ಬೆಂಗಳೂರು, ಏಪ್ರಿಲ್ 07: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಆವೃತ್ತಿ ಪಂದ್ಯಾವಳಿ ಭರ್ಜರಿಯಾಗಿ ಸಾಗಿದ್ದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮತ್ತೊಮ್ಮೆ ಯಶಸ್ಸಿನ ಹಾದಿ ಹಿಡಿದಿದೆ. ಈ ನಡುವೆ ಮತ್ತೊಂದು ಹರಾಜು ಪ್ರಕ್ರಿಯೆಗೆ ಸಜ್ಜಾಗುತ್ತಿದೆ. IPL ಮಾಧ್ಯಮ ಹಕ್ಕುಗಾಗಿ ಪ್ರತ್ಯೇಕ ಬಿಡ್ಡಿಂಗ್ ಕಾರ್ಯತಂತ್ರ ಅನುಸರಿಸುತ್ತಿದ್ದು, ಈ ಮೂಲಕ ವಿಶ್ವದ ಅತಿದೊಡ್ಡ ಟೆಕ್ ಕಂಪನಿ, ಮಾಧ್ಯಮ ಕಂಪನಿಗಳನ್ನು ಐಪಿಎಲ್ ನತ್ತ ಸೆಳೆಯುವಂತೆ ಮಾಡಿದೆ.
ಮುಂಬರುವ ಸೀಸನ್ ಗಾಗಿ ಐಪಿಎಲ್ ಮಾಧ್ಯಮ ಹಕ್ಕು ಮಾರಾಟ ಮಾಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮುಂದಾಗಿದ್ದು, ಬಹುಕೋಟಿ ಹರಾಜು ಪ್ರಕ್ರಿಯೆ ಬಹುತೇಕ ಜೂನ್ -ಜುಲೈ ತಿಂಗಳಲ್ಲಿ ನಡೆಯಬಹುದು. ದೊಡ್ಡ ದೊಡ್ಡ ಟೆಕ್ ಕಂಪನಿಗಳು, ಮಾಧ್ಯಮ ಸಂಸ್ಥೆಗಳು ಹರಾಜು ಪ್ರಕ್ರಿಯೆ ಭಾಗವಾಗಲಿವೆ ಎಂಬ ವರದಿ ಬಂದಿದೆ.
ಟೆಕ್ ಲೋಕದ ದಿಗ್ಗಜರಾದ ಅಮೆಜಾನ್, ಫೇಸ್ ಬುಕ್, ಆಪಲ್, ನೆಟ್ ಫ್ಲಿಕ್ ಟೆಕ್ ಲೋಕದ ದಿಗ್ಗಜ ಸಂಸ್ಥೆಗಳಲ್ಲದೆ, ಮಾಧ್ಯಮ ಸಂಸ್ಥೆಗಳಾದ ಡಿಸ್ನಿ, ಜೀ-ಸೋನಿ, ಅಮೆಜಾನ್ ಪ್ರೈಂ, ಟಿವಿ 18 ವಯಾಕಾಂ ಈಗಾಗಲೇ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿವೆ ಎಂದು ಎಕಾನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.

ಪ್ರತ್ಯೇಕ ಬಿಡ್ಡಿಂಗ್
ಟಿವಿ ಪ್ರಸಾರ, ಡಿಜಿಟಲ್, ಉದ್ಘಾಟನಾ ಪಂದ್ಯ, ಪ್ಲೇ ಆಫ್, ಉದ್ಘಾಟನಾ ಸಮಾರಂಭ, ವಿದೇಶದಲ್ಲಿನ ಪ್ರಸಾರ ಹಕ್ಕು ಹೀಗೆ ಪ್ರತ್ಯೇಕ ವಿಭಾಗ ಮಾಡಲಾಗಿದ್ದು, ಎಲ್ಲದ್ದಕ್ಕೂ ಪ್ರತ್ಯೇಕ ಬಿಡ್ಡಿಂಗ್ ಮೊತ್ತ ನಿಗದಿಯಾಗಿದ್ದು, ಸಂಸ್ಥೆಗಳು ಪ್ರತ್ಯೇಕವಾಗಿ ಬಿಡ್ ಸಲ್ಲಿಸಬೇಕಾಗುತ್ತದೆ. ಟಿವಿ ಪ್ರಸಾರ ಬಿಡ್ ಹಾಗೂ ಡಿಜಿಟಲ್ ಬಿಡ್ ಎಂಬ ಎರಡು ಪ್ಯಾಕೇಜ್ ಇವೆ.
ಟಿವಿ ಪ್ರಸಾರ ಬಿಡ್
2023-2027ನೇ ಸಾಲಿನಲ್ಲಿ ಟಿವಿಯಲ್ಲಿ ಐಪಿಎಲ್ ಪಂದ್ಯ ಪ್ರಸಾರದ ಹಕ್ಕು ಮಾರಾಟಕ್ಕೆ ಹರಾಜು ನಡೆಸಲಾಗುತ್ತದೆ. ಬಿಸಿಸಿಐ ಇದಕ್ಕಾಗಿ ಮೂಲಬೆಲೆ 16347.5 ಕೋಟಿ ರು ನಿಂದ18,130 ಕೋಟಿ ರು ಎಂದು ನಿಗದಿ ಪಡಿಸಿದೆ. ಹಾಲಿ ಮೂಲ ಬೆಲೆಗೆ ಹೋಲಿಸಿದರೆ ಶೇ 300ರಷ್ಟು ದರ ಏರಿಕೆಯಾಗಲಿದೆ. ಒಟ್ಟಾರೆ ಟಿವಿ ಪ್ರಸಾರ ಹಕ್ಕು ಮೂಲ ಬೆಲೆ 32, 890 ಕೋಟಿ ರು ಎಂದು ಅಂದಾಜಿಸಲಾಗಿದೆ.
ಇದೇ ಪ್ಯಾಕೇಜ್ ಬಿ ನಲ್ಲಿ ಟಿವಿ ಹಕ್ಕು(ಆಯ್ದ ಪಂದ್ಯಗಳು) ಮೂಲ ಬೆಲೆ 18, 130 ಕೋಟಿ ರು, ಡಿಜಿಟಲ್ ಹಕ್ಕು 1440 ಕೋಟಿ ರು, 1110 ಕೋಟಿ ರು ವಿದೇಶಗಳಲ್ಲಿ ಪ್ರಸಾರ + ಡಿಜಿಟಲ್ ಹಕ್ಕು ಮೊತ್ತವಾಗಿದೆ. ಡಿಜಿಟಲ್ ಹಕ್ಕು 18 ಪ್ರೀಮಿಯರ್ ಪಂದ್ಯಗಳನ್ನು ಒಳಗೊಂಡಿದ್ದು, ಪ್ಲೇ ಆಫ್ ಪಂದ್ಯಗಳು ಸೇರಿವೆ ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಹೇಳಿದ್ದಾರೆ.
ಐಪಿಎಲ್‌ನ ಭವಿಷ್ಯದ ಮೌಲ್ಯವು ಅಂತಹ ಹೆಚ್ಚಿನ ನಿರ್ದಿಷ್ಟ ಪ್ಯಾಕೇಜ್‌ಗಳನ್ನು ರಚಿಸುವಲ್ಲಿ ಅಡಗಿದೆ "ಇದು ವಾಸ್ತವವಾಗಿ ಬ್ಲಾಕ್‌ಗಳನ್ನು ಎತ್ತಿಕೊಳ್ಳುವವರಿಗೆ ಹೆಚ್ಚು ಕೇಂದ್ರೀಕೃತ ಆಟವಾಗಿಸುತ್ತದೆ - IPL ಪ್ರೇಕ್ಷಕರು ಈಗ ಹೆಚ್ಚು ನಿರ್ದಿಷ್ಟವಾಗಿ ಗುರಿಯಾಗಲು ಸಾಕಷ್ಟು ದೊಡ್ಡದಾಗಿದೆ (ಪ್ರದೇಶ-ವಾರು, ಅಭ್ಯಾಸ-ವಾರು, ಆದಾಯ-ವಾರು, ಇತ್ಯಾದಿ) ಮತ್ತು ಅಲ್ಲಿ ಈ ರೀತಿಯ ಪ್ಯಾಕೇಜ್‌ಗಳಿಗೆ ಮೌಲ್ಯವು ಇರುತ್ತದೆ, "ಎಂದು ITW ಕನ್ಸಲ್ಟಿಂಗ್ ಎಂಡಿ ಭೈರವ್ ಶಾಂತ್ ಹೇಳಿದ್ದಾರೆ.
ಕಳೆದ 14 ಆವೃತ್ತಿಗೆ ಹೋಲಿಸಿದರೆ ಮುಂದಿನ ಬಾರಿ ಐಪಿಎಲ್ ಮಾಧ್ಯಮ ಹಕ್ಕು ಭರ್ಜರಿ ಬೆಲೆ ಪಡೆದುಕೊಳ್ಳಲಿದೆ. 10 ತಂಡಗಳು ಐಪಿಎಲ್ 2022ರಲ್ಲಿ ಸೆಣಸುತ್ತಿದ್ದು, ಸದ್ಯ ಸ್ಟಾರ್ ಸ್ಪೋರ್ಟ್ಸ್ ನೇರ ಪ್ರಸಾರದ ಹಕ್ಕು ಹೊಂದಿದೆ. ಲೈವ್ ಪ್ರಸಾರಕ್ಕಾಗಿ 16, 347 ಕೋಟಿ ರು ನೀಡಿದ್ದು, ಮುಂದಿನ ಐದು ವರ್ಷಗಳ ಕಾಲ ಸ್ಟಾರ್ ನೆಟ್ವರ್ಕ್ ಬಳಿ ಪ್ರಸಾರದ ಹಕ್ಕು ಇರಲಿದೆ. ಆದರೆ, ಮುಂದಿನ ಹರಾಜಿನಲ್ಲಿ ಈ ಬೆಲೆ ಸುಮಾರು 45,000 ಕೋಟಿ ರು ನಿಂದ 50, 000 ಕೋಟಿ ರುಗೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಎಕಾನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.