For Quick Alerts
ALLOW NOTIFICATIONS  
For Daily Alerts
 

ಮತ್ತೊಂದು ದಾಖಲೆ ಬರೆದ ವಿರಾಟ್‌: ದೆಹಲಿಗೆ 7 ರನ್‌ ಜಯ

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್‌ ಕೊಹ್ಲಿ ಸದ್ಯ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇವರು ಅಂತಾರಾಷ್ಟ್ರೀಯ ಪಂದ್ಯ ಹಾಗೂ ದೇಶೀಯ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ವಿಜಯ್ ಹಜಾರೆ ಟೂರ್ನಿಯನ್ನು 15 ವರ್ಷಗಳ ಬಳಿಕ ಆಡಿದ ವಿರಾಟ್‌, ಆಡಿದ ಮೊದಲ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಅಬ್ಬರಿಸಿದ್ದಾರೆ. ದೆಹಲಿ ಪರ ಬ್ಯಾಟ್ ಮಾಡಿದ ವಿರಾಟ್‌ ಎರಡನೇ ಪಂದ್ಯದಲ್ಲೂ ವಿರಾಟ್‌ 77 ರನ್ ಬಾರಿಸಿ ಆರ್ಭಟಿಸಿದರು.

ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು ಎದುರಿಸಿದ 77 ಎಸೆತಗಳಲ್ಲಿ 13 ಬೌಂಡರಿ, 1 ಸಿಕ್ಸರ್ ಸಹಾಯದಿಂದ 77 ರನ್‌ ಬಾರಿಸಿದರು. ಈ ಇನಿಂಗ್ಸ್‌ ಮೂಲಕ ವಿರಾಟ್‌ ದೊಡ್ಡ ದಾಖಲೆಯನ್ನು ಬರೆದರು. ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸರಾಸರಿಯನ್ನು ಹೊಂದಿರುವ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಮೂಲಕ ವಿರಾಟ್‌, ಆಸ್ಟ್ರೇಲಿಯಾದ ಮೈಕಲ್‌ ಬೆವನ್‌ ಅವರ ದಾಖಲೆಯನ್ನು ಅಳಿಸಿ ಹಾಕಿದರು.

Kohli Breaks Bevan s World Record as Delhi Edges Out Gujarat in Vijay Hazare Trophy Thriller

ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತ್ಯಧಿಕ ಸರಾಸರಿ ಹೊಂದಿರುವ ಬ್ಯಾಟ್ಸ್‌ಮನ್ಸ್‌

1. ವಿರಾಟ್ ಕೊಹ್ಲಿ (ಭಾರತ): 57.87
2. ಮೈಕೆಲ್ ಬೆವನ್ (ಆಸ್ಟ್ರೇಲಿಯಾ): 57.86
3. ಸ್ಯಾಮ್ ಹೈನ್ (ಇಂಗ್ಲೆಂಡ್): 57.76
4. ಚೇತೇಶ್ವರ ಪೂಜಾರ (ಭಾರತ): 57.01
5. ರುತುರಾಜ್ ಗಾಯಕ್ವಾಡ್ (ಭಾರತ): 56.68


ದೆಹಲಿಗೆ 7 ರನ್‌ ಜಯ

ವಿಜಯ್‌ ಹಜಾರೆ ಟ್ರೋಫಿಯಲ್ಲಿ ದೆಹಲಿ ಸತತ ಎರಡನೇ ಗೆಲುವು ದಾಖಲಿಸಿದೆ. ಬೆಂಗಳೂರಿನ ಹೊರ ವಲಯದಲ್ಲಿ ನಡೆಯುತ್ತಿರುವ ವಿಜಯ್‌ ಹಜಾರೆ ಟ್ರೋಫಿಯ ಡಿ ಗುಂಪಿನ ಪಂದ್ಯದಲ್ಲಿ ದೆಹಲಿ ತಂಡ 7 ರನ್‌ಗಳಿಂದ ಗುಜರಾತ್‌ ತಂಡವನ್ನು ಮಣಿಸಿತು. ಮೊದಲು ಬ್ಯಾಟ್ ಮಾಡಿದ ವಿರಾಟ್‌ ಕೊಹ್ಲಿ, 61 ಎಸೆತಗಳಲ್ಲಿ 13 ಬೌಂಡರಿ, 1 ಸಿಕ್ಸರ್‌ ಸಹಾಯದಿಂದ 77 ರನ್‌ ಸಿಡಿಸಿದರು. ನಾಯಕ ರಿಷಭ್‌ ಪಂತ್‌ 8 ಬೌಂಡರಿ, 2 ಸಿಕ್ಸರ್‌ ನೆರವಿನಿಂದ 70 ರನ್‌ ಬಾರಿಸಿ ಮಿಂಚಿದರು. ಪರಿಣಾಮ ದೆಹಲಿ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 254 ರನ್‌ ಕಲೆ ಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಗುಜರಾತ್ ತಂಡದ ಆರ್ಯ ದೇಸಾಯಿ 8 ಬೌಂಡರಿ, 2 ಸಿಕ್ಸರ್‌ ನೆರವಿನಿಂದ 57 ರನ್‌ ಸಿಡಿಸಿದರು. ಇನ್ನು ಸೌರವ್ ಚೌಹಾಣ್ 49 ರನ್‌ ಬಾರಿಸಿದರು. ಅಂತಿಮವಾಗಿ ಗುಜರಾತ್‌ 47.4 ಓವರ್‌ಗಳಲ್ಲಿ 247 ರನ್‌ಗಳಿಗೆ ಆಲೌಟ್ ಆಯಿತು. ದೆಹಲಿ ತಂಡದ ಪರ ಪ್ರಿನ್ಸ್‌ ಯಾದವ್ 3 ವಿಕೆಟ್‌ ಪಡೆದು ಬೀಗಿದರು.

Story first published: Friday, December 26, 2025, 20:26 [IST]
Other articles published on Dec 26, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+