ಭಾರತದಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಎಸ್‌ಜಿ ಬಾಲ್ ಬಳಕೆಗೆ ವಿರಾಟ್ ಕೊಹ್ಲಿ ಟೀಕೆ

ಹೈದರಾಬಾದ್, ಅಕ್ಟೋಬರ್ 12: ಭಾರತದಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಎಸ್‌ಜಿ ಬಾಲ್ ಬಳಸುವುದನ್ನು ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಟೀಕಿಸಿದ್ದಾರೆ. ಎಸ್‌ಜಿ ಬದಲಿಗೆ ಡ್ಯೂಕ್ಸ್ ಬಾಲ್ ಬಳಕೆಗೆ ಆದ್ಯತೆ ನೀಡಲು ಕೊಹ್ಲಿ ತಿಳಿಸಿದ್ದಾರೆ. (ಚಿತ್ರ ಕೃಪೆ: ಇಎಸ್‌ಪಿಎನ್ ಕ್ರಿಕ್‌ಇನ್ಫೋ).
ಇದಕ್ಕೂ ಮೊದಲು ಎಸ್‌ಜಿ ಬಾಲ್ ಬಳಕೆ ಬಗ್ಗೆ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತನ್ನ ಅಸಮಾಧಾನ ಹೊರ ಹಾಕಿದ್ದರು. ಭಾರತದಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಎಸ್‌ಜಿ ಬಾಲ್ ಗಳನ್ನು ಬಳಸಲಾಗುತ್ತಿದೆ. ಈ ಚೆಂಡು ಟೆಸ್ಟ್ ಕ್ರಿಕೆಟ್ ಗೆ ಅಷ್ಟೊಂದು ಪೂರಕವಾಗಿಲ್ಲ. ಈ ಬಗ್ಗೆ ಪರಿಶೀಲನೆಯಾಗಬೇಕು ಎಂದು ಅಶ್ವಿನ್ ಹೇಳಿದ್ದರು.
ರಾಜ್ ಕೋಟ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಬಳಿಕ ಮಾತನಾಡಿದ್ದ ಅಶ್ವಿನ್, ಎಸ್‌ಜಿ ಬಾಲ್ ಬಳಸುತ್ತಿರುವುದನ್ನು 'ದೊಡ್ಡ ನಿರಾಸೆ' ಎನ್ನುವ ಮೂಲಕ ಬೇಸರ ಹೊರ ಹಾಕಿದ್ದರು. ಈಗ ಕೊಹ್ಲಿ ಕೂಡ ಭಾರತದಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಕಳೆದು ಎರಡು ದಶಕಗಳಿಂದ ಬಳಸಲಾಗುತ್ತಿರುವ ಈ ಎಸ್‌ಜಿ ಬಾಲ್‌ಗಳ ವಿರುದ್ಧ ಮಾತೆತ್ತಿದ್ದಾರೆ.

ಯಾಕೀ ಅಸಮಾಧಾನ?
ಭಾರತದಲ್ಲಿ ನಡೆಸಲಾಗುವ ಟೆಸ್ಟ್ ಕ್ರಿಕೆಟ್ ನಲ್ಲಿ ಎಸ್‌ಜಿ ಬಾಲ್ ಗಳನ್ನು ಬಳಸುತ್ತಿರುವ ಬಗ್ಗೆ ನಾಯಕ ಕೊಹ್ಲಿಗೂ ಸೇರಿದಂತೆ ಕೆಲ ಆಟಗಾರರಿಗೆ ನಿರಾಶೆ ಆಗಲು ಕಾರಣ ಬಾಲ್ ನ ಗುಣಮಟ್ಟ. ಡ್ಯೂಕ್ಸ್ ಬಾಲ್‌ಗಳಿಗೆ ಹೋಲಿಸಿದರೆ ಎಸ್‌ಜಿ ಬಾಲ್ ಗಳ ಗುಣಮಟ್ಟ ಚೆನ್ನಾಗಿಲ್ಲ ಎಂಬುದು ಆಟಗಾರರ ಅಂಬೋಣ.

ಬೇಗನೆ ಸವೆಯುತ್ತೆ
ಎಸ್‌ಜಿ ಬಾಲ್ ಗಳ ಬಗ್ಗೆ ಮಾತನಾಡುತ್ತ ಕೊಹ್ಲಿ, ಬರೀ ಐದು ಓವರ್ ಗಳು ಮುಗಿಯುವಷ್ಟರಲ್ಲೇ ಚೆಂಡಿನ ಮೇಲ್ಪದರ ಸವೆಯಲಾರಂಭಿಸುತ್ತೆ. ಹೀಗಾದಾಗ ಆಡೋದು ಹ್ಯಾಗೆ? ಈ ಮೊದಲು ಬಾಲ್ ನ ಗುಣಮಟ್ಟ ಕೊಂಚ ಚೆನ್ನಾಗೇ ಇತ್ತು. ಆದರೆ ಈಗೀಗ ಆ ಗುಣಮಟ್ಟ ಕೆಳಗಿಳಿಯತೊಡಗಿದೆ. ಇದು ಯಾಕೆಂದೇ ನನಗೆ ಅರ್ಥಾಗುತ್ತಿಲ್ಲ' ಎಂದಿದ್ದಾರೆ.

ಉತ್ತಮ ಗುಣಮಟ್ಟದ ಬಾಲ್ ಡ್ಯೂಕ್ಸ್
ಡ್ಯೂಕ್ಸ್ ಬಾಲ್ ಗಳಿಗೆ ಹೋಲಿಸಿದರೆ ಎಸ್‌ಜಿ ಬಾಲ್ ಗಳ ಗುಣಮಟ್ಟ ಚೆನ್ನಾಗಿಲ್ಲ. ಇದೇ ಕಾರಣಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಾಗಿ ಡ್ಯೂಕ್ಸ್ ಬಾಲ್ ಗಳನ್ನೇ ಟೆಸ್ಟ್ ಕ್ರಿಕೆಟ್ ನಲ್ಲಿ ಬಳಸಲಾಗುತ್ತಿದೆ. ಆದರೆ ಭಾರತ ಮಾತ್ರ ಈಗಲೂ ಎಸ್‌ಜಿ ಚೆಂಡುಗಳನ್ನೇ ನೆಚ್ಚಿಕೊಂಡಿದೆ ಎನ್ನುತ್ತಾರೆ ಕೊಹ್ಲಿ.

ಸಂದರ್ಭಗಳಿಗೆ ಹೊಂದಿಕೊಳ್ಳುತ್ತೆ
'ಡ್ಯೂಕ್ಸ್ ಈಗಲೂ ಉತ್ತಮ ಗುಣಮಟ್ಟವನ್ನು ಹೊಂದಿದೆ. ಕೂಕಬುರ ಕೂಡ ಗುಣಮಟ್ಟ ಉಳಿಸಿಕೊಂಡಿದೆ. ಕೂಕಬುರ ಏನೇ ಮಿತಿಗಳನ್ನು ಒಳಗೊಂಡಿರಲಿ, ಆದರೆ ಗುಣಮಟ್ಟದ ವಿಚಾರದಲ್ಲಿ ಅದು ರಾಜಿಯಾಗಿಲ್ಲ. ಡ್ಯೂಕ್ಸ್ ಚೆಂಡು ಟೆಸ್ಟ್ ಕ್ರಿಕೆಟ್ ನ ಸಂದರ್ಭಗಳಿಗೆ ಹೊಂದಿಕೊಳ್ಳುತ್ತೆ ಕೂಡ' ಎಂದು ಕೊಹ್ಲಿ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications