳಲ್ಲಿ ಆಡುವುದರಿಂದ, ಅನುಭವ ಪಡೆಯುವ ಮೂಲಕ ಅದನ್ನು ಸುಧಾರಿಸಿಕೊಳ್ಳಬಹುದಾಗಿದೆ.

ದೇಶೀಯ ಟಿ20 ಪಂದ್ಯಾವಳಿಯಲ್ಲಿ ಕೂಡ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. 46 ಪಂದ್ಯಗಳನ್ನಾಡಿರುವ ಅವರು, 27.86 ಸರಾಸರಿಯಲ್ಲಿ 46 ವಿಕೆಟ್ ಪಡೆದಿದ್ದಾರೆ. ಅದರಲ್ಲೂ ಹೊಸ ಚೆಂಡಿನಲ್ಲಿ ವಿಕೆಟ್ ಪಡೆಯುವ ಅವರ ಕೌಶಲ್ಯ ಭಾರತ ತಂಡಕ್ಕೆ ಸಹಕಾರಿಯಾಗಲಿದೆ.

ಹಿರಿಯ ವೇಗಿಗಳ ಅಲಭ್ಯತೆ

ಹಿರಿಯ ವೇಗಿಗಳ ಅಲಭ್ಯತೆ

ಇತ್ತೀಚಿನ ದಿನಗಳಲ್ಲಿ ಭಾರತ ತಂಡದಲ್ಲಿ ಗಾಯಾಳುಗಳ ಸಮಸ್ಯೆ ಹೆಚ್ಚಾಗಿದೆ. ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಸೋಲಿಗೆ ಪ್ರಮುಖ ಕಾರಣ ಅನುಭವಿ ವೇಗಿಗಳ ಅಲಭ್ಯತೆ. 2023ರಲ್ಲಿ ಹಿರಿಯ ಆಟಗಾರರು, ಏಕದಿನ ಕ್ರಿಕೆಟ್‌ ಕಡೆಗೆ ಹೆಚ್ಚಿನ ಗಮನ ನೀಡಲಿರುವ ಕಾರಣ ಮಾವಿ ಟಿ20 ಮಾದರಿಯಲ್ಲಿ ತಂಡದ ಪ್ರಮುಖ ಶಕ್ತಿಯಾಗಬಲ್ಲರು.

2024ರ ಟಿ20 ವಿಶ್ವಕಪ್‌ಗಾಗಿ ಕೂಡ ಭಾರತ ತಂಡಕ್ಕೆ ಮಾವಿ ಉತ್ತಮ ಆಯ್ಕೆಯಾಗುತ್ತಾರೆ. ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್ ಜೊತೆ ಮಾವಿ ವೇಗದ ಬೌಲಿಂಗ್‌ ವಿಭಾಗವನ್ನು ಮತ್ತಷ್ಟು ಬಲಪಡಿಸಬಹುದಾಗಿದೆ.

ದೀಪಕ್ ಚಹಾರ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ ಅವರ ಗಾಯ, ಫಿಟ್‌ನೆಸ್ ಸಮಸ್ಯೆ ಕಾಡುತ್ತಿದ್ದು, ಮಾವಿ ಬ್ಯಾಕಪ್ ಆಟಗಾರನಾಗಿ ತಂಡದಲ್ಲಿ ಸ್ಥಾನ ಪಡೆಯಬಹುದು. ಶಿವಂ ಮಾವಿಗೆ ಭಾರತ ತಂಡದಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಇದು ಮುಖ್ಯ ಅವಕಾಶವಾಗಿದೆ.

Story first published: Monday, January 2, 2023, 5:45 [IST]
Other articles published on Jan 2, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X