ಗಂಭೀರ್ ಪಡೆಯಲ್ಲಿ ಕೊಹ್ಲಿ, ಧವನ್ ಬ್ಯಾಟಿಂಗ್
ನವದೆಹಲಿ, ಡಿ. 04: ಟೀಂ ಇಂಡಿಯಾ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ, ಪ್ರಮುಖ ಬ್ಯಾಟ್ಸ್ ಮನ್ ಶಿಖರ್ ಧವನ್ ಅವರು ಗೌತಮ್ ಗಂಭೀರ್ ನಾಯಕತ್ವದಲ್ಲಿ ಆಡಲಿದ್ದಾರೆ. ದೆಹಲಿ ಏಕದಿನ ತಂಡಕ್ಕೆ ಇಬ್ಬರು ಆಟಗಾರರು ಆಯ್ಕೆಯಾಗಿದ್ದಾರೆ. ವಿಜಯ ಹಜಾರೆ ಏಕದಿನ ಟ್ರೋಫಿ ಡಿಸೆಂಬರ್ 10 ರಿಂದ 18 ರ ತನಕ ನಡೆಯಲಿದೆ.
ಶ್ರೀಲಂಕಾದಲ್ಲಿ ಭಾರತ ಹಾಗೂ ಪಾಕಿಸ್ತಾನ ಏಕದಿನ ಸರಣಿ ನಡೆಯುವುದು ಅನುಮಾನವಾಗಿದೆ. ಮುಂದಿನ ಏಕದಿನ ಸರಣಿ ಆಸ್ಟ್ರೇಲಿಯಾದ ವಿರುದ್ಧ ಜನವರಿಯಲ್ಲಿ ನಡೆಯಲಿದೆ. ಹೀಗಾಗಿ ಅಭ್ಯಾಸಕ್ಕಾಗಿ ಪ್ರಮುಖ ಆಟಗಾರರು ವಿಜಯ್ ಟ್ರೋಫಿಯಲ್ಲಿ ಆಡಲು ಮುಂದಾಗಿದ್ದಾರೆ.

ಪಾಕಿಸ್ತಾನ ಸರಣಿ ಆರಂಭವಾದರೂ ದೆಹಲಿ ತಂಡವನ್ನು ಹಿರಿಯ ಆಟಗಾರರು ತೊರೆದರೂ ಬದಲಿ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ವಿರಾಟ್ ಕೊಹ್ಲಿ ಅವರು 2013ರಲ್ಲಿ ದೆಹಲಿ ಪರ ಚಾಂಪಿಯನ್ ಟ್ರೋಫಿಯಲ್ಲಿ ಆಡಿದ್ದರು.
ಆಗ ತಂಡದಲ್ಲಿ ವಿರೇಂದರ್ ಸೆಹ್ವಾಗ್ ಹಾಗೂ ಗೌತಮ್ ಗಂಭೀರ್ ಅವರು ತಂಡದಲ್ಲಿದ್ದರು. ವೇಗಿ ಅಶೀಶ್ ನೆಹ್ರಾ ಅವರನ್ನು ಮತ್ತೊಮ್ಮೆ ಏಕದಿನ ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.
ತಂಡ: ಗೌತಮ್ ಗಂಭೀರ್ (ನಾಯಕ), ಉನ್ಮುಕ್ತ್ ಚಂದ್, ಶಿಖರ್ ಧವನ್, ವಿರಾಟ್ ಕೊಹ್ಲಿ, ನಿತೀಶ್ ರಾಣಾ, ಮಿಲಿಂದ್ ಕುಮಾರ್, ಮನನ್ ಶರ್ಮ, ಪವನ್ ನೇಗಿ, ಅಶಿಶ್ ನೆಹ್ರಾ, ಪ್ರದೀಪ್ ಸಾಂಗ್ವಾನ್, ಇಶಾಂತ್ ಶರ್ಮ, ನವ್ದೀಪ್ ಸೈನಿ, ಸುಬೋಧ್ ಭಾಟಿ, ಶಿವಂ ಶರ್ಮ, ರಾಹುಲ್ ಯಾದವ್(ವಿಕೆಟ್ ಕೀಪರ್)
ಸ್ಟಾಂಡ್ ಬೈ: ಧ್ರುವ್ ಶೋರೆ (ಶಿಖರ್ ಧವನ್), ವೈಭವ್ ರಾವ; (ವಿರಾಟ್ ಕೊಹ್ಲಿ), ವಿಕಾಸ್ ಟೊಕಸ್ (ಇಶಾಂತ್ ಶರ್ಮ)
(ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications