For Quick Alerts
ALLOW NOTIFICATIONS  
For Daily Alerts
 

ಮಿಯಾಂದಾದ್‌ ದಾಖಲೆ ಅಳಿಸಿಹಾಕುವ ಹೊಸ್ತಿಲಲ್ಲಿ ವಿರಾಟ್‌ ಕೊಹ್ಲಿ!

Virat Kohli 2019 vs wi 1st odi

ಪೋರ್ಟ್‌ ಆಫ್‌ ಸ್ಪೇನ್‌, ಆಗಸ್ಟ್‌ 11: ವೆಸ್ಟ್‌ ಇಂಡೀಸ್‌ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿರುವ ಪಾಕಿಸ್ತಾನ ತಂಡದ ಮಾಜಿ ನಾಯಕ ಜಾವೇದ್‌ ಮಿಯಾಂದಾದ್‌ ಅವರ ವಿಶ್ವ ದಾಖಲೆ ಅಳಿಸಿಹಾಕಲು ಟೀಮ್‌ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿಗೆ ಇನ್ನು 19 ರನ್‌ಗಳ ಅಗತ್ಯವಿದೆ.

ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿರುವ ಭಾರತ ತಂಡ ಟಿ20 ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿದೆ. ಆದರೆ, ಗುರುವಾರ ನಡೆಯಬೇಕಿದ್ದ 3 ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯ ಮಳೆಗೆ ಆಹುತಿಯಾದ ಕಾರಣ ವಿರಾಟ್‌ಗೆ ಬ್ಯಾಟಿಂಗ್‌ಗೆ ಇಳಿಯುವ ಅವಕಾಶ ಸಿಗದೇ ಹೋಯಿತು.

ಇದೀಗ ಇಲ್ಲಿನ ಕ್ವೀನ್ಸ್‌ ಪಾರ್ಕ್‌ ಓವಲ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಕೊಹ್ಲಿ 19 ರನ್‌ಗಳನ್ನು ಗಳಿಸಿದರೆ ಮಿಯಾಂದಾದ್‌ ಅವರ 26 ವರ್ಷಗಳ ದಾಖಲೆಯನ್ನು ಅಳಿಸಿಹಾಕಲಿದ್ದಾರೆ. ಮಿಯಾಂದಾದ್‌ ವೆಸ್ಟ್‌ ಇಂಡೀಸ್‌ ವಿರುದ್ಧ 64 ಇನಿಂಗ್ಸ್‌ಗಳಲ್ಲಿ 1930 ರನ್‌ಗಳನ್ನು ದಾಖಲಿಸಿದ್ದಾರೆ. ಕೊಹ್ಲಿ ಭಾನುವಾರ ಈ ದಾಖಲೆ ಮುರಿದರೆ ಕೇವಲ 34 ಇನಿಂಗ್ಸ್‌ಗಳಲ್ಲಿ ಈ ದಾಖಲೆ ತಮ್ಮದಾಗಿಸಿಕೊಳ್ಳಲಿದ್ದಾರೆ.

ಗಯಾನ ಪ್ರಾವಿಯನ್ಸ್‌ನಲ್ಲಿ ಕಳೆದ ಗುರುವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ತಂಡ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿತ್ತು. ಆದರೆ, ಬಿಟ್ಟು ಬಿಡದೇ ಸುರಿಯುತ್ತಿದ್ದ ಮಳೆಯಿಂದಾಗಿ ಪಂದ್ಯ ಆರಂಭಗೊಂಡು ಹಲವು ಬಾರಿ ಅಡಚಣೆ ಅನುಭವಿಸಿತ್ತು. ಕೊನೆಗೆ 13 ಓವರ್‌ಗಳ ಬಳಿಕ ಮಳೆ ನಿಲ್ಲುವ ಸುಳಿವಿಲ್ಲದ ಕಾರಣ ಪಂದ್ಯವನ್ನು ರದ್ದು ಪಡಿಸಲಾಯಿತು.

ಇನ್ನು ಏಕದಿನ ಕ್ರಿಕೆಟ್‌ ಸರಣಿಗೂ ಮುನ್ನ ನಡೆದ ಟಿ20 ಸರಣಿಯಲ್ಲಿ ಕೊಹ್ಲಿ, ಟೀಮ್‌ ಇಂಡಿಯಾ ಪರ ಗರಿಷ್ಠ ರನ್‌ ಸ್ಕೋರರ್‌ ಎನಿಸಿಕೊಂಡರು. ಮೂರು ಪಂದ್ಯಗಳಿಂದ ಕೊಹ್ಲಿ 106 ರನ್‌ಗಳನ್ನು ಗಳಿಸಿದ್ದರು. ಇದರಲ್ಲಿ ಒಂದು ಅರ್ಧಶತಕ ಕೂಡ ಸೇರಿದೆ. ಸರಣಿಯಲ್ಲಿ ವಿಂಡೀಸ್‌ನ ದೈತ್ಯ ಆಲ್‌ರೌಂಡರ್‌ ಕೈರೊನ್‌ ಪೊಲಾರ್ಡ್‌ 3 ಇನಿಂಗ್ಸ್‌ನಲ್ಲಿ 115 ರನ್‌ಗಳೊಂದಿಗೆ ಅತಿ ಹೆಚ್ಚು ರನ್‌ಗಳಿಸಿದ ಬ್ಯಾಟ್ಸ್‌ಮನ್‌ ಆಗಿ ಹೊರಹೊಮ್ಮಿದರು.

Story first published: Sunday, August 11, 2019, 16:34 [IST]
Other articles published on Aug 11, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+