Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೆನಿಸ್ ದಂತಕತೆ ರೋಜರ್‌ ಫೆಡರರ್ ಭೇಟಿ ಮಾಡಿದ ಕ್ರಿಕೆಟ್ ದೈತ್ಯ ಕೊಹ್ಲಿ

Kohli meets Federer on the sidelines of Australian Open in Melbourne

ಮೆಲ್ಬರ್ನ್, ಜನವರಿ 19: ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಏಕದಿನ ಸರಣಿ ಜಯಿಸಿದ ಬಳಿಕ ಬಿಡುವಿನ ವೇಳೆಯನ್ನು ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಭಿನ್ನವಾಗಿ ಕಳೆದಿದ್ದಾರೆ. ಪಂದ್ಯದ ಬಳಿಕ ವಿರಾಟ್-ಅನುಷ್ಕಾ ಶರ್ಮಾ ಜೋಡಿ ಟೆನಿಸ್ ದಂತಕತೆ ರೋಜರ್ ಫೆಡರರ್ ಅವರನ್ನು ಭೇಟಿಯಾಗಿದೆ.

ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಶುಕ್ರವಾರ (ಜನವರಿ 18) ಮುಕ್ತಾಯಗೊಂಡ ಭಾರತ-ಆಸ್ಟ್ರೇಲಿಯಾ 3ನೇ ಏಕದಿನ ಪಂದ್ಯದಲ್ಲಿ ಭಾರತ 7 ವಿಕೆಟ್ ಭರ್ಜರಿ ಗೆಲುವನ್ನಾಚರಿಸಿತು. ಪಂದ್ಯ ಮುಗಿದ ಮೇಲಿನ ಬಿಡುವಿನ ವೇಳೆಯನ್ನು ಕೊಹ್ಲಿ-ಅನುಷ್ಕಾ ದಂಪತಿ ಫೆಡರರ್ ಜೊತೆಗೆ ಕಳೆದಿದೆ.

ಆಸ್ಟ್ರೇಲಿಯಾ ಓಪನ್ ಗ್ರ್ಯಾಂಡ್‌ಸ್ಲ್ಯಾಮ್ ಟೂರ್ನಿಯ 4ನೇ ಸುತ್ತಿಗೆ ಪ್ರವೇಶಿಸಿರುವ ಹಾಲಿ ಚಾಂಪಿಯನ್ ಫೆಡರರ್ ಒಟ್ಟು 20 ಗ್ರ್ಯಾಂಡ್‌ಸ್ಲ್ಯಾಮ್ ಜಯಿಸಿದ್ದಾರೆ. ಆಸ್ಟ್ರೇಲಿಯಾ ಓಪನ್ ಟೂರ್ನಿ ನಡೆಯುವಲ್ಲಿಗೆ ಭೇಟಿ ನೀಡಿದ್ದ ಅನುಷ್ಕಾ-ವಿರಾಟ್, ವಿಶ್ವ ನಂ.3ನೇ ಆಟಗಾರ ಫೆಡರರ್ ಜೊತೆಗಿನ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ತೋರಿಸಿಕೊಂಡಿದ್ದಾರೆ.

ಟೆನಿಸ್ ದಂತಕತೆ ಫೆಡರರ್ ಜೊತೆಗೆ ತಾನು ಮತ್ತು ತನ್ನ ಪತ್ನಿ ಅನುಷ್ಕಾ ಶರ್ಮಾ ಜೊತೆಗಿರುವ ಚಿತ್ರವನ್ನು ವಿರಾಟ್ ತನ್ನ ಇನ್ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಿದ್ದಾರೆ. ಜೊತೆಗೆ 'ಆಸ್ಟ್ರೇಲಿಯಾ ಓಪನ್‌ನಲ್ಲಿದ್ದು ತುಂಬಾ ಒಳ್ಳೆಯ ದಿನವನ್ನು ಕಳೆದೆವು. ಆಸ್ಟ್ರೇಲಿಯನ್ ಸಮ್ಮರ್ (ಬೇಸಗೆ) ಕಳೆಯಲು ಇದೊಂದು ಅದ್ಭುತ ವಿಧಾನ. ನಾನಿದಕ್ಕೆ ಧನ್ಯ' ಎಂಬ ಸಾಲನ್ನೂ ಕೊಹ್ಲಿ ಚಿತ್ರದ ಜೊತೆ ಸೇರಿಸಿಕೊಂಡಿದ್ದಾರೆ.

Story first published: Saturday, January 19, 2019, 15:51 [IST]
Other articles published on Jan 19, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+