ಇದೇ ಕಾರಣಕ್ಕೆ ಮೊಹಮ್ಮದ್ ಶಮಿ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲಿಲ್ಲ
ಮುಂಬರುವ ಟಿ20 ವಿಶ್ವಕಪ್‌ಗಾಗಿ ಆಯ್ಕೆದಾರರು ಭಾರತ ತಂಡವನ್ನು ಪ್ರಕಟಿಸಿದ್ದಾರೆ. ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುವ ನಿರೀಕ್ಷೆ ಇತ್ತು, ಆದರೆ 15 ಸದಸ್ಯರ ತಂಡದಲ್ಲಿ ಶಮಿ ಸ್ಥಾನ ಪಡೆಯಲಿಲ್ಲ. ಆದರೆ, ಸ್ಟ್ಯಾಂಡ್‌ಬೈ ಆಟಗಾರರ ಪಟ್ಟಿಯಲ್ಲಿ ಮೊಹಮ್ಮದ್ ಶಮಿ ಹೆಸರಿಸಲಾಗಿದೆ.
ಮೊಹಮ್ಮದ್ ಶಮಿಯನ್ನು ತಂಡದಿಂದ ಹೊರಗಿಟ್ಟಿರುವ ಬಗ್ಗೆ ಹಲವು ಮಾಜಿ ಕ್ರಿಕೆಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾದ ವೇಗದ ಪಿಚ್‌ಗಳಲ್ಲಿ ಮೊಹಮ್ಮದ್ ಶಮಿಯಂತಹ ವೇಗದ ಬೌಲರ್ ಇರಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿಶ್ವಕಪ್‌ಗೆ ಆಯ್ಕೆಯಾಗಬೇಕಿದ್ದ ಮೊಹಮ್ಮದ್ ಶಮಿಯನ್ನು ಯಾಕೆ ಕೈಬಿಡಲಾಯಿತು, ಆಯ್ಕೆದಾರರ ಲೆಕ್ಕಾಚಾರ ಏನು ಎನ್ನುವ ವಿಚಾರ ಈಗ ಬಹಿರಂಗವಾಗಿದೆ. ರೋಹಿತ್ ಶರ್ಮಾ, ರಾಹುಲ್ ದ್ರಾವಿಡ್ ಅವರನ್ನೊಳಗೊಂಡ ಟೀಮ್ ಮ್ಯಾನೇಜ್‌ಮೆಂಟ್ ಸ್ಪಿನ್-ಅಟ್ಯಾಕ್‌ನಲ್ಲಿ ವೈವಿಧ್ಯತೆ ಹೊಂದುವ ಕಾರಣಕ್ಕೆ ಮೊಹಮ್ಮದ್ ಶಮಿಯನ್ನು ಕಡೆಗಣಿಸಲಾಗಿದೆ ಎಂದು ಹೇಳಲಾಗಿದೆ.
ಟಿ20 ವಿಶ್ವಕಪ್‌ಗಾಗಿ ಭಾರತ ತಂಡವನ್ನು ಘೋಷಣೆ ಮಾಡುವ ಮುನ್ನ ನಡೆದ ಸಭೆಯಲ್ಲಿ ಮೊಹಮ್ಮದ್ ಶಮಿ ಆಯ್ಕೆ ವಿಚಾರವಾಗಿ ಭಾರಿ ಚರ್ಚೆ ಮಾಡಲಾಗಿದೆ. ಎಲ್ಲಾ ವಿಚಾರಗಳನ್ನು ಅಳೆದು ತೂಗಿದ ನಂತರ ಅವರನ್ನು 15 ಸದಸ್ಯರ ಬಳಗದಿಂದ ಹೊರಗಿಡುವ ತೀರ್ಮಾನ ಮಾಡಲಾಯಿತು ಎಂದು ಮೂಲಗಳು ತಿಳಿಸಿವೆ.

ಅಶ್ವಿನ್ ಬೆಂಬಲಕ್ಕೆ ನಿಂತ ರೋಹಿತ್, ದ್ರಾವಿಡ್
ಮೂಲಗಳ ಪ್ರಕಾರ, ಆಯ್ಕೆ ಸಭೆಯಲ್ಲಿ ಮೊಹಮ್ಮದ್ ಶಮಿ ಮತ್ತು ರವಿಚಂದ್ರನ್ ಅಶ್ವಿನ್ ನಡುವೆ ಯಾರನ್ನು ಆಯ್ಕೆ ಮಾಡಬೇಕು ಎಂದು ಭಾರಿ ಚರ್ಚೆಯಾಗಿದೆ. ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಇಬ್ಬರೂ ಆರ್. ಅಶ್ವಿನ್ ಪರವಾಗಿ ನಿಂತಿದ್ದರಿಂದ, ಆಯ್ಕೆಗಾರರು ಅವರ ಬೇಡಿಕೆಗೆ ತಲೆಬಾಗಿದರು.
ಸ್ಪಿನ್ ಬೌಲಿಂಗ್‌ನಲ್ಲಿ ವೈವಿಧ್ಯತೆ ಸೇರಿಸುವುದರ ಜೊತೆಗೆ, ಡೌನ್ ಅಂಡರ್ ಪಿಚ್‌ಗಳಲ್ಲಿ ಬೌಲಿಂಗ್ ಮಾಡಿದ ಅನುಭವಕ್ಕಾಗಿ ರವಿಚಂದ್ರನ್ ಅಶ್ವಿನ್‌ಗೆ ಆದ್ಯತೆ ನೀಡಲಾಯಿತು ಎಂದು ಹೇಳಲಾಗಿದೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಟಿ20 ಸರಣಿಗೆ ಶಮಿ ಆಯ್ಕೆಯಾಗಿದ್ದಾರೆ.
ಟಿ20 ವಿಶ್ವಕಪ್ ಭಾರತ ತಂಡದಲ್ಲಿ ಈತನನ್ನು ಪರಿಗಣಿಸಬೇಕಿತ್ತು, ಅನ್ಯಾಯವಾಗಿದೆ; ದಾನೀಶ್ ಕನೇರಿಯಾ

ಬೇಸಿಗೆಯಲ್ಲಿ ಆಸ್ಟ್ರೇಲಿಯಾ ಪಿಚ್ ಸ್ಪಿನ್‌ಗೆ ಸಹಕಾರಿ
ಆಸ್ಟ್ರೇಲಿಯಾದ ಬೇಸಿಗೆಯ ಪಿಚ್‌ಗಳು ಸ್ಪಿನ್‌ಗೆ ಸಹಾಯ ಮಾಡುತ್ತದೆ. ಭಾರತ ತಂಡದ ಬೌಲಿಂಗ್ ವಿಭಾಗದಲ್ಲಿ ಎಲ್ಲಾ ವೈವಿಧ್ಯತೆ ಸೇರಿಸುವ ಉದ್ದೇಶದಿಂದ ಅಶ್ವಿನ್ ಆಯ್ಕೆಗೆ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಒಲವು ತೋರಿಸಿದ್ದಾರೆ.
ಹಲವು ಎದುರಾಳಿ ತಂಡಗಳಲ್ಲಿ ಉತ್ತಮ ಎಡಗೈ ಆಟಗಾರರಿದ್ದಾರೆ ಎಂದು ತಂಡದ ಆಡಳಿತ ಮಂಡಳಿ ಅಭಿಪ್ರಾಯಪಟ್ಟಿದೆ. ದೊಡ್ಡ ಹೊಡೆತಗಳ ಎಡಗೈ ಆಟಗಾರರನ್ನು ನಿಯಂತ್ರಿಸಲು ಶಮಿ ಅವರ ವೇಗದ ಬೌಲಿಂಗ್‌ಗಿಂತ ಅಶ್ವಿನ್‌ರ ಸ್ಪಿನ್ ಬೌಲಿಂಗ್ ಸಹಕಾರಿ ಎಂದು ಆಯ್ಕೆ ಸಮಿತಿ ನಿರ್ಧರಿಸಿದೆ.

ಟೀಂ ಇಂಡಿಯಾದಲ್ಲಿ ನಾಲ್ವರು ವೇಗದ ಬೌಲರ್
ಈಗಾಗಲೇ ಆಯ್ಕೆಯಾಗಿರುವ ತಂಡದಲ್ಲಿ ನಾಲ್ವರು ವೇಗದ ಬೌಲರ್ ಇದ್ದಾರೆ. ವರದಿಯಾಗಿರುವಂತೆ ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಹಿಂತಿರುಗಿದ್ದಾರೆ. ನಿರೀಕ್ಷೆಯಂತೆ ಭುವನೇಶ್ವರ್ ಕುಮಾರ್ ತಂಡದಲ್ಲಿದ್ದಾರೆ. ಪವರ್‌ಪ್ಲೇ ಮತ್ತು ಡೆತ್ ಓವರ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಅರ್ಶ್ದೀಪ್ ಸಿಂಗ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದು, ತಂಡದಲ್ಲಿ ಸಮತೋಲನ ತರುವಲ್ಲಿ ಮುಖ್ಯಪಾತ್ರ ವಹಿಸುತ್ತಾರೆ. ಏಷ್ಯಾಕಪ್‌ನಲ್ಲಿ ಶಾರ್ಟ್ ಬಾಲ್‌ಗಳಲ್ಲಿ ಹಾರ್ದಿಕ್ ಪಾಂಡ್ಯ ವಿಕೆಟ್ ಪಡೆದು ಮಿಂಚಿದ್ದರು.

ಬುಮ್ರಾ ಮತ್ತು ಪಟೇಲ್ ಫಿಟ್ನೆಸ್ ಬಗ್ಗೆ ಅನುಮಾನ
"ವಿಶ್ವಕಪ್‌ಗಾಗಿ ಅವರು ಮೊಹಮ್ಮದ್ ಶಮಿಯನ್ನು ಸ್ಟ್ಯಾಂಡ್‌ಬೈ ಆಗಿ ರಚಿಸಿದ್ದಾರೆ ಎಂಬ ಅಂಶವು ಇನ್ನೂ ಬುಮ್ರಾ ಮತ್ತು ಹರ್ಷಲ್ ಅವರ ಫಿಟ್‌ನೆಸ್ ಬಗ್ಗೆ ಅವರಿಗೆ ಇನ್ನೂ ಅನುಮಾನವಿದೆ ಎಂದು ತೋರಿಸುತ್ತದೆ. ಅದಕ್ಕಾಗಿಯೇ ಆಯ್ಕೆಗಾರರ ಮೊಹಮ್ಮದ್ ಶಮಿಯನ್ನು ಸ್ಟಾಂಡ್‌ಬೈನಲ್ಲಿ ಇರಿಸಲು ಬಯಸುತ್ತಾರೆ," ಎಂದು ಮಾಜಿ ರಾಷ್ಟ್ರೀಯ ಆಯ್ಕೆಗಾರ ಸಬಾ ಕರೀಮ್ ತಿಳಿಸಿದ್ದಾರೆ.
ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಕ್ರಿಸ್ ಶ್ರೀಕಾಂತ್ ಮಾತನಾಡಿ, "ನಾನು ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರೆ, ಮೊಹಮ್ಮದ್ ಶಮಿಯನ್ನು ಖಂಡಿತವಾಗಿಯೂ ಆಯ್ಕೆ ಮಾಡುತ್ತಿದ್ದೆ. ಆಸ್ಟ್ರೇಲಿಯಾದ ವೇಗದ ಪಿಚ್‌ಗಳಲ್ಲಿ ಶಮಿ ಉತ್ತಮ ಪ್ರದರ್ಶನ ನೀಡುತ್ತಿದ್ದರು, ಹರ್ಷಲ್ ಪಟೇಲ್ ಬದಲಿಗೆ ಮೊಹಮ್ಮದ್ ಶಮಿಯನ್ನು ಆಯ್ಕೆ ಮಾಡುತ್ತಿದ್ದೆ" ಎಂದು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications