ಹೋಲ್ಡಿಂಗ್ ಪ್ರಕಾರ ಭಾರತ ವಿಶ್ವಕಪ್ ತಂಡ ಈ ಇಬ್ಬರಿಂದಾಗಿ ಗೆಲ್ಲಲಿದೆ!

ನವದೆಹಲಿ, ಮೇ 15: ವೇಗದ ಬೌಲಿಂಗಾಗಿ 'ವಿಸ್ಪರಿಂಗ್ ಡೆತ್' ಬಿರುದನ್ನಿರಿಸಿಕೊಂಡಿರುವ ವೆಸ್ಟ್ ಇಂಡೀಸ್‌ನ ಮಾಜಿ ವೇಗಿ ಮೈಕಲ್ ಹೋಲ್ಡಿಂಗ್ ಪ್ರಕಾರ, ಭಾರತ ವಿಶ್ವಕಪ್ ತಂಡದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ವೇಗಿ ಜಸ್‌ಪ್ರೀತ್ ಬೂಮ್ರಾ ಗೆಲುವಿನ ರುವಾರಿಗಳಾಗಲಿದ್ದಾರೆ.
ಸಂದರ್ಶನವೊಂದರಲ್ಲಿ ವಿಶ್ವಕಪ್ ಕ್ರಿಕೆಟ್ ಬಗ್ಗೆ ಮಾತನಾಡುತ್ತ ಹೋಲ್ಡಿಂಗ್, 'ಇಂಗ್ಲೆಂಡ್‌ನಲ್ಲಿರುವ ಫ್ಲ್ಯಾಟ್ ಪಿಚ್‌ಗಳು ರೂಢಿಯಾಗಿರುವುದರಿಂದ ಜಸ್‌ಪ್ರೀತ್ ಬೂಮ್ರಾ ಮತ್ತು ವಿರಾಟ್ ಕೊಹ್ಲಿ ಭಾರತ ತಂಡದ ಗೆಲುವಿನ ರುವಾರಿಗಳಾಗಲಿದ್ದಾರೆ' ಎಂದಿದ್ದಾರೆ.
ಭಾರತ ತಂಡದಲ್ಲಿರುವ ವಿಶೇಷ ಅಂಶ ಯಾವುದು ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಹೋಲ್ಡಿಂಗ್, ನಾನು ಎರಡು ಹೆಸರುಗಳನ್ನು ಹೇಳಲು ಇಚ್ಛಿಸಿದ್ದೇನೆ. ಅದು ವಿರಾಟ್ ಕೊಹ್ಲಿ ಮತ್ತು ಜಸ್‌ಪ್ರೀತ್ ಬೂಮ್ರಾ. ಭಾರತ ವಿಶ್ವಕಪ್ ಗೆಲ್ಲಲು ಇಬ್ಬರಲ್ಲೂ ಅತ್ಯುತ್ತಮ ಗುಣಗಳಿವೆ' ಎಂದರು.
ವಿಶ್ವಕಪ್‌ನಲ್ಲಿ ನಿಮ್ಮ ನೆಚ್ಚಿನ ತಂಡ ಯಾವುದು ಎಂಬ ಪ್ರಶ್ನೆಗೆ, 'ಒಂದನ್ನೇ ಹೇಳಲಾರೆ. ಜೊತೆಯಾಗಿ ಹೇಳೋದಾದ್ರೆ ಇಂಗ್ಲೆಂಡ್ ಮತ್ತು ಭಾರತ' ಎಂದು ಹೋಲ್ಡಿಂಗ್ ಹೇಳಿದರು. 113 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಹೋಲ್ಡಿಂಗ್ 2.85 ಎಕಾನಮಿಯಂತೆ 249 ವಿಕೆಟ್ ಮತ್ತು 102 ಏಕದಿನ ಇನ್ನಿಂಗ್ಸ್‌ಗಳಲ್ಲಿ 3.33ರ ಎಕಾನಮಿಯಂತೆ 142 ವಿಕೆಟ್ ಪಡೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications